- Kannada News Photo gallery These Zodiac Sign People Becomes Enemy According To Astrology Know The Reason Why
Astrology: ಹನ್ನೆರಡು ರಾಶಿಗಳಲ್ಲಿ ಯಾರಿಗೆ ಯಾರ ಕಂಡರೆ ಆಗಲ್ಲ, ಅದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ
ಜ್ಯೋತಿಷ ಪ್ರಕಾರವಾಗಿ, ಯಾವ ರಾಶಿಯವರನ್ನು ಕಂಡರೆ ಯಾರಿಗೆ ಆಗುವುದಿಲ್ಲ, ಶತ್ರುತ್ವ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Updated on: Aug 31, 2021 | 7:54 AM

ನಿಮಗೆ ತಮಾಷೆ ಅನಿಸಬಹುದಾದರೂ ಆಸಕ್ತಿಕರವಾದ ಜ್ಯೋತಿಷದ ಸಂಗತಿಯೊಂದನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ಅದೇನು ಅಂದರೆ, ಯಾವ ರಾಶಿಯವರಿಗೆ ಯಾರ ಜತೆಗೆ ವೈರತ್ವ ಬೆಳೆಯುತ್ತದೆ ಎಂಬ ಬಗೆಗಿನ ಮಾಹಿತಿ ಇದು. ಮೇಲ್ನೋಟಕ್ಕೆ ಇವೆಲ್ಲಾ ಸಾಧ್ಯವಾ ಎಂಬ ಪ್ರಶ್ನೆ ನಿಮಗೆ ಈ ಕ್ಷಣಕ್ಕೆ ಉದ್ಭವಿಸಿದರೆ, ಒಮ್ಮೆ ಪರಿಶೀಲನೆಯನ್ನೇ ಮಾಡಿಕೊಂಡು ಬಿಡಿ. ಈ ಲೇಖನದಲ್ಲಿ ಹನ್ನೆರಡೂ ರಾಶಿಯವರ ಬಗ್ಗೆ ಮಾಹಿತಿ ಇದೆ. ಅಂದರೆ, ಮೇಷದಿಂದ ಮೀನ ರಾಶಿಯವರ ತನಕ ಯಾರಿಗೆ ಯಾರ ಜತೆಗೆ ವೈಷಮ್ಯ ಅಥವಾ ವೈರತ್ವ ಎಂಬುದನ್ನು ನೋಡಿಕೊಂಡು ಬಂದುಬಿಡೋಣ.

ಮೇಷ ಮೇಷ ರಾಶಿಯವರ ಶತ್ರುಗಳೆಂದರೆ ಮತ್ತೊಂದು ಮೇಷ ಹಾಗೂ ಸಿಂಹ. ಪ್ರತಿಯೊಂದಕ್ಕೂ ಒತ್ತಡ ಹೇರುವ ಇವರ ಸ್ವಭಾವವು ಮತ್ತೊಬ್ಬ ಮೇಷ ರಾಶಿಯವರನ್ನು ಶತ್ರುವನ್ನಾಗಿ ಮಾಡುತ್ತದೆ. ಏಕೆಂದರೆ ಇಬ್ಬರಿಗೂ ಅದೇ ಸ್ವಭಾವ ಇರುತ್ತದೆ. ಇನ್ನು ಮೇಷ ಹಾಗೂ ಸಿಂಹ ಎರಡಕ್ಕೂ ತನ್ನದೇ ಆಗಬೇಕು ಎಂಬ ಹಠ ಜಾಸ್ತಿ. ಸಿಂಹದವರು ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು, ದ್ವೇಷ ಸಾಧನೆ ಮಾಡುತ್ತಾರೆ. ಆದರೆ ಮೇಷದವರು ವಾಗ್ವಾದದಲ್ಲೇ ನಿಲ್ಲಿಸುತ್ತಾರೆ.

ಹನ್ನೆರಡು ರಾಶಿ ಚಕ್ರದ ಪೈಕಿಯೇ ಅತ್ಯಂತ ಹಠಮಾರಿ ವ್ಯಕ್ತಿಗಳೆಂದರೆ ಅದು ವೃಷಭ ರಾಶಿಯವರು. ಇವರಿಗೆ ಕುಂಭ ಮತ್ತು ವೃಶ್ಚಿಕ ರಾಶಿಯವರನ್ನು ದೊಡ್ಡ ಶತ್ರುಗಳನ್ನಾಗಿ ಮಾಡುತ್ತದೆ. ಇವರೆಲ್ಲರೂ ಯಾವಾಗಲೂ ತಮಗೆ ಬೇಕಾದುದನ್ನು ಪಡೆಯಲು ಶತಾಯಗತಾಯ ಯತ್ನಿಸುತ್ತಾರೆ. ಆದ್ದರಿಂದ ಯಾರಾದರೂ ತಮ್ಮ ದೃಷ್ಟಿಕೋನವನ್ನು ಒಪ್ಪುವುದಿಲ್ಲ ಎಂದು ಅವರು ಗಮನಿಸಿದಾಗ ಅದರಿಂದ ಉದ್ವೇಗಕ್ಕೆ ಒಳಗಾಗುತ್ತಾರೆ.

ಮೂಲತಃ ಮಿಥುನ ರಾಶಿಯವರು ಸ್ನೇಹಪರರಾಗಿರುತ್ತಾರೆ. ಆದರೆ ಅವರ ಶತ್ರುಗಳೆಂದರೆ ಮತ್ತೊಬ್ಬ ಮಿಥುನ ಮತ್ತು ಮಕರ ರಾಶಿಗಳವರಿ. ಮಿಥುನ ರಾಶಿಯವರು ತಮ್ಮನ್ನು ಪ್ರತಿ ದೃಷ್ಟಿಕೋನದಲ್ಲೂ ಯಾವಾಗಲೂ ಸರಿ ಎಂದು ಪರಿಗಣಿಸುತ್ತಾರೆ. ಮತ್ತು ಈ ಕಾರಣಕ್ಕೆ ಮತ್ತೊಬ್ಬ ಮಿಥುನ ರಾಶಿಯವರಿಗೆ ಮಿಥುನ ದೊಡ್ಡ ಶತ್ರುವಾಗಿ ಮಾರ್ಪಡುತ್ತದೆ. ಏಕೆಂದರೆ ಇಬ್ಬರೂ ತಮ್ಮದೇ ತೀರ್ಪನ್ನು ಮುಂದಿಡಲು ಕಾದಾಡುತ್ತಾರೆ.

ಮೇಷ ಮತ್ತು ಧನು ರಾಶಿಯವರು ಕರ್ಕಾಟಕ ರಾಶಿಯವರ ಅತಿದೊಡ್ಡ ಶತ್ರುಗಳು. ಇದಕ್ಕೆ ಕಾರಣ ಏನೆಂದರೆ, ಕರ್ಕಾಟಕ ರಾಶಿಯವರ ಅತಿ ಭಾವುಕತೆ ಮತ್ತು ಸೂಕ್ಷ್ಮತೆ. ಕರ್ಕಾಟಕ ರಾಶಿಯವರು ತಮ್ಮ ತೀವ್ರವಾದ ಭಾವನೆಗಳನ್ನು ನಂಬಿಕಸ್ತರೊಂದಿಗೆ ಮಾತ್ರ ಹಂಚಿಕೊಳ್ಳುತ್ತಾರೆ. ಆದರೆ ಮೇಷ ರಾಶಿಯವರು ತಮ್ಮ ದುಃಖದ ಕ್ಷಣವನ್ನು ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳಲ್ಲಿ ಕೂಡ ಹಂಚಿಕೊಳ್ಳಬಹುದು. ಇದು ಕರ್ಕಾಟಕ ರಾಶಿಯವರನ್ನು ಸಿಟ್ಟಿಗೇಳುವಂತೆ ಮಾಡಬಹುದು. ಮತ್ತು ಧನು ರಾಶಿ ನಿಜವಾಗಿಯೂ ಭಾವನಾತ್ಮಕ ಸಂಗತಿಗಳ ಮೇಲೆ ಹೆಚ್ಚು ಗಮನ ನೀಡುವುದಿಲ್ಲ. ಇದರಿಂದ ಕರ್ಕಾಟಕ ರಾಶಿಯವರನ್ನು ನೋಯಿಸುತ್ತದೆ.

ಸಿಂಹ ರಾಶಿಯವರು ವೃಷಭ ಮತ್ತು ವೃಶ್ಚಿಕ ರಾಶಿಯವರೊಂದಿಗೆ ಉತ್ತಮ ಸಂಬಂಧ ಹೊಂದುವುದು ಕಷ್ಟ. ಅದಕ್ಕೆ ಕಾರಣ ಅಹಂಕಾರ ಮತ್ತು ಹಠಮಾರಿತನ. ಇತರರು ಏನು ಹೇಳುತ್ತಿದ್ದರೂ ಅವರು ಯಾವಾಗಲೂ ತಮ್ಮ ವಾದವನ್ನೇ ಸರಿ ಎಂದು ಸಾಬೀತುಪಡಿಸಲು ಬಯಸುತ್ತಾರೆ.

ಕನ್ಯಾ ರಾಶಿಯವರು ತಾಳ್ಮೆ, ಯೋಜನೆ, ನಿರ್ವಹಣೆ ಮಾಡುವ ವಿಚಾರಕ್ಕೆ ನಿಸ್ಸೀಮರು. ಮೇಷ ಮತ್ತು ಧನು ರಾಶಿಯವರ ಮೇಲೆ ಭಾರೀ ಕೋಪಗೊಳ್ಳುವಂಥ ಸನ್ನಿವೇಶಗಳು ನಿರ್ಮಾಣ ಆಗುತ್ತವೆ. ಕನ್ಯಾ ರಾಶಿಯವರು ಎಲ್ಲ ಕೆಲಸವನ್ನೂ ಸೂಕ್ಷ್ಮವಾಗಿ ಮಾಡುತ್ತಾರೆ. ಆದರೆ ಈ ಎರಡು ರಾಶಿಚಕ್ರದವರು ಸೂಕ್ಷ್ಮವಾಗಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಎಲ್ಲವನ್ನೂ ಸಹಜವಾಗಿ ಇರಲು ಬಯಸುತ್ತಾರೆ.

ತುಲಾ ರಾಶಿಯವರು ಎಲ್ಲರನ್ನೂ ಸಂತೋಷಪಡಿಸಲು ಪ್ರತಿಯೊಬ್ಬರ ಬಗ್ಗೆ ಯೋಚಿಸುತ್ತಾರೆ. ಆದರೆ ಅವರು ವೃಶ್ಚಿಕ ಮತ್ತು ಕನ್ಯಾ ರಾಶಿಯವರೊಂದಿಗೆ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ ಏಕೆಂದರೆ ವೃಶ್ಚಿಕ ರಾಶಿಯವರು ಪ್ರೀತಿಯನ್ನು ಸಾಮಾನ್ಯವಾಗಿ ತೋರಿಸುವುದಿಲ್ಲ, ಇದು ತುಲಾ ರಾಶಿಯವರಿಗೆ ನಿಭಾಯಿಸುವುದು ಕಷ್ಟ. ಇನ್ನು ಕನ್ಯಾ ರಾಶಿಯವರು ಬಹಳ ಶೀಘ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ತುಲಾ ರಾಶಿಯವರಿಂದ ನಿರ್ಧರಿಸಲು ಸಹ ಸಾಧ್ಯವಿಲ್ಲ.

ವೃಶ್ಚಿಕ ರಾಶಿಯವರ ನಡೆ ಹೆಚ್ಚು ಕುಶಲತೆಯಿಂದ ಕೂಡಿರುತ್ತವೆ. ಮತ್ತು ಜನರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುವಂತೆ ಯಾವಾಗಲೂ ಯೋಜನೆಗಳನ್ನು ಮಾಡುತ್ತಾರೆ. ಆದ್ದರಿಂದ ಅವರು ಸಿಂಹ ಮತ್ತು ಕುಂಭ ರಾಶಿಯವರೊಂದಿಗೆ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ. ಸಿಂಹ ರಾಶಿಯವರು ತುಂಬಾ ಕಾಂಪಿಟೇಟಿವ್ ಆಗಿರುವುದರಿಂದ ವೃಶ್ಚಿಕ ರಾಶಿಯವರಿಗೆ ಹೋರಾಡಲು ಕಷ್ಟವಾಗುತ್ತದೆ. ಮತ್ತು ಕುಂಭ ರಾಶಿಯವರು ಕುಶಲತೆ ಅಥವಾ ಮನಸ್ಸಿನ ಆಟಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅವರು ವೃಶ್ಚಿಕ ರಾಶಿಯವರ ಮೇಲೆ ಸುಲಭವಾಗಿ ಕೋಪಗೊಳ್ಳುತ್ತಾರೆ.

ಧನು ರಾಶಿಯವರು ಮೀನ ಮತ್ತು ಕುಂಭದೊಂದಿಗೆ ಪೈಪೋಟಿಯನ್ನು ಹೊಂದಿರುತ್ತಾರೆ. ಧನು ರಾಶಿಯ ಜನರು ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮುಂದುವರಿಯಲು ಬಯಸುತ್ತಾರೆ. ಆದರೆ ಮೀನ ರಾಶಿಯವರು ಅದೇ ವಿಷಯವನ್ನು ಹಿಡಿದಿಡಲು ಬಯಸುತ್ತಾರೆ. ಧನು ಮತ್ತು ಕುಂಭ ರಾಶಿಯವರು ನಿಜವಾಗಿಯೂ ಇಡೀ ಜೀವನ ಹೋರಾಡಬಹುದು. ಏಕೆಂದರೆ ಅವರು ಎಂದಿಗೂ ಪರಸ್ಪರ ಒಪ್ಪುವುದಿಲ್ಲ ಮತ್ತು ವಾದದಲ್ಲಿ ಕೊನೆಯ ಮಾತನ್ನು ತಾವೇ ಹೇಳಲು ಪ್ರಯತ್ನಿಸುತ್ತಾರೆ.

ಈ ಜನರು ತಮ್ಮ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಬಲವಾದ ವ್ಯಕ್ತಿತ್ವಕ್ಕೆ ಹೆಸರುವಾಸಿ. ಆದರೆ ಕರ್ಕಾಟಕ ಮತ್ತು ತುಲಾ ರಾಶಿಯವರೊಂದಿಗೆ ವ್ಯವಹರಿಸುವಾಗ ತಮ್ಮ ಅತ್ಯುತ್ತಮ ನಡವಳಿಕೆಯಂತೆ ನಡೆದುಕೊಳ್ಳುವುದಿಲ್ಲ. ಕರ್ಕಾಟಕ ರಾಶಿಯವರ ಸೌಮ್ಯ ಸ್ವಭಾವವನ್ನು ಮಕರ ರಾಶಿಯವರು ಮೆಚ್ಚಿಕೊಳ್ಳುವುದಿಲ್ಲ. ಇನ್ನು ಯಾವಾಗಲೂ ಇತರರನ್ನು ಸಂತುಷ್ಟಗೊಳಿಸಲು ಪ್ರಯತ್ನಿಸಲು ಇಷ್ಟಪಡುವ ತುಲಾ ರಾಶಿಯವರ ಬಗ್ಗೆ ಕೂಡ ಮಕರ ರಾಶಿಯವರು ದ್ವೇಷ ಕಾರುತ್ತಾರೆ.

ಈ ಕುಂಭ ರಾಶಿಯವರು ಮಕರ ಮತ್ತು ವೃಷಭ ರಾಶಿಯವರೊಂದಿಗೆ ಶತ್ರುಗಳಾಗುತ್ತಾರೆ. ವೃಷಭ ರಾಶಿಯವರು ನಿಯಮಗಳನ್ನು ಅನುಸರಿಸಲು ಇಷ್ಟಪಡುತ್ತಾರೆ ಮತ್ತು ಕುಂಭ ಎಲ್ಲವನ್ನೂ ತನ್ನದೇ ಆದ ರೀತಿಯಲ್ಲಿ ಮಾಡಲು ಬಯಸುತ್ತದೆ. ಇನ್ನು ಮಕರ ರಾಶಿಯವರು ಕುಂಭದವರ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುವುದರಿಂದ ತಿಕ್ಕಾಟ ಆಗುತ್ತದೆ.

ಮೀನ ರಾಶಿಯವರು ಸೂಕ್ಷ್ಮ ಮತ್ತು ಕ್ರಿಯಾತ್ಮಕವಾದವರು. ಇವರಿಗೆ ಕನ್ಯಾ ಮತ್ತು ಮಿಥುನ ರಾಶಿಯವರೊಂದಿಗೆ ಚೆನ್ನಾಗಿರುವುದಕ್ಕೆ ಕಷ್ಟ. ಏಕೆಂದರೆ ಈ ಎರಡು ಚಿಹ್ನೆಗಳು ಸಾಮಾನ್ಯವಾಗಿ ಎಲ್ಲವನ್ನೂ ನೋಡುವ ವಿಧಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಮಿಥುನ ರಾಶಿಯವರು ಇತರರೊಂದಿಗೆ ಮಾತನಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತಾರೆ ಮತ್ತು ಮೀನ ರಾಶಿಯವರು ತುಂಬಾ ನಾಚಿಕೆ ಸ್ವಭಾವದವರು. ಕನ್ಯಾರಾಶಿಯವರು ಗಡಿಗಳನ್ನು ಹಾಕಿಕೊಳ್ಳುವುದನ್ನು ನಂಬುತ್ತಾರೆ. ಈ ಸ್ವಭಾವವು ಮೀನ ರಾಶಿಯನ್ನು ತುಂಬಾ ನೋಯಿಸುತ್ತದೆ.




