ಬಾಬರ್ ಅಲಿ : ಅತಿ ಚಿಕ್ಕ ವಯಸ್ಸಿನಲ್ಲಿ ಮುಖ್ಯೋಪಾಧ್ಯಾಯ ಎನ್ನುವ ಖ್ಯಾತಿ ಗಳಿಸಿದವರು ಈ ಬಾಬರ್ ಅಲಿ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯವರಾದ ಬಾಬರ್ ಅಲಿಯವರು ಒಂಬತ್ತು ವರ್ಷದವರಾಗಿದ್ದಾಗಲೇ ತಮಗಿಂತ ಸಣ್ಣ ವಯಸ್ಸಿನ ಹಾಗೂ ಸಹಪಾಠಿಗಳಿಗೆ ಪಾಠ ಹೇಳಿಕೊಡಲು ಶುರು ಮಾಡಿದ್ದರು. ಹೀಗಾಗಿ ಬಿಬಿಸಿ, ಇವರಿಗೆ ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಎಂಬ ಬಿರುದು ನೀಡಿತು. ಇದೀಗ ಬಾಬರ್ ಅಲಿಯವರು 'ಆನಂದ ಶಿಕ್ಷಾ ನಿಕೇತನ ಹೆಸರಿನ ಪುಟ್ಟ ಶಾಲೆಯೊಂದನ್ನು ತೆರೆದು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.