ದೇವಾಲಯಕ್ಕೆ ಭೇಟಿ ನೀಡಿದ ತಮನ್ನಾ ಭಾಟಿಯಾ: ಇಲ್ಲಿವೆ ಚಿತ್ರಗಳು
Tamannah Bhatia: ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ತಮನ್ನಾ ಭಾಟಿಯಾ, ವೈಯಕ್ತಿಕವಾಗಿ ಬಹಳ ಧಾರ್ಮಿಕ ವ್ಯಕ್ತಿ. ಇದೀಗ ತಮ್ಮ ಪ್ರೀತಿಪಾತ್ರರೊಡನೆ ದೇವಾಲಯಕ್ಕೆ ತೆರಳಿ, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
1 / 8
ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ತಮನ್ನಾ ಭಾಟಿಯಾ, ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದುಂಟು ಆದರೆ ಅವರು ಧಾರ್ಮಿಕ ವ್ಯಕ್ತಿ.
2 / 8
ದೇವರ ಬಗ್ಗೆ ಅಪಾರ ಭಕ್ತಿ, ಶ್ರದ್ಧೆಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಆಗಾಗ್ಗೆ ದೂರ-ದೂರದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ.
3 / 8
ಇದೀಗ ತಮನ್ನಾ ಭಾಟಿಯಾ ಗೌಹಟಿಯ ಕಾಮಾಕ್ಯ ದೇವಾಲಯಕ್ಕೆ ಕುಟುಂಬ ಸದಸ್ಯರೊಟ್ಟಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
4 / 8
ಹಳದಿ ಚೂಡಿದಾರ್ ಉಟ್ಟು, ಕೊರಳಿಗೆ ಹಾರ ತೊಟ್ಟು, ಶಾಲು ಹೊದ್ದುಕೊಂಡು, ಹಣೆ ಮುಳುಗುವಂತೆ ಕುಂಕುಮ ಇಟ್ಟುಕೊಂಡಿರುವ ತಮನ್ನಾ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
5 / 8
‘ನನ್ನ ಪ್ರೀತಿಪಾತ್ರರರೊಟ್ಟಿಗೆ ಕೆಲವು ಭಕ್ತಿಪೂರ್ಣ ಕ್ಷಣಗಳನ್ನು ಕಳೆದೆ’ ಎಂದು ಕ್ಯಾಪ್ಷನ್ ನೀಡಿ ದೇವಾಲಯದ ಚಿತ್ರಗಳನ್ನು ತಮನ್ನಾ ಹಂಚಿಕೊಂಡಿದ್ದಾರೆ.
6 / 8
ತಮನ್ನಾ ಶಕ್ತಿದೇವತೆಗಳ ಆರಾಧಕಿ. ಲಿಂಗ ಭೈರವಿ ದೇವಿಯನ್ನು ನಂಬುತ್ತಾರೆ ಹಾಗೂ ಆರಾಧಿಸುತ್ತಾರೆ. ಶಿವನ ಬಗ್ಗೆಯೂ ಅಪಾರ ಪ್ರೇಮ ತಮನ್ನಾಗೆ.
7 / 8
ಇಶಾ ಫೌಂಡೇಶನ್ನಲ್ಲಿ ನಡೆಯುವ ಶಿವರಾತ್ರಿ, ಸಂಕ್ರಾಂತಿ ಹಾಗೂ ಲಿಂಗ ಭೈರವೀ ದೇವಿ ಆರಾಧನೆಗಳಲ್ಲಿ ನಟಿ ತಮನ್ನಾ ಭಾಟಿಯಾ ತೊಡಗಿಕೊಳ್ಳುತ್ತಾರೆ.
8 / 8
ನಟಿ ತಮನ್ನಾ ಭಾಟಿಯಾ ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ತಮ್ಮ ದಿನನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಂಡಿದ್ದಾರೆ.