Kannada News Photo gallery sun changes his path movement from december 16 know its effect on zodiac signs in kannada
Dhanurmasa: ಧನುರ್ ಸಂಕ್ರಾಂತಿ ಆರಂಭ – ಸೂರ್ಯ ಪಥ ಬದಲಾವಣೆಯಿಂದ ಯಾವ ರಾಶಿಯ ಮೇಲೆ ಏನು ಪರಿಣಾಮ?
Surya Rashi Parivartan 2021: ಧನು ಸಂಕ್ರಾಂತಿ ಅಂದರೆ ಸೂರ್ಯ ದೇವ ತನ್ನ ಪಥವನ್ನು ಬದಲಿಸುವ ಘಳಿಗೆ. ಅಂದರೆ ಸೂರ್ಯ ವೃಶ್ಚಿಕ ರಾಶಿಯಿಂದ ತನ್ನ ಯಾತ್ರೆಯನ್ನು ಮುಗಿಸಿ, ಧನು ರಾಶಿಯೊಳಗೆ ಪ್ರವೇಶಿಸುವ ಸಮಯ ಇದು. ಇದು ಡಿಸೆಂಬರ್ 16 ಗುರುವಾರದಿಂದ ಆರಂಭವಾಗಿದೆ. ಇದು 2022 ಜನವರಿ 14 ಮಧ್ಯಾಹ್ನ 2 ಗಂಟೆವರೆಗೂ ಇರುತ್ತದೆ. ಅದಾದ ಬಳಿಕ ಮಕರ ರಾಶಿಗೆ ಪ್ರವೇಶಗೊಳ್ಳುತ್ತಾನೆ. ಹಾಗಾದರೆ ಸೂರ್ಯ ದೇವ ಧನು ರಾಶಿಯಲ್ಲಿ ವಿರಾಜಮಾನವಾಗಿರುವಾಗ ಇತರೆ ರಾಶಿಗಳ ಮೇಲೆ ಯಾವ ಪ್ರಭಾವ/ ಪರಿಣಾಮ ಇರುತ್ತದೆ ಎಂಬುದನ್ನು ತಿಳಿಯೋಣ (Sun in Sagittarius).
1. ಮೇಷ (Aries):
ಮೇಷ ರಾಶಿಯಲ್ಲಿ ಸೂರ್ಯನ ಪ್ರಭಾವ ಚೆನ್ನಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಧರ್ಮ ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ವೃದ್ಧಿಸುತ್ತದೆ. ನೌಕರಿಯಲ್ಲಿ ಪದೋನ್ನತಿ ಲಭಿಸುತ್ತದೆ. ಯಶಸ್ಸು ಕಟ್ಟಿಟ್ಟಬುತ್ತಿ. ತಮ್ಮ ಸಾಹಸ ಮತ್ತು ಪರಾಕ್ರಮಗಳಿಂದ ವಿಷಮ ಪರಿಸ್ಥಿತಿಗಳಲ್ಲಿಯೂ ವಿಜಯ ಪ್ರಾಪ್ತಿಯಾಗುತ್ತದೆ.
1 / 12
2. ವೃಷಭ (Taurus):
ಮೇಷ ರಾಶಿಯಲ್ಲಿ ಸೂರ್ಯನ ಪ್ರಭಾವ ಅನಿರೀಕ್ಷಿತ ರೂಪದಲ್ಲಿ ಆಗಿಬಿಡುತ್ತದೆ. ಯಶಸ್ಸು ಮತ್ತು ಸನ್ಮಾನಗಳಿದ್ದರೂ ಯಾವುದೋ ಕಾಣದ ಅಶಾಂತಿಯ ಸುಳಿ ಧುತ್ತನೆ ಎದುರಾಗಿಬಿಡುತ್ತದೆ. ಇದರಿಂದ ಮನಸ್ಸಿನಲ್ಲಿ ಆಶಾಂತಿ ಮೂಡುತ್ತದೆ. ಮಾತಾ ಪಿತರ ಕುರಿತು ಚಿಂತೆಗಳು ಏಳುತ್ತವೆ. ಮಿತ್ರರೋ ಅಥವಾ ಸಮೀಪದ ಬಂಧಗಳಿಂದ ಅಪ್ರಿಯ ಸಮಾಚಾರ ಕೇಳಿಬರುತ್ತದೆ.
2 / 12
3. ಮಿಥುನ (Gemini):
ಮಿಥುನ ರಾಶಿಯಲ್ಲಿ ಸೂರ್ಯನ ಪ್ರಭಾವದಿಂದ ದಾಂಪತ್ಯ ಜೀವನ ಸಾಮಾನ್ಯವಾಗಿಯೇ ಇರುತ್ತದೆ. ಅವಿವಾಹಿತರಿಗೆ ಮದುವೆಗಳು ಸ್ವಲ್ಪ ವಿಳಂಬವಾಗಬಹುದು. ಕಾರ್ಯ ಕ್ಷೇತ್ರಗಳಲ್ಲಿ, ವ್ಯಾಪಾರಗಳಲ್ಲಿ ಔನ್ನತ್ಯ ಸಾಧಿಸಬಹುದು. ಆದ್ರೆ ಈ ರಾಶಿಯವರು ಷೇರು ವ್ಯಾಪಾರದಲ್ಲಿ ಕೈಹಾಕುವುದು ಬೇಡ. ಯಾವುದೇ ಸರ್ಕಾರಿ ಕೆಲಸಗಳಿಗೆ ಇದು ಪ್ರಶಸ್ತ ಸಮಯ.
3 / 12
4. ಕರ್ಕಾಟಕ (Cancer):
ಕರ್ಕ ರಾಶಿ ಜಾತಕದವರಿಗೆ ಪಥ ಬದಲಿಸಿದ ಸೂರ್ಯನ ಪ್ರಭಾವದಿಂದ ವಿಶೇಷ ಪ್ರಯೋಜನವಾಗುವುದು. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಯ ಲಭಿಸುವುದು. ನಿಮಗೆ ಯಾಋಉ ಕೆಟ್ಟವರು ಅನ್ನಿಸಿದ್ದರೋ ಅವರು ಮುಂದೆ ಬಂದು ನಿಮಗೆ ಒಳ್ಳೆಯದನ್ನೇ ಮಾಡುತ್ತಾರೆ.
4 / 12
5. ಸಿಂಹ (Leo):
ಸಿಂಹ ಜಾತಕದವರಿಗೆ ಪಥ ಬದಲಿಸಿದ ಸೂರ್ಯನ ಪ್ರಭಾವ ಉತ್ತಮವಾಗಿಯೇ ಇರುತ್ತದೆ. ವಿಜ್ಞಾನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಇದು ತುಂಬಾ ಅನುಕೂಲಕರ ಸಮಯವಾಗಿದೆ. ಪ್ರೇಮ ಸಂಬಂಧಗಳಲ್ಲಿ ನಿರಾಶೆಯಾಗುವುದು ಖಚಿತ. ಕುಟುಂಬಸ್ಥರ ಸಹಯೋಗದಿಂದ ಅದನ್ನೆಲ್ಲಾ ಮೀರಲಿದ್ದೀರಿ. ಪರಿವಾರದವರು ನಿಮ್ಮ ಕೈಹಿಡಿಯಲಿದ್ದಾರೆ.
5 / 12
6. ಕನ್ಯಾ (Virgo):
ಕನ್ಯಾ ರಾಶಿ ಜಾತಕದವರ ಮೇಲೆ ಪಥ ಬದಲಿಸಿದ ಸೂರ್ಯ ಅನಿರೀಕ್ಷಿತವಾದ ಪ್ರಭಾವ ಬೀರಬಲ್ಲನು. ಏಳುಬೀಳುಗಳ ಸಾಮಾನ್ಯವಾಗಿರುತ್ತವೆ. ಅಪ್ರಿಯ ಸಮಾಚಾರ ಕೇಳಿಬರುತ್ತದೆ. ಅಪ್ಪ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
6 / 12
7. ತುಲಾ (Libra):
ತುಲಾ ರಾಶಿ ಜಾತಕದವರ ಮೇಲೆ ಪಥ ಬದಲಿಸಿದ ಸೂರ್ಯ ತೃತೀಯ ಹಂತದ ರೂಪದಲ್ಲಿ ಪ್ರಭಾವ ಬೀರುವುದು ಗೋಚರವಾಗಲಿದೆ. ಈ ರಾಶಿಯವರಿಗೆ ತುಂಬಾ ಒಳ್ಳೆಯ ಸಫಲತೆ ಪ್ರಾಪ್ತಿಯಾಗುತ್ತದೆ. ಯಾವುದೇ ಹೊಸ ಕಾರ್ಯ ಆರಂಭಿಸಿದರೂ ಶುಭದಾಯಕವಾಗಿರುತ್ತದೆ. ನಿಮ್ಮಲ್ಲಿ ಸೂರ್ಯ ದೇವನಂತೆ ಪ್ರಖರವಾದ ಶಕ್ತಿ ಉದಯಿಸಿ ವಿಷಮ ಪರಿಸ್ಥಿತಿಗಳು ಎದುರಾದರೂ ಸಲೀಸಾಗಿ ವಿಜಯ ಪ್ರಾಪ್ತಿಯಾಗುತ್ತದೆ. ಯಾರೊಂದಿಗೂ ಜಗಳ ಕಾಯಬೇಡಿ.
7 / 12
8. ವೃಶ್ಚಿಕ (Scorpio):
ವೃಶ್ಚಿಕ ರಾಶಿ ಜಾತಕದವರ ಮೇಲೆ ಪಥ ಬದಲಿಸಿದ ಸೂರ್ಯನು ಎರಡನೆಯ ಧನ ಭಾವದಲ್ಲಿ ಗೋಚರವಾಗುತ್ತಾನೆ. ಇದರಿಂದ ಮಿಶ್ರ ಫಲ ಪ್ರಾಪ್ತಿಯಾಗುತ್ತದೆ. ಆರೋಗ್ಯದ ಮೇಲೆ ನಿಗಾ ಇರಲಿ. ಕುಟುಂಬದಲ್ಲಿ ಐಕ್ಯತೆ ಸಾಧಿಸಿಟ್ಟುಕೊಂಡಿರಿ. ಇದರಿಂದ ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ಸಲೀಸಾಗಿ ತೊಂದರೆಗಳು ದೂರವಾಗುವವು.
8 / 12
9. ಧನು (Sagittarius):
ಧನು ರಾಶಿಗೆ ಪಥ ಬದಲಿಸಿದ ಸೂರ್ಯನು ಧನು ರಾಶಿ ಜಾತಕದವರ ಮೇಲೆ ಅಪಾರ ಪ್ರಭಾವ ಬೀರುವನು. ಯಾವುದೇ ಕಾರ್ಯಭಾದೆಗಳು ಇದ್ದರೂ ನಿವಾರಣೆಯಗಾಗುವವು. ಖಾಸಾ ಜೀವನದಲ್ಲಿ ಸಂಬಂಧಗಳು ಉತ್ತಮವಾಗಿ ಇರುವವು. ಮದುವೆ ಸಂಬಂಧಗಳು ಬೇಗನೇ ಕೈಗೂಡುವವು.
9 / 12
10. ಮಕರ (Capricorn):
ಧನು ರಾಶಿಗೆ ಪಥ ಬದಲಿಸಿದ ಸೂರ್ಯನು ಮಕರ ಜಾತಕದವರ ಮೇಲೆ ಅಪ್ರಯತ್ನಶೀಲವಾಗಿ ಪ್ರಭಾವ ಬೀರುವನು. ಏಳು ಬೀಳುಗಳು ಹೆಚ್ಚಾಗುವವು. ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾದೀತು. ಯಾವುದೇ ವಿವಾದದಲ್ಲಿ ಸಿಲುಕಬೇಡಿ. ಹಣವನ್ನು ಸಾಲ ನೀಡ ಬೇಡಿ.
10 / 12
11. ಕುಂಭ (Aquarius):
ಧನು ರಾಶಿಗೆ ಪಥ ಬದಲಿಸಿದ ಸೂರ್ಯನು ಕುಂಭ ಜಾತಕದವರ ಮೇಲೆ ಲಾಭಭಾವದಲ್ಲಿ ಗೋಚರಿಸುತ್ತಾನೆ. ತುಂಬಾ ಒಳ್ಳೆಯ ಪ್ರಯೋಜನಗಳು ಆಗುವವು. ನಿಮ್ಮ ಸಾಧನೆಗಳು ಹೆಚ್ಚಾಗುವವು. ಕೊಟ್ಟ ಸಾಲವೂ ಮರಳಿ ನಿಮ್ಮ ಕೈಗೆ ಬರುತ್ತದೆ. ಪ್ರೇಮ ಸಂಬಂಧೀ ವಿಚಾರಗಳಲ್ಲಿ ಉದಾಸೀನತೆ ಗೋಚರಿಸುತ್ತದೆ. ಇದರಿಂದ ಚಿಂತೆಗಳು ಕಾಣಿಸಿಕೊಳ್ಳುತ್ತವೆ.
11 / 12
12. ಮೀನ (Pisces):
ಮೀನ ರಾಶಿ ಜಾತಕದವರ ಮೇಲೆ ಪಥ ಬದಲಿಸಿದ ಸೂರ್ಯ ಹತ್ತನೆಯ ಕರ್ಮ ಭಾವದಲ್ಲಿ ಗೋಚರವಾಗುತ್ತಾನೆ. ಇದು ನಿಮಗೆ ವರವಾಗಲಿದೆ. ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಯಶಸ್ಸು ಕಾಣುತ್ತೀರಿ. ಮಾತಾಪಿತರ ಆರೋಗ್ಯ, ದೇಖರೇಖಿ ಬಗ್ಗೆ ಕಾಳಜಿ ಇರಲಿ.