- Kannada News Photo gallery Tomato Price Hike: What vegetable can replace tomatoes? Checkout the details here
Tomato Price Hike: ಟೊಮೊಟೋ ಬೆಲೆ ಗಗನಕ್ಕೇರಿದೆ; ಟೊಮೆಟೋ ಬದಲಿಗೆ ಈ ಪದಾರ್ಥಗಳನ್ನು ಬಳಸಿ
ಟೊಮೆಟೋ ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ ಅನ್ನುವವರೇ ಹೆಚ್ಚು. ಆದ್ದರಿಂದ ಈ ಪರ್ಯಾಯ ಪದಾರ್ಥಗಳನ್ನು ಪಾಕ ವಿಧಾನದಲ್ಲಿ ಬಳಸಿ. ಟೊಮೆಟೋದಷ್ಟೇ ರುಚಿಯನ್ನು ಪಡೆಯಿರಿ.
Updated on: Jul 07, 2023 | 12:55 PM

ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗಾ ಕೆಲವು ರಾಜ್ಯಗಳಲ್ಲಿ ಕೆಜಿಗೆ 250 ರೂಪಾಯಿ ವರೆಗೆ ತಲುಪಿದೆ.

ಟೊಮೆಟೋ ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ ಅನ್ನುವವರೇ ಹೆಚ್ಚು. ಆದ್ದರಿಂದ ಈ ಪರ್ಯಾಯ ಪದಾರ್ಥಗಳನ್ನು ಪಾಕ ವಿಧಾನದಲ್ಲಿ ಬಳಸಿ. ಟೊಮೆಟೋದಷ್ಟೇ ರುಚಿಯನ್ನು ಪಡೆಯಿರಿ.

ಮಾವಿನ ಕಾಯಿಯನ್ನು ನಿಮ್ಮ ಅಡುಗೆಯಲ್ಲಿ ಬಳಸುವುದರಿಂದ ಇದು ಹುಳಿಯೊಂದಿಗೆ ಉತ್ತಮ ರುಚಿಯನ್ನು ನೀಡುತ್ತದೆ. ಇದು ನಿಮಗೆ ಆಹಾರದಲ್ಲಿ ಟೊಮೆಟೋಕ್ಕಿಂತ ಹೆಚ್ಚಿನ ರುಚಿಯನ್ನು ನೀಡುತ್ತದೆ.

ಹುಣಸೆ ಹಣ್ಣು: ಟೊಮೆಟೋಗೆ ಪರ್ಯಾಯವಾಗಿ ಹುಣಸೆ ಹಣ್ಣು ಅಥವಾ ಅದರ ರಸವನ್ನು ಬಳಸಿ. ಬೆಲೆ ಕಡಿಮೆ ಇರುವುದರ ಜೊತೆಗೆ ರುಚಿಯಂತೂ ಅದ್ಭುತ.

ಮೊಸರು: ಟೊಮೆಟೋಗೆ ಮತ್ತೊಂದು ಪರ್ಯಾಯವೆಂದರೆ ಮೊಸರು. ಇದು ಹುಳಿಯನ್ನು ಹೊಂದಿರುವುರಿಂದ ಅಡುಗೆಗೆ ಉತ್ತಮ ರುಚಿಯನ್ನು ನೀಡುತ್ತದೆ.

ಟೊಮೆಟೋ ಕೆಚಪ್: ಇದು ಟೊಮೆಟೋ ರುಚಿಯನ್ನು ನೀಡುವುದರ ಜೊತೆಗೆ ಟೊಮೆಟೋ ಬೆಲೆಗೆ ಹೋಲಿಸಿದರೆ ಅಗ್ಗವಾಗಿರುತ್ತದೆ.




