ಪ್ರತಿಯೊಬ್ಬರ ಜೀವನದಲ್ಲಿಯೂ ತಾಯಿ ಮೊದಲ ಗುರುವಾಗಿರುತ್ತಾಳೆ. ಬದುಕಿಗೆ ಬೇಕಾದಂತಹ ಎಲ್ಲಾ ಪಾಠಗಳನ್ನು ಆಕೆಯೇ ತಿಳಿಸಿಕೊಡುತ್ತಾಳೆ. ಯಾವುದನ್ನು ತಿನ್ನಬೇಕು, ತಿನ್ನಬಾರದು ಎಂಬುವುದರಿಂದ ಹಿಡಿದು ಎಷ್ಟು ತಿನ್ನಬೇಕು ಎಂಬುದರ ವರೆಗೆ ಎಲ್ಲವನ್ನೂ ತಿಳಿಸಿಕೊಡುತ್ತಾಳೆ. ಮಕ್ಕಳ ದೇಹಕ್ಕೆ ಯಾವುದು ಒಳ್ಳೆಯದು ಎಂದು ತಿಳಿದುಕೊಂಡು, ಪ್ರತಿಯೊಂದನ್ನು ಪ್ರೀತಿಯಿಂದ ಮಾಡುತ್ತಾಳೆ. ಮುಂದೆ ಈ ಪಾಠಗಳು ನಮ್ಮ ಆರೋಗ್ಯ ಕಾಪಾಡುತ್ತದೆ.