- Kannada News Photo gallery Tech Tips Never do these mistakes when buying a new smartphones in online or store
ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಈ ವಿಷಯ ನಿಮಗೆ ಗೊತ್ತಿರಲೇ ಬೇಕು
Tech Tips and Tricks: ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಡಿಸ್‌ಪ್ಲೇ. ಆದರೆ, ಹೆಚ್ಚಿನವರು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲೀಸದೇ ಮೊಬೈಲ್ ಖರೀದಿಸುತ್ತಿದ್ದಾರೆ. ಹಾಗಾದರೆ ನೀವು ಹೊಸ ಮೊಬೈಲ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಯಾವುವು ಎಂಬುದನ್ನು ನೋಡೋಣ.
Updated on: Aug 12, 2023 | 3:11 PM

ಇಂದು ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಿಗೆ ಇರುವಷ್ಟು ಬೇಡಿಕೆ ಇತರೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಇಲ್ಲ ಎನ್ನಬಹುದು. ಇದಕ್ಕೆ ಮುಖ್ಯ ಕಾರಣ ಈಗ ಕೈಗೆಟಕುವ ದರದಲ್ಲಿ ಮೊಬೈಲ್ಗಳು ಸಿಗುತ್ತಿರುವುದು. ಹಲವು ವರದಿಗಳ ಪ್ರಕಾರ ಹೆಚ್ಚಿನವರು ಯಾವುದೇ ಸ್ಮಾರ್ಟ್‌ಪೋನ್ ಖರಿದೀಸುವ ಮುನ್ನ ಆ ಸ್ಮಾರ್ಟ್‌ಪೋನಿನ ಡಿಸ್‌ಪ್ಲೇ ಎಷ್ಟು ಅಗಲ ಮತ್ತು ಉದ್ದ ಇದೆ ಎಂದು ನೋಡಿ ಪೋನ್ ಖರೀದಿಸುತ್ತಾರಂತೆ.

ಸ್ಮಾರ್ಟ್‌ಫೋನ್ ಬಗ್ಗೆ ಇನ್ನು ಸ್ವಲ್ಪ ಹೆಚ್ಚು ತಿಳಿದವರು, ಆ ಪೋನಿನ ವೇಗ ಎಷ್ಟು, ಸಾಫ್ಟ್‌ವೇರ್ ಯಾವುದು ಎಂದೆಲ್ಲ ಚೆಕ್ ಮಾಡುತ್ತಾರಂತೆ. ಆದರೆ, ನಿಮಗೆ ಗೊತ್ತಾ? 100 ಜನ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ 90 ಜನರಿಗೆ ತಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗುಣಮಟ್ಟ ಎಷ್ಟಿದೆ ಎಂಬುದೇ ತಿಳಿದಿರುವುದಿಲ್ಲ.

ಇತ್ತೀಚಿನ ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇ. ಆ ಫೋನಿನ ಡಿಸ್‌ಪ್ಲೇಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಆ ಸ್ಮಾರ್ಟ್‌ಫೋನ್ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಆದರೂ, ಹೆಚ್ಚಿನವರು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲೀಸದೇ ಮೊಬೈಲ್ ಖರೀದಿಸುತ್ತಿದ್ದಾರೆ.

ಈಗಿನ ಡಿಜಿಟಲ್ ಯುಗದಲ್ಲಿ ಅನೇಕ ಫೋನ್‌ಗಳು ಲಭ್ಯವಿದ್ದು ಅವುಗಳ ಡಿಸ್‌ಪ್ಲೇ ಬದಲಾಗುತ್ತಲೇ ಇರುತ್ತದೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ. ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ. ಹಾಗಾಗಿ, ನಿಮ್ಮ ಸ್ಕ್ರೀನ್ ಡೆನ್ಸಿಟಿ ವ್ಯಾಲ್ಯೂವನ್ನು ಕಂಡುಕೊಳ್ಳುವುದು ಹೇಗೆ ಎಂಬ ಅಂಶವನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಪಿಪಿಐ ಎಂದರೇನು?: ಪಿಪಿಐ ಎಂದರೆ ಪಿಕ್ಸೆಲ್ಸ್ ಪರ್ ಇಂಚ್. ಇಲೆಕ್ಟ್ರಾನಿಕ್ ಇಮೇಜ್ ಸಾಧನದಲ್ಲಿರುವ ಪಿಕ್ಸೆಲ್ ಡೆನ್ಸಿಟಿಯ ಅಳತೆಯನ್ನು ಇದು ಒಳಗೊಂಡಿದೆ. ಕಂಪ್ಯೂಟರ್ ಮಾನಿಟರ್ ಅಥವಾ ಟಿವಿ ಡಿಸ್‌ಪ್ಲೇ, ಕ್ಯಾಮೆರಾ ಅಥವಾ ಇಮೇಜ್ ಸ್ಕ್ಯಾನರ್‌ನಲ್ಲಿ ಪಿಪಿಐ ಯನ್ನು ಕಂಡುಕೊಳ್ಳಬಹುದು. ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿರುವ ಪಾಯಿಂಟ್‌ಗಳ ತೀಕ್ಷ್ಣತೆಯ ಅಳತೆಯನ್ನು ಪಿಪಿಐ ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಡಿಪಿಐ ಎಂದರೇನು?: ಡಿಪಿಐ ಎಂದರೆ ಡಾಟ್ಸ್ ಪರ್ ಇಂಚ್. ಇದು ಸ್ಕ್ರೀನ್ ಮತ್ತು ಇನ್ ಪ್ರಿಂಟ್ ಇವೆರಡರಲ್ಲೂ ಇರುವ ಇಮೇಜ್‌ನ ರೆಸಲ್ಯೂಶನ್ ಅನ್ನು ಅಳತೆ ಮಾಡುತ್ತದೆ. ನೀವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಹೆಚ್ಚಿನ ಎಪಿಕೆ ಫೈಲ್‌ಗಳನ್ನು ಇಂಟರ್ನೆಟ್‌ನಲ್ಲಿ ಕಂಡಿರುತ್ತೀರಿ.

ಈ ಎಪಿಕೆ ಫೈಲ್‌ಗಳನ್ನು ಬೇರೆ ಬೇರೆ ಅಂಶಗಳ ಮೂಲಕ ವರ್ಗೀಕರಿಸಲಾಗುತ್ತದೆ ಅಂದರೆ ಪ್ರೊಸೆಸರ್ ಪ್ರಕಾರಗಳು ಮತ್ತು ಡಿಪಿಐ ಮೌಲ್ಯಗಳು ಎಂದಾಗಿದೆ. ಇದು ಡಿವೈಸ್‌ನ ಡಿಸ್‌ಪ್ಲೇ ಡೆನ್ಸಿಟಿಯನ್ನು ಪ್ರತಿನಿಧಿಸುತ್ತಿದ್ದು ಇದರಿಂದ ಬಳಕೆದಾರರು ಸ್ಕ್ರೀನ್ ಮೇಲೆ ಯಾವ ಬಗೆಯ ಅಂಶ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಡಿಪಿಐ ಮೌಲ್ಯ ತಿಳಿಯುವುದು ಹೇಗೆ?: ನಿಮ್ಮ ಫೋನ್‌ನ ಡಿಪಿಐ ಮೌಲ್ಯವನ್ನು ಕಂಡುಕೊಳ್ಳಲು, ನೀವು “ಡಿಸ್‌ಪ್ಲೇ ಇನ್‌ಫೋ” ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಈಗ ಡೆನ್ಸಿಟಿ ಕ್ಷೇತ್ರದತ್ತ ಗಮನಹರಿಸಿ ಮತ್ತು ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೈಟ್‌ಗೆ ಹೋಗಿ. ನಂತರ ಮೊಬೈಲ್ನ ಹೆಸರಿನಲ್ಲಿರುವ ಡಿಪಿಐ ಮೌಲ್ಯವನ್ನು ಪರಿಶೀಲಿಸಿಕೊಳ್ಳಬಹುದು.




