- Kannada News Photo gallery These are the Pakistani artistes who said no to acting in Bollywood; What are the reasons given by them?
ಬಾಲಿವುಡ್‌ನಲ್ಲಿ ನಟಿಸಲು ನೋ ಎಂದ ಪಾಕ್ ಕಲಾವಿದರು ಇವರೇ; ಅವರು ಕೊಟ್ಟ ಕಾರಣಗಳೇನು?
ಪಾಕಿಸ್ತಾನದಿಂದ ಬಂದ ಅದೆಷ್ಟೋ ಕಲಾವಿದರು ಬಾಲಿವುಡ್ ಬಣ್ಣ ಲೋಕದಲ್ಲಿ ಮಿಂಚಿದ್ದಾರೆ. ಆದರೆ, ಅವರಲ್ಲಿ ಕೆಲ ನಟ, ನಟಿಯರು ಬಾಲಿವುಡ್ ಆಫರ್ಗಳನ್ನು ತಿರಸ್ಕರಿಸಿದ್ದಾರೆ.
Updated on: Nov 19, 2022 | 12:32 PM

ಕಲೆಗೆ ಮತ್ತು ಕಲಾವಿದರಿಗೆ ಯಾವುದೆ ಭಾಷೆ ಅಥವಾ ಗಡಿಯಿಲ್ಲ. ನೆರೆಯ ಪಾಕಿಸ್ತಾನದಿಂದ ಬಂದ ಅದೆಷ್ಟೋ ಕಲಾವಿದರು ಬಾಲಿವುಡ್ ಬಣ್ಣ ಲೋಕದಲ್ಲಿ ಮಿಂಚಿದ್ದಾರೆ. ಆದರೆ, ಅವರಲ್ಲಿ ಕೆಲ ನಟ, ನಟಿಯರು ಬಾಲಿವುಡ್ ಆಫರ್ಗಳನ್ನು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ.

ಮೆಹ್ವಿಶ್ ಹಯಾತ್: 'ಜಟ್ ಜೇಮ್ಸ್ ಬಾಂಡ್' ಚಿತ್ರದಲ್ಲಿ ಜಿಮ್ಮಿ ಶೆರ್ಗಿಲ್ ಜೊತೆ ನಟಿಸಲು ಈ ಚೆಲುವೆಗೆ ಆಫರ್ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ನಟಿ ಮೆಹ್ವಿಶ್ ಹಯಾತ್ ಬಿಲ್ ಕುಲ್ ಬೇಡ ಎಂದಿದ್ದರು.

ಫೈಸಲ್ ಖುರೇಷಿ: ಬಾಲಿವುಡ್ನಿಂದ ನಟ ಫೈಸಲ್ ಖುರೇಷಿ ಅವರಿಗೆ ಸಾಕಷ್ಟು ಚಿತ್ರಗಳ ಆಫರ್ ಬಂದಿದ್ದು, ಯಾವುದೂ ಕೂಡ ಅಷ್ಟೊಂದು ಚೆನ್ನಾಗಿಲ್ಲ ಎಂದು ನಟ ತಿರಸ್ಕರಿಸಿರುವುದಾಗಿ ವರದಿಯಾಗಿದೆ.

ಅಯೇಜಾ ಖಾನ್: ಬಾಲಿವುಡ್ ಸ್ಟಾರ್ ನಿರ್ದೇಶಕ ಇಮ್ತಿಯಾಜ್ ಅಲಿ ಅವರು ನಟಿ ಅಯೇಜಾ ಖಾನ್ಗೆ ಬಾಲಿವುಡ್‌ನಲ್ಲಿ ನಟಿಸಲು ಅವಕಾಶ ನೀಡಿದ್ದರು. ಆದರೆ ಟಾಕ್ ಶೋ ಒಂದರಲ್ಲಿ ಭಾಗವಹಿಸುತ್ತಿರುವುದರಿಂದ ಆ ಆಫರ್ವನ್ನು ಬೇಡ ಅಂದಿದ್ದರು.

ಹುಮಾಯೂನ್ ಸಯೀದ್: 'ಬಿನ್ ರಾಯ್' ಚಿತ್ರದ ಈ ನಟನಿಗೆ ಬಾಲಿವುಡ್ ನಿರ್ಮಾಪಕರಿಂದ ಸಾಕಷ್ಟು ಆಫರ್ಗಳನ್ನು ನೀಡಲಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೂ "ಬಾಲಿವುಡ್‌ನಲ್ಲಿ ಕೆಲಸ ಮಾಡುವ ಮನಸ್ಥಿತಿಯಲ್ಲಿ ನಾನಿಲ್ಲ" ಎಂದು ಹೇಳಿದ್ದರು. ಅಲ್ಲಿಗೆ ಬಾಲಿವುಡ್ ಚಿತ್ರಗಳನ್ನು ನಿರಾಕರಿಸಿದವರಲ್ಲಿ ಇವರು ಒಬ್ಬರು.

ಸನಮ್ ಜಂಗ್: ಬಾಲಿವುಡ್ನ ದೊಡ್ಡ ದೊಡ್ಡ ನಿರ್ಮಾಪಕರು ಈ ನಟಿಗೆ ಒಳ್ಳೆಯ ಆಫರ್ಗಳನ್ನು ನೀಡಿದರು. ಮುಲಾಜಿಲ್ಲದೇ ನಾನು ನಟಿಸುವುದಿಲ್ಲ ಎಂದವರಲ್ಲಿ ಸನಮ್ ಜಂಗ್ ಕೂಡ ಒಬ್ಬರು.

ಹಮ್ಜಾ ಅಲಿ ಅಬ್ಬಾಸಿ: ನಟ ಅಕ್ಷಯ್ ಕುಮಾರ್ ನಟನೆಯ 'ಬೇಬಿ' ಚಿತ್ರದ ಮೂಲಕ ಬಾಲಿವುಡ್ಗೆ ಹಮ್ಜಾ ಅಲಿ ಅಬ್ಬಾಸಿ ಪಾದಾರ್ಪಣೆ ಮಾಡಿದರು. ಬಳಿಕ ಅವರಿಗೆ 'ಮೀಕಲ್ ಜುಲ್ಫಿಕರ್' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆದರೆ ಆ ಚಿತ್ರ ಪಾಕಿಸ್ತಾನಿ ವಿರೋಧಿ ವಿಚಾರಗಳನ್ನು ಹೊಂದಿದ್ದರಿಂದ ಆ ಚಿತ್ರದ ಆಫರ್ನ್ನು ತಿರಸ್ಕರಿಸಿದರು. ಈ ಕುರಿತಾಗಿ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.




