
ಸಾಯಿ ಪಲ್ಲವಿ ಅಭಿಮಾನಿಗಳ ವಲಯದಲ್ಲಿ ‘ಗಾರ್ಗಿ’ ಚಿತ್ರದ ಬಗ್ಗೆ ಸಖತ್ ನಿರೀಕ್ಷೆ ಇದೆ. ಜುಲೈ 15ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾಗೆ ಗೌತಮ್ ರಾಮಚಂದ್ರನ್ ನಿರ್ದೇಶನ ಮಾಡಿದ್ದಾರೆ.

ಸಾಯಿ ಪಲ್ಲವಿ ಅವರನ್ನು ಸಿಂಪಲ್ ಲುಕ್ನಲ್ಲಿ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಈಗ ಅವರು ‘ಗಾರ್ಗಿ’ ಸಿನಿಮಾದಲ್ಲಿ ಅದೇ ರೀತಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಫೋಟೋಗಳು ಗಮನ ಸೆಳೆಯುತ್ತಿವೆ.

ಚಿತ್ರರಂಗದಲ್ಲಿ ಸಾಯಿ ಪಲ್ಲವಿ ಅವರು ಗ್ಲಾಮರ್ ನಂಬಿಕೊಂಡು ಸಿನಿಮಾ ಒಪ್ಪಿಕೊಳ್ಳುವವರಲ್ಲ. ಅಭಿನಯದ ಮೂಲಕವೇ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ‘ಗಾರ್ಗಿ’ ಚಿತ್ರದಲ್ಲಿ ಅವರ ಪಾತ್ರ ಹೇಗಿರಬಹುದು ಎಂಬ ಕೌತುಕ ಮೂಡಿದೆ.

ಸಾಯಿ ಪಲ್ಲವಿ ಒಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದರೆ ಅದರಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಈ ಸಿನಿಮಾವನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡಲು ನಟ ಸೂರ್ಯ ಮತ್ತು ಅವರ ಪತ್ನಿ ಜ್ಯೋತಿಕಾ ಅವರು ಮುಂದೆ ಬಂದಿದ್ದಾರೆ.

ಒಂದೇ ತಿಂಗಳ ಅಂತರದಲ್ಲಿ ಸಾಯಿ ಪಲ್ಲವಿ ಅವರ ಎರಡು ಸಿನಿಮಾಗಳು ರಿಲೀಸ್ ಎಂಬುದು ವಿಶೇಷ. ಜೂನ್ 17ರಂದು ‘ವಿರಾಟ ಪರ್ವಂ’ ಬಿಡುಗಡೆ ಆಗಿತ್ತು. ಜುಲೈ 15ಕ್ಕೆ ‘ಗಾರ್ಗಿ’ ತೆರೆಕಾಣುತ್ತಿದೆ.
Published On - 10:36 am, Mon, 4 July 22