R22 Everest: ಪೆಡಲ್ ತುಳಿಯದೇ, 510 ಕಿ.ಮೀ ಮೈಲೇಜ್ ನೀಡುತ್ತೆ ಈ ಸೈಕಲ್..!
TV9 Web | Updated By: ಝಾಹಿರ್ ಯೂಸುಫ್
Updated on:
Jul 31, 2022 | 5:32 PM
R22 Everest E-Cycle Price: R22 ಎವರೆಸ್ಟ್ ಸೈಕಲ್ನಲ್ಲಿ 3,260 Wh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ. ಈ ಬ್ಯಾಟರಿ ಪ್ಯಾಕ್ ಅನ್ನು ಸಹ ಸೈಕಲ್ನಿಂದ ತೆಗೆಯಬಹುದು. ಅಂದರೆ ಎರಡು ಬ್ಯಾಟರಿ ಇದ್ದರೆ ಬದಲಿಸುತ್ತಾ ಇರಬಹುದು.
1 / 6
ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಒಂದು ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯಾದರೆ, ಮತ್ತೊಂದು ಕಾರಣ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೊಸ ತಲೆಮಾರು ಮುಂದಾಗಿರುವುದು. ಇದನ್ನೇ ಬಂಡವಾಳ ಮಾಡಿಕೊಂಡು ಅಮೆರಿಕದ ಇ-ಬೈಕ್ ತಯಾರಕ Optbike ಹೊಸ ಸೈಕಲ್ ಅನ್ನು ಪರಿಚಯಿಸಿದೆ. ಆದರೆ ಇದು ಎಲೆಕ್ಟ್ರಿಕ್ ಬೈಸಿಕಲ್ ಎಂಬುದೇ ಇಲ್ಲಿ ವಿಶೇಷ. ಅಂದರೆ ಸಣ್ಣ ಮಾದರಿಯ ಬೈಕ್ ಪ್ರಿಯರಿಗಾಗಿ ಅಪ್ಟಿಬೈಕ್ ಹೊಸ ಮಾದರಿಯ ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಇ-ಸೈಕಲ್ನಲ್ಲಿ ಹಲವು ವಿಶೇಷತೆಗಳನ್ನು ನೀಡಲಾಗಿದ್ದು, ಅವುಗಳನ್ನು ತಿಳಿದರೆ ನೀವು ಖಂಡಿತವಾಗಿಯೂ ಅಚ್ಚರಿಪಡುತ್ತೀರಿ...ಹಾಗಿದ್ರಿ ಅಪ್ಟಿಬೈಕ್ನ ವಿಶೇಷಗಳೇನು ನೋಡೋಣ...
2 / 6
ಈ ಇ-ಸೈಕಲ್ನ ಹೆಸರು R22 ಎವರೆಸ್ಟ್. ಈ ಸೈಕಲ್ ಎವರೆಸ್ಟ್ ಬೆಟ್ಟವನ್ನೂ ಹತ್ತಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹೀಗಾಗಿ ಈ ಸೈಕಲ್ಗೆ ಆರ್22 ಎವರೆಸ್ಟ್ ಎನ್ನುವ ಹೆಸರಿಡಲಾಗಿದೆ.
3 / 6
ಇನ್ನು ಈ ಸೈಕಲ್ ನೀಡುವ ರೇಂಜ್ (ಮೈಲೇಜ್) ಪ್ರಪಂಚದಾದ್ಯಂತ ಅನೇಕ ಎಲೆಕ್ಟ್ರಿಕ್ ಕಾರುಗಳನ್ನು ಮೀರಿಸುತ್ತದೆ. ಅಂದರೆ R22 ಎವರೆಸ್ಟ್ ಸೈಕಲ್ನಲ್ಲಿ 3,260 Wh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ. ಈ ಬ್ಯಾಟರಿ ಪ್ಯಾಕ್ ಅನ್ನು ಸಹ ಸೈಕಲ್ನಿಂದ ತೆಗೆಯಬಹುದು. ಅಂದರೆ ಎರಡು ಬ್ಯಾಟರಿ ಇದ್ದರೆ ಬದಲಿಸುತ್ತಾ ಇರಬಹುದು.
4 / 6
ಹಾಗೆಯೇ ಈ ಸೈಕಲ್ನಲ್ಲಿ ನೀಡಲಾಗಿರುವ 3.26 kWh ಬ್ಯಾಟರಿ ಅನೇಕ ಎಲೆಕ್ಟ್ರಿಕ್ ಸ್ಕೂಟರ್ಗಳು ಮತ್ತು ಬೈಕ್ಗಳಲ್ಲಿ ಕಂಡುಬರುವ ಬ್ಯಾಟರಿ ಪ್ಯಾಕ್ಗಿಂತ ದೊಡ್ಡದಾಗಿದೆ. R22 ಎವರೆಸ್ಟ್ನ ಇನ್ನೊಂದು ವಿಶೇಷತೆಯೆಂದರೆ ಈ ಸೈಕಲ್ ಅನ್ನು ನೀವು ಗಂಟೆಗೆ 58 ಕಿ.ಮೀ ವೇಗದಲ್ಲಿ ಚಲಾಯಿಸಬಹುದು.
5 / 6
ಇನ್ನು ಈ ಸೈಕಲ್ನಲ್ಲಿ ಕಾರ್ಬನ್-ಫೈಬರ್ ಫ್ರೇಮ್ ಮತ್ತು ಸ್ವಿಂಗ್ ಆರ್ಮ್ ನೀಡಲಾಗಿದೆ. ಹಾಗೆಯೇ ದೀರ್ಘ ಪ್ರಯಾಣದ ಸವಾಲಿನ ಪರಿಸ್ಥಿತಿಗಳನ್ನು ಗಮನದಲ್ಟಿಟ್ಟುಕೊಂಡು ಆರ್22 ಅನ್ನು ವಿನ್ಯಾಸ ಮಾಡಲಾಗಿದೆ. ಹಾಗೆಯೇ ವೇಗವನ್ನು ನಿಯಂತ್ರಿಸುವ ಸಲುವಾಗಿ ಇದರಲ್ಲಿ ಡಿಸ್ಕ್ ಬ್ರೇಕ್, ಎಲ್ಸಿಡಿ ಡಿಸ್ಪ್ಲೇ ಸೇರಿದಂತೆ ಇನ್ನೂ ಹಲವು ಫೀಚರ್ಗಳನ್ನು ಈ ಸೈಕಲ್ನಲ್ಲಿ ನೀಡಲಾಗಿದೆ.
6 / 6
ಇನ್ನು ಆರ್22 ಎವರೆಸ್ಟ್ ಸೈಕಲ್ನಲ್ಲಿ ನೀಡಲಾಗಿರುವ ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ 510 ಕಿಮೀ ವರೆಗೆ ಚಲಿಸಬಹುದು ಎಂದು ಆಪ್ಟಿಬೈಕ್ ಕಂಪೆನಿ ಹೇಳಿಕೊಂಡಿದೆ. ಸದ್ಯ ಅಮೆರಿಕದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿರುವ ಆರ್22 ಎವರೆಸ್ಟ್ನ ಬೆಲೆ US$ 18,900. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 15 ಲಕ್ಷ ರೂ.