- Kannada News Photo gallery Tokyo paralympics india on best 24th rank in medal tally china tops with double century
Tokyo Paralympics: ಪ್ಯಾರಾಲಿಂಪಿಕ್ಸ್ಗೆ ವರ್ಣರಂಜಿತ ತೆರೆ; ಪದಕ ಪಟ್ಟಿಯಲ್ಲಿ ಯಾರಿಗೆ ಮೊದಲ ಸ್ಥಾನ, ಭಾರತಕ್ಕೆ ಸಿಕ್ಕ ಪದಕಗಳೆಷ್ಟು?
Tokyo Paralympics: ಭಾರತವು ಅತ್ಯುತ್ತಮ ಪ್ರದರ್ಶನದೊಂದಿಗೆ 24 ನೇ ಸ್ಥಾನದಲ್ಲಿದೆ. ಭಾರತವು ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 19 ಪದಕಗಳನ್ನು ಗೆದ್ದಿದೆ.
Updated on: Sep 05, 2021 | 8:35 PM

ಟೋಕಿಯೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ವರ್ಣರಂಜಿತ ಕಾರ್ಯಕ್ರಮದ ನಡುವೆ ಪ್ಯಾರಾಲಿಂಪಿಕ್ ಕ್ರೀಡಾಕೂಟ ಕೊನೆಗೊಂಡಿತು. ಭಾರತಕ್ಕೆ ಈ ಕ್ರೀಡಾಕೂಟ ಬಹಳ ವಿಶೇಷವಾಗಿತ್ತು. ಅಲ್ಲಿ ಭಾರತ ತಮ್ಮ ಐತಿಹಾಸಿಕ ಪ್ರದರ್ಶನದಲ್ಲಿ 19 ಪದಕಗಳನ್ನು ಗೆದ್ದುಕೊಂಡಿತು. ಇದು ಇಲ್ಲಿಯವರೆಗಿನ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.

ಮೆಡಲ್ ಟೆಲಿ ಬಗ್ಗೆ ಮಾತನಾಡುವುದಾದರೆ, ಚೀನಾದ ಪ್ರಾಬಲ್ಯವನ್ನು ಇಲ್ಲಿ ಕಾಣಬಹುದು. ಚೀನಾ ಇಲ್ಲಿ ದ್ವಿಶತಕ ಪದಕಗಳನ್ನು ಗಳಿಸುವ ಮೂಲಕ 207 ಪದಕಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅವರು 96 ಚಿನ್ನ, 60 ಬೆಳ್ಳಿ ಮತ್ತು 51 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಗ್ರೇಟ್ ಬ್ರಿಟನ್ ತನ್ನ ಹೆಸರಿಗೆ 124 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅವರು 41 ಚಿನ್ನ, 38 ಬೆಳ್ಳಿ ಮತ್ತು 31 ಕಂಚು ಗೆದ್ದರು. ಅಮೆರಿಕ ಇಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕ 37 ಚಿನ್ನ, 36 ಬೆಳ್ಳಿ ಮತ್ತು 31 ಕಂಚು ಸೇರಿದಂತೆ 104 ಪದಕಗಳನ್ನು ಗೆದ್ದಿದೆ. 118 ಪದಕಗಳೊಂದಿಗೆ ರಷ್ಯಾ ಪ್ಯಾರಾಲಿಂಪಿಕ್ ಸಮಿತಿಯು ನಾಲ್ಕನೇ ಸ್ಥಾನ ಮತ್ತು ನೆದರ್ಲ್ಯಾಂಡ್ಸ್ 59 ಪದಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಭಾರತವು ಅತ್ಯುತ್ತಮ ಪ್ರದರ್ಶನದೊಂದಿಗೆ 24 ನೇ ಸ್ಥಾನದಲ್ಲಿದೆ. ಭಾರತವು ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 19 ಪದಕಗಳನ್ನು ಗೆದ್ದಿದೆ. ಈ ಹಿಂದೆ 2016 ರಲ್ಲಿ ರಿಯೋದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ಪದಕಗಳನ್ನು ಗೆದ್ದಿತ್ತು.
