
ನಟಿ ಆ್ಯಮಿ ಜಾಕ್ಸನ್ ಅವರು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಹೊಸ ಫೋಟೋಶೂಟ್ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ.

ಕಡಲ ತೀರದಲ್ಲಿ ಮಲಗಿಕೊಂಡು ಆ್ಯಮಿ ಜಾಕ್ಸನ್ ಅವರು ಹಾಟ್ ಆಗಿ ಪೋಸ್ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವು ಸಖತ್ ವೈರಲ್ ಆಗಿವೆ.

ಆ್ಯಮಿ ಜಾಕ್ಸನ್ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಕಮೆಂಟ್ಗಳ ಮೂಲಕ ನೆಚ್ಚಿನ ನಟಿಗೆ ಹೊಸ ವರ್ಷದ ಶುಭಕೋರಿದ್ದಾರೆ.

2018ರಿಂದ ಈಚೆಗೆ ಆ್ಯಮಿ ಜಾಕ್ಸನ್ ಅವರು ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ಅವರು ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

ಮೂಲತಃ ಲಂಡನ್ನವರಾದ ಆ್ಯಮಿ ಜಾಕ್ಸನ್ಗೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಯಶಸ್ಸು ಸಿಕ್ಕಿತು. ಈಗ ಅವರು ಲಂಡನ್ನಲ್ಲಿಯೇ ವಾಸವಾಗಿದ್ದಾರೆ. ಮಾಡೆಲಿಂಗ್ ಜಗತ್ತಿನಲ್ಲಿ ಅವರು ಸಕ್ರಿಯರಾಗಿದ್ದಾರೆ.
Published On - 12:56 pm, Wed, 5 January 22