Women Health: ಟ್ಯಾಂಪೂನ್‌ ಬಳಸುವ ವಿಧಾನ, ಇದು ಸ್ಯಾನಿಟರ್​​​ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ? ಇಲ್ಲಿದೆ ಮಾಹಿತಿ

Updated on: Mar 25, 2023 | 5:35 PM

ಮುಟ್ಟಿನ ಸಮಯದಲ್ಲಿ ಹಿಂದಿನ ಕಾಲದಲ್ಲಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಇದಾದ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಬಳಕೆಯಲ್ಲಿದವು, ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌, Menstrual Cups ಮುಂತಾದಗಳು ಕಂಡುಬರುತ್ತಿದೆ.

1 / 7
ಸ್ಯಾನಿಟರಿ ಪ್ಯಾಡ್‌ನ ಬದಲಿಗೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌ಗಳು ಹೆಚ್ಚಾಗಿ ಸುದ್ದಿಯಲ್ಲಿವೆ. ಆದರೆ ಇದು ಸ್ಯಾನಿಟರ್​​​ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಿ.

ಸ್ಯಾನಿಟರಿ ಪ್ಯಾಡ್‌ನ ಬದಲಿಗೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌ಗಳು ಹೆಚ್ಚಾಗಿ ಸುದ್ದಿಯಲ್ಲಿವೆ. ಆದರೆ ಇದು ಸ್ಯಾನಿಟರ್​​​ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಿ.

2 / 7

ಮುಟ್ಟಿನ ಸಮಯದಲ್ಲಿ ಹಿಂದಿನ ಕಾಲದಲ್ಲಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಇದಾದ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಬಳಕೆಯಲ್ಲಿದವು, ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌, Menstrual Cups ಮುಂತಾದಗಳು ಕಂಡುಬರುತ್ತಿದೆ.

3 / 7

ನೀವು ಕೂಡ ಸ್ಯಾನಿಟರಿ ಪ್ಯಾಡ್‌ ಬದಲಾಗಿ ಟ್ಯಾಂಪೂನ್‌ ಬಳಸಲು ಯೋಚಿಸಿದ್ದರೆ, ಟ್ಯಾಂಪೂನ್ ಎಂದರೇನು, ಇದನ್ನು ಬಳಸುವ ಸರಿಯಾದ ಕ್ರಮ ಹಾಗೂ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಿ.

4 / 7

ಟ್ಯಾಂಪೂನ್ ಮುಟ್ಟಿನ ಸಮಯದಲ್ಲಿ ಯೋನಿಯೊಳಗೆ ಸೇರಿಸುವ ಮೂಲಕ ರಕ್ತ ಮತ್ತು ಯೋನಿ ಸ್ರವಿಸುವಿಕೆಯನ್ನು ಹೀರಿಕೊಳ್ಳಲು ವಿನ್ಯಾಸಗೊಳಿಸಲಾದ ಮುಟ್ಟಿನ ಉತ್ಪನ್ನವಾಗಿದೆ. ಪ್ಯಾಡ್‌ಗಿಂತ ಭಿನ್ನವಾಗಿ, ಇದನ್ನು ಯೋನಿ ಕಾಲುವೆಯ ಒಳಗೆ ಆಂತರಿಕವಾಗಿ ಇರಿಸಲಾಗುತ್ತದೆ.

5 / 7

ಬಹುಪಾಲು ಟ್ಯಾಂಪೂನ್‌ಗಳನ್ನು ರೇಯಾನ್‌ನಿಂದ ಅಥವಾ ಸಿಂಥೆಟಿಕ್ ಫೈಬರ್‌ಗಳ ಜೊತೆಗೆ ರೇಯಾನ್ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಕೆಲವು ಟ್ಯಾಂಪೂನ್‌ಗಳನ್ನು ಸಾವಯವ ಹತ್ತಿಯಿಂದ ತಯಾರಿಸಲಾಗುತ್ತದೆ.

6 / 7

ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒಳ ಉಡುಪಿಗೆ ಅಂಟಿಸಿ ಬಳಸುತ್ತೀರಿ. ಆದರೆ ಟ್ಯಾಂಪೂನ್‌ನನ್ನು ಜಾಗರೂಕತೆಯಿಂದ ಮುಟ್ಟಿನ ಸಮಯದಲ್ಲಿ ಯೋನಿ ಕಾಲುವೆಯ ಒಳಗೆ ಇರಿಸಲಾಗುತ್ತದೆ. ಇದು ರಕ್ತಸಾವ್ರ ಹೆಚ್ಚಾಗುತ್ತಾ ಹೋದ ಹಾಗೆ ಹಿಗ್ಗುತ್ತಾ ಹೋಗುತ್ತದೆ.

7 / 7

ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವ ರೀತಿಯಲ್ಲಿಯೇ ಇದನ್ನು 5ರಿಂದ 6 ಗಂಟೆಗಳ ಒಳಗಾಗಿ ಬದಲಾಯಿಸಬೇಕು. ಇಲ್ಲದಿದ್ದರೆ ಇದು ಸೋಂಕಿಗೆ ಕಾರಣವಾಗಬಹುದು.

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us