ತರುಣ್-ಸೋನಲ್ ಜೋಡಿಗೆ ಚಂದನವನದ ತಾರೆಯರ ಅಭಿನಂದನೆ; ಜೋರಾಗಿದೆ ಸಂಭ್ರಮ
ತರುಣ್ ಸುಧೀರ್ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ. ಹಾಗಾಗಿ ಅವರ ಗೆಳೆಯರು ಮತ್ತು ಆಪ್ತರ ಬಳಗ ದೊಡ್ಡದು. ಇಂದು (ಆಗಸ್ಟ್ 10) ಸೋನಲ್ ಮಾಂತೆರೋ ಹಾಗೂ ತರುಣ್ ಸುಧೀರ್ ಅವರ ಆರತಕ್ಷತೆಗೆ ಅನೇಕ ಗಣ್ಯರು ಹಾಜರಿ ಹಾಕಿದ್ದಾರೆ. ಬಹಳ ಅದ್ದೂರಿಯಾಗಿ ರಿಸೆಪ್ಷನ್ ನಡೆಯುತ್ತಿವೆ. ಎಲ್ಲರೂ ಬಂದು ನವ ದಂಪತಿಗೆ ಹಾರೈಸಿದ್ದಾರೆ.
1 / 5
ತರುಣ್ ಅವರಿಗೆ ಭರ್ಜರಿ ಯಶಸ್ಸು ತಂದುಕೊಟ್ಟ ಸಿನಿಮಾ ‘ಕಾಟೇರ’. ಈ ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ರಿಸೆಪ್ಷನ್ಲ್ಲಿ ಭಾಗಿ ಆಗಿದ್ದಾರೆ. ಇನ್ನೂ ಹಲವು ಗಣ್ಯರು ಆಗಮಿಸುತ್ತಿದ್ದಾರೆ.
2 / 5
‘ಕಾಟೇರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಆರಾಧನಾ ಅವರು ರಿಸೆಪ್ಷನ್ನಲ್ಲಿ ಭಾಗಿ ಆಗಿದ್ದಾರೆ. ಹಿರಿಯ ನಟಿ ಮಾಲಾಶ್ರೀ ಕೂಡ ಬಂದು ಆಶೀರ್ವಾದ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಹಾಜರಿಲ್ಲ ಎಂಬ ಕೊರಗು ಎಲ್ಲರಿಗೂ ಇದೆ.
3 / 5
ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟ ಅನಿರುದ್ಧ್ ಜತ್ಕರ್ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ, ನವಜೋಡಿಗೆ ಅವರು ಅಭಿನಂದನೆ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಆಗಮಿಸಿ ಶುಭ ಹಾರೈಸಿದ್ದಾರೆ.
4 / 5
ಕನ್ನಡ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ, ಗೀತರಚನಕಾರ ಹಂಸಲೇಖ ಅವರು ಆರತಕ್ಷತೆ ಸಮಾರಂಭಕ್ಕೆ ಬಂದು ತರುಣ್ ಹಾಗೂ ಸೋನಲ್ ಅವರನ್ನು ಆಶೀರ್ವದಿಸಿದ್ದಾರೆ. ‘ರಾಬರ್ಟ್’ ನಿರ್ಮಾಪಕ ಉಮಾಪತಿ ಗೌಡ ಕೂಡ ಹಾಜರಿ ಹಾಕಿದ್ದಾರೆ.
5 / 5
ನಿರ್ಮಾಪಕ ಕೆ. ಮಂಜು, ನಟ ರಮೇಶ್ ಅರವಿಂದ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ರಿಷಬ್ ಶೆಟ್ಟಿ, ಕಾರುಣ್ಯ ರಾಮ್, ಹರ್ಷಿಕಾ ಪೂಣಚ್ಚ, ಜಗ್ಗೇಶ್, ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತರುಣ್-ಸೋನಲ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಂಭ್ರಮ ಜೋರಾಗಿದೆ.