ಈ ಆಹಾರಗಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ
TV9 Web | Updated By: Pavitra Bhat Jigalemane
Updated on:
Feb 21, 2022 | 8:19 AM
ಕೆಲವು ಆಹಾರಗಳು ಬಾಯಿಗೆ ರುಚಿಯಾಗಿದ್ದರೂ ಹೊಟ್ಟೆಗೆ ಸಮಸ್ಯೆ ಉಂಟುಮಾಡುತ್ತದೆ. ಅಜೀರ್ಣ, ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಆಹಾರ ಪದಾರ್ಥಗಳು ಯಾವವು? ಎನ್ನುವ ಮಾಹಿತಿ ಇಲ್ಲಿದೆ.
1 / 9
ಬೀನ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿ ರಾಫಿನೋಸ್ ಅಧಿಕವಾಗಿರುವ ಕಾರಣ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಎಲ್ಲಾ ಬೀನ್ಸ್ ಮತ್ತು ಕಾಳುಗಳು ಅಜೀರ್ಣವನ್ನು ಉಂಟುಮಾಡುವುದಿಲ್ಲ.
ಅರ್ಧ ಬೇಯಿಸಿದ ಕಾಳುಗಳನ್ನು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ.
2 / 9
ಹೂಕೋಸಿನಲ್ಲಿ ಅಧಿಕ ಪ್ರಮಾಣದ ರಾಫಿನೋಸ್ ಇರುವುದರಿಂದ ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ. ಹೀಗಗಿ ಹೂಕಸನ್ನು ಹೆಚ್ಚು ಸೇವಿಸುವುದು ದೇಹಕ್ಕೆ ಒಳಿತಲ್ಲ.
3 / 9
ಈರುಳ್ಳಿ ದೇಹಕ್ಕೆ ಉತ್ತಮ. ಆದರೆ ಅರ್ಧ ಬೆಂದ ಈರುಳ್ಳಿ ಅಥವಾ ಕೆಲಬವು ಹಸಿ ಈರುಳ್ಳಿ ಸೇವನೆಯಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ.
4 / 9
gಓದಿಯಲ್ಲಿರುವ ಝೆಲೆಟಿನ್ ಅಂಶಗಳು ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ. ಅದೇ ಕಾರಣಕ್ಕೆ ಗೋದಿಯ ಪದಾರ್ಥ ತಿಂದ ಮೇಲೆ ಹೆಚ್ಚು ನೀರು ಕುಡಿಯಬೇಕು ಎಂದು ಹೇಳುವುದು.
5 / 9
ಎಣ್ಣೆಯಲ್ಲಿ ಕರಿದ ಎಲ್ಲಾ ಆಹಾರಗಳು ಗ್ಯಾಸ್ಟ್ರಿಕ್ ಅನ್ನು ಉಂಟು ಮಾಡುತ್ತೆವೆ. ಹೀಗಾಗಿ ಕರಿದ ಪದಾರ್ಥಗಳ ಸೇವನೆಗೂ ಮುನ್ನ ಎಚ್ಚರವಹಿಸಿ,
6 / 9
ಸೌತೆಕಾಯಿಯಿಂದಲೂ ಅಜೀರ್ಣ ಸಮಸ್ಯೆ ಕಾಣಬಹುದು. ಸೌತೆಕಾಯಿಯ ಅತಿಯಾದ ಸೇವನೆಯಿಂದ ಹೊಟ್ಟೆ ನೋವಿನಂತಹ ಸಮಸ್ಯೆ ಕಾಡುತ್ತದೆ.
7 / 9
ಬಾರ್ಲಿಯಲ್ಲಿ ಯಥೇಚ್ಛವಾದ ಪೈಬರ್ ಗುಣಗಳಿವೆ. ಆದರೆ ಪೈಬರ್ ಅತಿಯಾದ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳಲಿದೆ.
8 / 9
ಹಾಲು, ಮೊಸರಿನಂತಹ ಡೈರಿ ಉತ್ಪನ್ನಗಳು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
9 / 9
ಅಡುಗೆಯನ್ನು ರುಚಿಯಾಗಿಸಲು ಬೆಳ್ಳುಳ್ಳಿ ಸಹಕಾರಿ. ಆದರೆ ಅದು ಅಷ್ಟೇ ಗ್ಯಾಸ್ಟ್ರಿಕ್ ಉಂಟು ಮಾಡುವ ಮಸಾಲೆ ಪದಾರ್ಥವಾಗಿದೆ.