AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ತಮಿಳುನಾಡಿನ ದ್ವೀಪ ಪ್ರದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು? ಮಾಹಿತಿ ಇಲ್ಲಿದೆ

Tamil Nadu Islands: ಪ್ರತಿ ಸಲ ಹೊಸ ಹೊಸ ತಾಣಗಳ ಕುರಿತು ಆನ್ವೇಷಣೆ ನಡೆಸುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಬೆರಗುಗೊಳಿಸುವ ದ್ವೀಪ ಪ್ರದೇಶಗಳ ಕುರಿತು ಮಾಹಿತಿ ಇಲ್ಲಿದೆ.

TV9 Web
| Edited By: |

Updated on: Dec 02, 2022 | 1:06 PM

Share
ನೀವು ಪ್ರವಾಸಿತಾಣ ಕುರಿತು ಅತಿಯಾದ ಆಸಕ್ತಿಯನ್ನು ಹೊಂದಿದ್ದು, ಪ್ರತಿ ಸಲ ಹೊಸ ಹೊಸ ತಾಣಗಳ ಕುರಿತು ಆನ್ವೇಷಣೆ ನಡೆಸುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಬೆರಗುಗೊಳಿಸುವ ದ್ವೀಪ ಪ್ರದೇಶಗಳ ಕುರಿತು ಮಾಹಿತಿ ಇಲ್ಲಿದೆ. ತಮಿಳುನಾಡು ಪ್ರವಾಸ ಎಂದಾಕ್ಷಣ ಭವ್ಯವಾದ ದೇವಾಲಯಗಳು ಮತ್ತು ಗಿರಿಧಾಮಗಳ ಬಗ್ಗೆ ಕೇಳಿರುತ್ತೀರಿ. ಆದರೆ ಅತ್ಯಂತ ರೋಮಾಂಚನಕಾರಿ ದ್ವೀಪ ಪ್ರದೇಶಗಳು ಇಲ್ಲಿ ಸಾಕಷ್ಟಿವೆ.

1 / 9
ಶ್ರೀರಂಗಂ ದ್ವೀಪ:  ಇದು ತಿರುಚಿರಾಪಳ್ಳಿ ನಗರದ ದ್ವೀಪವಾಗಿದೆ. ಈ ದ್ವೀಪವು ಕಾವೇರಿ ಮತ್ತು ಕೊಲ್ಲಿದಂ ನದಿಗಳಿಂದ ರೂಪುಗೊಂಡಿದ್ದು ಇದನ್ನು ನದಿ ದ್ವೀಪ ಎಂದು ಕರೆಯಲಾಗುತ್ತದೆ. ದ್ವೀಪದ ಮಧ್ಯದಲ್ಲಿ ನೆಲೆಗೊಂಡಿರುವ ನಗರವು ಪ್ರಮುಖ ಹಿಂದೂ-ವೈಷ್ಣವ ಯಾತ್ರಾ ಕೇಂದ್ರವಾಗಿದೆ.

2 / 9
ಪಂಬನ್ ದ್ವೀಪ: ರಾಮೇಶ್ವರಂ ದ್ವೀಪ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪಂಬನ್ ಭಾರತ ಮತ್ತು ಶ್ರೀಲಂಕಾ ನಡುವೆ ಇದೆ. ರಾಮ ಸೇತುವೆಯನ್ನು ಕೂಡ ನೀವು ಇಲ್ಲಿ ಕಣ್ತುಂಬಿಸಬಹುದು. ರಾಮೇಶ್ವರಂನಿಂದ, ಮನ್ನಾರ್ ಗಲ್ಫ್ ಮೆರೈನ್ ನ್ಯಾಷನಲ್ ಪಾರ್ಕ್‌ನ ಭಾಗವಾಗಿರುವ ಹೆಚ್ಚಿನ ದ್ವೀಪಗಳಿಗೆ ನೀವು ದೋಣಿಗಳನ್ನು ಇಲ್ಲಿ ಬಾಡಿಗೆಗೆ ಪಡೆಯಬಹುದು.

3 / 9
ಹರೇ ದ್ವೀಪವು ಮನ್ನಾರ್ ಕೊಲ್ಲಿಯಲ್ಲಿರುವ ಅತಿದೊಡ್ಡ ದ್ವೀಪವಾಗಿದೆ. ಇದು ಮನ್ನಾರ್ ಕೊಲ್ಲಿ ಸಮುದ್ರ ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ. ಈ ದ್ವೀಪವು ಮುತ್ತು ಕೃಷಿಗೆ (Pearl cultivation) ಅತ್ಯಂತ ಜನಪ್ರಿಯವಾಗಿದೆ.

4 / 9
ಕುರುಸಾದೈ ದ್ವೀಪವು ಮನ್ನಾರ್ ಕೊಲ್ಲಿಯಲ್ಲಿರುವ ಸುಂದರವಾದ ಆದರೆ ಜನವಸತಿಯಿಲ್ಲದ ದ್ವೀಪವಾಗಿದೆ. ಪಂಬನ್ ದ್ವೀಪದ ದಕ್ಷಿಣಕ್ಕೆ ನೆಲೆಗೊಂಡಿರುವ  ಈ ದ್ವೀಪವು ಸಾಕಷ್ಟು  ಸಮುದ್ರ ಜೀವಿಗಳನ್ನು ಹೊಂದಿದೆ. ನೀವು ಗಾಜಿನ ತಳದ(Glass-bottom boats) ದೋಣಿಗಳ ಮೂಲಕ ಸಮುದ್ರ ಜೀವಿಗಳನ್ನು ವೀಕ್ಷಿಸಬಹುದಾಗಿದೆ.

5 / 9
ನಲ್ಲತನ್ನಿ ಥೀವು ಮನ್ನಾರ್ ಕೊಲ್ಲಿಯಲ್ಲಿರುವ ಜನವಸತಿ ಇಲ್ಲದ ದ್ವೀಪವಾಗಿದೆ. ಈ  ದ್ವೀಪವು ಹವಳದ ಬಂಡೆಗಳಿಂದ ಆವೃತವಾಗಿದೆ. ಆದ್ದರಿಂದ ಇಲ್ಲಿನ ಪ್ರವಾಸ ಕೈಗೊಳ್ಳುವ ಮೊದಲು ಪ್ರವೇಶಕ್ಕೆ ಸಂಬಂಧಿಸಿದಂತೆ ಹಲವಾರು ನಿರ್ಬಂಧಗಳನ್ನು ಹಾಕಲಾಗಿದೆ.

6 / 9
ಪುಲ್ಲಿವಾಸಲ್ ದ್ವೀಪ: ಇಲ್ಲಿ ನೀವು ಸಮುದ್ರದ ಆಳದಲ್ಲಿರುವ ಸಾಕಷ್ಟು ಜಲಚರಗಳನ್ನು ಇಲ್ಲಿ ಕಾಣಬಹುದು. ಅದಕ್ಕೆ ಸಂಬಂಧಿಸಿದಂತೆ ನಿಮಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಸಮುದ್ರದ ಒಳಗಿನ ರೋಮಾಂಚಕ ಹವಳದ ಬಂಡೆಗಳನ್ನು ಆನಂದಿಸಬಹುದು ಜೊತೆಗೆ ಕೆಲವೊಮ್ಮೆ ಡಾಲ್ಫಿನ್ಗಳು ಕೂಡ ನಿಮ್ಮ ಕಣ್ಣ ಮುಂದೆಯಿಂದ ಹಾದು ಹೋಗುತ್ತದೆ.

7 / 9
ಉಪ್ಪುತನ್ನಿ ದ್ವೀಪ: ಉಪ್ಪುತನ್ನಿ ಎಂದರೆ ತಮಿಳು ಬಾಷೆಯಲ್ಲಿ ಉಪ್ಪು ನೀರು ಎಂಬ ಅರ್ಥವನ್ನು ನೀಡುತ್ತದೆ. ಇದು ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ. ಆದ್ದರಿಂದ ನೀವು ಅರಣ್ಯ ಇಲಾಖೆಯಿಂದ ಸರಿಯಾದ ಅನುಮತಿಯನ್ನು ಪಡೆಯದೇ ಇಲ್ಲಿಗೆ ಹೋಗಲು ನಿಮಗೆ ಅವಕಾಶ ಇಲ್ಲ.

8 / 9
ಕ್ವಿಬಲ್ ದ್ವೀಪವು ಚೆನ್ನೈನಲ್ಲಿರುವ ನದಿ ದ್ವೀಪವಾಗಿದ್ದು, ಅಡ್ಯಾರ್ ನದಿ ಮತ್ತು ಅದರ ಉಪನದಿಗಳಿಂದ ರೂಪುಗೊಂಡಿದೆ. ನೀವು ಅಡ್ಯಾರ್‌ನಿಂದ ಕ್ವಿಬಲ್ ದ್ವೀಪಕ್ಕೆ ದೋಣಿಯ ಮೂಲಕ ಹೋಗಬಹುದು.

9 / 9