ಬಿಳಿಗಿರಿರಂಗನ ಬನದಲ್ಲಿ ಮಂಜಿನಾಟಕ್ಕೆ ಮರುಳಾದ ಪ್ರವಾಸಿಗರು! ಸೆಲ್ಫಿಗೆ ಪೋಸು ಕೊಟ್ಟು, ಕಣ್ಮನ ತುಂಬಿಕೊಂಡ ಕಾಲೇಜು ಕನ್ಯೆಯರು; ಇಲ್ಲಿದೆ ಫೋಟೋಸ್

Edited By: ಕಿರಣ್ ಹನುಮಂತ್​ ಮಾದಾರ್

Updated on: Jul 09, 2023 | 1:34 PM

ಪ್ರಕೃತಿ ವಿಸ್ಮಯಕ್ಕೆ ಮರಳಾಗದಿರುವ ಮನುಜನಿಲ್ಲ. ಪ್ರಕೃತಿಯ ಸೌಂದರ್ಯಕ್ಕೆ ಮನಸೋತವರು ವಿಕೆಂಡ್​ನಲ್ಲಿ ಓಮ್ಮೆಯಾದ್ರು, ಬಿ.ಆರ್ ಹಿಲ್ಸ್​ಗೆ ಬರದೆ ಇರೋದಿಲ್ಲ. ಮಂಜಿನ ಮಾಯಜಾಲಕ್ಕೆ ಮನಸೋತ ಯಾತ್ರಿಕರು ವಿಕೇಂಡ್​ನಲ್ಲಿ ಬಿ.ಆರ್ ಹಿಲ್ಸ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದು, ಇಲ್ಲಿದೆ ಫೋಟೋಸ್​.

1 / 8
ಸುತ್ತಲೂ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳು, ಬೆಟ್ಟಕ್ಕೆ ಮುತ್ತಿಕ್ಕುತ್ತಿರುವ ಬೆಳ್ಳಿ ಮೋಡಗಳು. ಈ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಅಷ್ಟಕ್ಕೂ ಈ ಅದ್ಭುತ ಮನಮೋಹಕ ದೃಶ್ಯ ಸೃಷ್ಟಿಯಾಗಿರೋದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ.

ಸುತ್ತಲೂ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳು, ಬೆಟ್ಟಕ್ಕೆ ಮುತ್ತಿಕ್ಕುತ್ತಿರುವ ಬೆಳ್ಳಿ ಮೋಡಗಳು. ಈ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಅಷ್ಟಕ್ಕೂ ಈ ಅದ್ಭುತ ಮನಮೋಹಕ ದೃಶ್ಯ ಸೃಷ್ಟಿಯಾಗಿರೋದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ.

2 / 8

ಕಳೆದೆ ಎರಡ್ಮೂರು ದಿನದಿಂದ ಜಿಲ್ಲೆಯಲ್ಲಿ ತುಂತುರು ಮಳೆ ಬೀಳುತ್ತಿದೆ. ಇದೀಗ ತುಂತುರು ಮಳೆ‌ ಜೊತೆಗೆ ಮಂಜು‌ ಮುಸುಕಿಕೊಂಡು ಹೊಸ ಲೋಕವೆ ಸೃಷ್ಟಿಯಾಗಿದೆ. ವರ್ಷದ ಬಹುತೇಕ ದಿನಗಳು ಹಸಿರು ರತ್ನಗಳನ್ನ ಹೊದ್ದು ಮಲಗಿರುವ ಬಿಳಿಗಿರಿರಂಗನ ಬೆಟ್ಟ, ಪೂರ್ವ ಪಶ್ಚಿಮ ಘಟ್ಟಗಳನ್ನು ಸಂಧಿಸುವ ಸ್ಥಳ.

3 / 8

ಈ ಬೆಟ್ಟದ ಸಾಲುಗಳಲ್ಲಿ ಮಂಜು ತುಂಬಿಕೊಂಡಾಗ ಮಂಜಿನಲ್ಲಿ ಹಸಿರು ಬೆಟ್ಟಗಳ‌ ಸಾಲುಗಳನ್ನ ನೋಡೋಕೆ ಇನ್ನು ಅದ್ಭುತ. ಬೆಳ್ಳಿಮೋಡಗಳು ಬೆಟ್ಟದಲ್ಲಿ ಚಲಿಸುತ್ತಿದ್ರೆ, ಮತ್ತೆ ಕೆಲವೆಡೆ ಹಾಲಿನ ನೊರೆಯಂತೆ ಬೆಟ್ಟವನ್ನೆ ಮೋಡಗಳು ಆವರಿಸಿಕೊಂಡಿರುವುದು ಪ್ರವಾಸಿಗರಿಗೆ ಹಬ್ಬದಂತಿದೆ.

4 / 8

ಇನ್ನು ಇಡೀ ಕಾಡು ಮಳೆಯಿಂದಾಗಿ ಹಚ್ಚ ಹಸಿರಿನಿಂದ‌ನಿಂದ ಕಂಗೊಳಿಸುತ್ತಿದೆ. ಹುಲಿ ರಕ್ಷಿತಾರಣ್ಯದಲ್ಲಿ ಇರುವುದರಿಂದ ಜಿಂಕೆ, ಕಾಡೆಮ್ಮ, ಆನೆಯಂತಹ ಪ್ರಾಣಿಗಳು ರಸ್ತೆಯಲ್ಲೂ ಕಂಡು ಪುಳಕಿತರಾಗುತ್ತಿದ್ದಾರೆ.

5 / 8

ಇದು ಹುಲಿ ರಕ್ಷಿತಾರಣ್ಯವಾಗಿರೋದ್ರಿಂದ ವಾಹನಗಳನ್ನ ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ರಸ್ತೆಯಲ್ಲಿ ಸಂಚಾರ ಮಾಡುವಾಗ ಕಣ್ತುಂಬಿಕೊಳ್ಳಬೇಕಿದೆ.

6 / 8

ಸದ್ಯ ಮಳೆಯ ನಡುವೆಯುವ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಮಂಜಿಗೆ ಪ್ರವಾಸಿಗರು ಮನಸೋತಿದ್ದಾರೆ.

7 / 8

ಒಟ್ಟಾರೆ, ಮಳೆಯಿಂದಾದಗಿ ಬೆಟ್ಟದ ಪ್ರಕೃತಿ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಈ ಪ್ರಕೃತಿ ಸೊಬಗು ಪ್ರವಾಸಿಗರನ್ನ ಸೂಜಿ ಗಲ್ಲಿನಂತೆ ಸೆಳೆಯುತ್ತಿದೆ.

8 / 8

ಕಾಲೇಜು ಕನ್ಯೆಯರಿಂದ ಹಿಡಿದು ಯುವಕ, ಯುವತಿಯರು ಕೂಡ ಆಗಮಿಸಿ ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಇಲ್ಲಿಯ ವಾತಾವರಣ ಮತ್ತೊಮ್ಮೆ ಬರುವಂತೆ ಕೈ ಬೀಸಿ ಕರೆಯುತ್ತಿದೆ.

Published On - 1:34 pm, Sun, 9 July 23

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Loading...
Unable to load recommendations.
Follow Us