Tourist Places: ಅಕ್ಟೋಬರ್​ನಲ್ಲಿ ಟ್ರಿಪ್​ ಪ್ಲ್ಯಾನ್​ ಮಾಡುತ್ತಿದ್ದೀರಾ? ಹಾಗಾದರೆ ಇಲ್ಲಿವೆ ನೋಡಿ ಸುಂದರ ತಾಣಗಳು

ಅಕ್ಟೋಬರ್ ತಿಂಗಳಿನಲ್ಲಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ. ಇದರೊಂದಿಗೆ ಹಬ್ಬ ಹರಿದಿನಗಳಲ್ಲಿ ಪ್ರವಾಸ ಮಾಡುವ ಮಜಾನೇ ಬೇರೆ. ನೀವು ಈ ಕೆಲ ಗಿರಿಧಾಮಗಳಿಗೆ ಭೇಟಿ ನೀಡಬಹುದು.

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2022 | 9:18 PM

ಅಕ್ಟೋಬರ್ ತಿಂಗಳಿನಲ್ಲಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ.
 ಇದರೊಂದಿಗೆ ಹಬ್ಬ ಹರಿದಿನಗಳಲ್ಲಿ ಪ್ರವಾಸ ಮಾಡುವ ಮಜಾನೇ ಬೇರೆ. 
ನೀವು ಭೇಟಿ ನೀಡಬಹುದಾದ ಕೆಲ ಗಿರಿಧಾಮಗಳ ಬಗ್ಗೆ ತಿಳಿಸಲಾಗಿದೆ.
ಈ ತಾಣಗಳು ತುಂಬಾ ಸುಂದರವಾಗಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.  
ಪ್ರಕೃತಿ ಪ್ರಿಯರಿಗೆ ಈ ತಾಣಗಳು ಹೇಳಿ ಮಾಡಿಸಿದಂತ್ತಿವೆ.

ಅಕ್ಟೋಬರ್ ತಿಂಗಳಿನಲ್ಲಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ. ಇದರೊಂದಿಗೆ ಹಬ್ಬ ಹರಿದಿನಗಳಲ್ಲಿ ಪ್ರವಾಸ ಮಾಡುವ ಮಜಾನೇ ಬೇರೆ. ನೀವು ಭೇಟಿ ನೀಡಬಹುದಾದ ಕೆಲ ಗಿರಿಧಾಮಗಳ ಬಗ್ಗೆ ತಿಳಿಸಲಾಗಿದೆ. ಈ ತಾಣಗಳು ತುಂಬಾ ಸುಂದರವಾಗಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಪ್ರಕೃತಿ ಪ್ರಿಯರಿಗೆ ಈ ತಾಣಗಳು ಹೇಳಿ ಮಾಡಿಸಿದಂತ್ತಿವೆ.

1 / 5
ಕಸೌಲಿ: ಕಸೌಲಿ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮ.
 ಇಲ್ಲಿನ ಪ್ರಶಾಂತ ವಾತಾವರಣ ನಿಮಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಕ್ರೈಸ್ಟ್ ಚರ್ಚ್, ಸನ್‌ಸೆಟ್ ಪಾಯಿಂಟ್, 
ಮಾಲ್ ರೋಡ್, ಮಂಕಿ ಪಾಯಿಂಟ್, ಕೃಷ್ಣ ಭವನ ದೇವಸ್ಥಾನ ಮತ್ತು ಗೂರ್ಖಾ ಕೋಟೆಯಂತಹ
 ಸ್ಥಳಗಳಿಗೆ ಭೇಟಿ ನೀಡಲು ನೀವು ಇಲ್ಲಿಗೆ ಹೋಗಬಹುದು.

ಕಸೌಲಿ: ಕಸೌಲಿ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮ. ಇಲ್ಲಿನ ಪ್ರಶಾಂತ ವಾತಾವರಣ ನಿಮಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಕ್ರೈಸ್ಟ್ ಚರ್ಚ್, ಸನ್‌ಸೆಟ್ ಪಾಯಿಂಟ್, ಮಾಲ್ ರೋಡ್, ಮಂಕಿ ಪಾಯಿಂಟ್, ಕೃಷ್ಣ ಭವನ ದೇವಸ್ಥಾನ ಮತ್ತು ಗೂರ್ಖಾ ಕೋಟೆಯಂತಹ ಸ್ಥಳಗಳಿಗೆ ಭೇಟಿ ನೀಡಲು ನೀವು ಇಲ್ಲಿಗೆ ಹೋಗಬಹುದು.

2 / 5
ಕೂನೂರು: ಈ ಗಿರಿಧಾಮ ತಮಿಳುನಾಡಿನಲ್ಲಿದೆ. ಇಲ್ಲಿರುವ ಸುಂದರ ಕಣಿವೆಗಳು ಎಂಥವರನ್ನು 
 ಆಕರ್ಷಿಸುತ್ತವೆ. ಜನಸಂದಣಿಯಿಂದ ದೂರವಾಗಿ ಕೆಲವು ಕ್ಷಣಗಳನ್ನು 
ಶಾಂತಿಯಿಂದ ಕಳೆಯಲು ಬಯಸಿದರೆ, ಈ ತಾಣಕ್ಕೆ ಹೋಗಬಹುದು. 
ಸಿಮ್ಸ್ ಪಾರ್ಕ್, ಹಿಡನ್ ವ್ಯಾಲಿ, ಕೇಟೀ ವ್ಯಾಲಿ ಮತ್ತು ಲ್ಯಾಂಬ್ಸ್ ರಾಕ್ ಮುಂತಾದ ಸ್ಥಳಗಳನ್ನು ಸಹ ನೋಡಬಹುದು.

ಕೂನೂರು: ಈ ಗಿರಿಧಾಮ ತಮಿಳುನಾಡಿನಲ್ಲಿದೆ. ಇಲ್ಲಿರುವ ಸುಂದರ ಕಣಿವೆಗಳು ಎಂಥವರನ್ನು ಆಕರ್ಷಿಸುತ್ತವೆ. ಜನಸಂದಣಿಯಿಂದ ದೂರವಾಗಿ ಕೆಲವು ಕ್ಷಣಗಳನ್ನು ಶಾಂತಿಯಿಂದ ಕಳೆಯಲು ಬಯಸಿದರೆ, ಈ ತಾಣಕ್ಕೆ ಹೋಗಬಹುದು. ಸಿಮ್ಸ್ ಪಾರ್ಕ್, ಹಿಡನ್ ವ್ಯಾಲಿ, ಕೇಟೀ ವ್ಯಾಲಿ ಮತ್ತು ಲ್ಯಾಂಬ್ಸ್ ರಾಕ್ ಮುಂತಾದ ಸ್ಥಳಗಳನ್ನು ಸಹ ನೋಡಬಹುದು.

3 / 5
ಮಹಾಬಲೇಶ್ವರ: ಈ ಗಿರಿಧಾಮ ಮಹಾರಾಷ್ಟ್ರದಲ್ಲಿದ್ದು, ಬಹಳ ಪ್ರಸಿದ್ಧವಾಗಿದೆ.
ವೆನ್ನಾ ಸರೋವರ, ಮಾಪ್ರೋ ಗಾರ್ಡನ್ ಮತ್ತು ಲಿಂಗಮಾಲಾ ಜಲಪಾತಗಳಂತಹ ಸ್ಥಳಗಳನ್ನು ನೋಡಲು 
ನೀವು ಇಲ್ಲಿಗೆ ಹೋಗಬಹುದು. 
ಸುತ್ತಲೂ ಹಸಿರಿನ ನೋಟ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.

ಮಹಾಬಲೇಶ್ವರ: ಈ ಗಿರಿಧಾಮ ಮಹಾರಾಷ್ಟ್ರದಲ್ಲಿದ್ದು, ಬಹಳ ಪ್ರಸಿದ್ಧವಾಗಿದೆ. ವೆನ್ನಾ ಸರೋವರ, ಮಾಪ್ರೋ ಗಾರ್ಡನ್ ಮತ್ತು ಲಿಂಗಮಾಲಾ ಜಲಪಾತಗಳಂತಹ ಸ್ಥಳಗಳನ್ನು ನೋಡಲು ನೀವು ಇಲ್ಲಿಗೆ ಹೋಗಬಹುದು. ಸುತ್ತಲೂ ಹಸಿರಿನ ನೋಟ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.

4 / 5
ಪಚ್ಮರ್ಹಿ: ಈ ಗಿರಿಧಾಮ ಮಧ್ಯಪ್ರದೇಶದಲ್ಲಿ ಬಹಳ ಪ್ರಸಿದ್ಧವಾಗಿದೆ. 
ಇಲ್ಲಿನ ಹಸಿರು ಪರಿಸರವನ್ನು ನೀವು ಇಷ್ಟಪಡುತ್ತೀರಿ. ಇದಲ್ಲದೆ, ನೀವು ಇಲ್ಲಿ ಜಲಪಾತದ ಸುಂದರ ನೋಟವನ್ನು ಆನಂದಿಸಬಹುದು. 
ಪುರಾತತ್ವ ಗುಹೆಗಳನ್ನು ನೋಡಲು ಇಲ್ಲಿಗೆ ಭೇಟಿ ನೀಡಬೇಕು.

ಪಚ್ಮರ್ಹಿ: ಈ ಗಿರಿಧಾಮ ಮಧ್ಯಪ್ರದೇಶದಲ್ಲಿ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಹಸಿರು ಪರಿಸರವನ್ನು ನೀವು ಇಷ್ಟಪಡುತ್ತೀರಿ. ಇದಲ್ಲದೆ, ನೀವು ಇಲ್ಲಿ ಜಲಪಾತದ ಸುಂದರ ನೋಟವನ್ನು ಆನಂದಿಸಬಹುದು. ಪುರಾತತ್ವ ಗುಹೆಗಳನ್ನು ನೋಡಲು ಇಲ್ಲಿಗೆ ಭೇಟಿ ನೀಡಬೇಕು.

5 / 5
Follow us