AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆ ಬಿಸಿಲಿಗೆ ಕಡಲತೀರಗಳಿಗೆ ಮುಗಿಬಿದ್ದ ಪ್ರವಾಸಿಗರು; ಸಮುದ್ರದ ನೀರಿನಲ್ಲಿ ಈಜಾಡಿ ಎಂಜಾಯ್ ಮಾಡುತ್ತಿರುವ ಜನರು, ಇಲ್ಲಿದೆ ಫೋಟೋಸ್

ಸದ್ಯ ಬೇಸಿಗೆ ರಜೆ ಬೆನ್ನಲ್ಲೇ ಬಿಸಿಲಿನ ತಾಪವೂ ಹೆಚ್ಚಳವಾಗುತ್ತಿದೆ. ರಜೆಯ ಮಜಾವನ್ನ ಕಳೆಯೋದಕ್ಕೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ನೀರಿರುವ ಪ್ರದೇಶಗಳತ್ತ ಮುಖಮಾಡಿದ್ದು, ಕಡಲತೀರಗಳಿಗೆ ಹೆಸರುವಾಸಿಯಾಗಿರುವ ಉತ್ತರಕನ್ನಡದ ಕರಾವಳಿಯತ್ತ ಇದೀಗ ಪ್ರವಾಸಿಗರ ದಂಡೇ ಮುಗಿಬೀಳುತ್ತಿದೆ.

ಕಿರಣ್ ಹನುಮಂತ್​ ಮಾದಾರ್
|

Updated on: May 20, 2023 | 2:10 PM

Share
ಇದೀಗ ಎಲ್ಲಿ ನೋಡಿದ್ರೂ ಮೈಸುಡುವ ಬಿಸಿಲಿನದ್ದೇ ಕಾರುಬಾರಾಗಿದ್ದು, ಜನರು ಸೂರ್ಯನ ಶಾಖದಿಂದ ರಿಲ್ಯಾಕ್ಸ್ ಆಗೋದಕ್ಕೆ ಕರಾವಳಿ ತೀರಗಳತ್ತ ಮುಖಮಾಡಿದ್ದಾರೆ.

1 / 8
ಅದರಲ್ಲೂ ವಿಶಾಲವಾದ ಕಡಲತೀರಗಳಿಗೆ ಹೆಸರುವಾಸಿಯಾದ ಉತ್ತರಕನ್ನಡ ಜಿಲ್ಲೆಯ ಬೀಚ್‌ಗಳತ್ತ ಇದೀಗ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಕಾರವಾರ, ಗೋಕರ್ಣ, ಹೊನ್ನಾವರ ಹಾಗೂ ಮುರ್ಡೇಶ್ವರ ಕಡಲತೀರಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ.

2 / 8
ಕರಾವಳಿ ಭಾಗದಲ್ಲೂ ಬಿಸಿಲಿನ ಶಾಖ ಜೋರಾಗಿಯೇ ಇದೆಯಾದರೂ, ಕಡಲತೀರಗಳಲ್ಲಿ ತಣ್ಣಗೆ ಗಾಳಿ ಬೀಸುವುದರಿಂದ ಇಲ್ಲಿನ ಸಮುದ್ರದ ನೀರಿನಲ್ಲಿ ಈಜಾಡುತ್ತಾ ತಣ್ಣಗೆ ಬೀಸುವ ಗಾಳಿಗೆ ಮೈಯೊಡ್ಡಿ ಜನರು ಬಿಸಿಲಿನ ಬೇಗೆಯಿಂದ ಕೊಂಚ ರಿಲ್ಯಾಕ್ಸ್ ಆಗುತ್ತಿದ್ದಾರೆ.

3 / 8
ಈ ಬಾರಿ ಘಟ್ಟದ ಮೇಲಿನ ಪ್ರದೇಶಗಳಲ್ಲೂ ತೀವ್ರವಾಗಿ ತಾಪಮಾನ ಏರಿಕೆಯಾಗಿದ್ದು, ಕರಾವಳಿಯಲ್ಲೇ ಕೊಂಚ ಅನುಕೂಲಕರ ವಾತಾವರಣ ಇದೆ ಎನ್ನುವಂತಾಗಿದೆ. ಹೀಗಾಗಿ ಜನರು ಕುಟುಂಬಸ್ಥರೊಂದಿಗೆ ಒಟ್ಟಾಗಿ ವೀಕೆಂಡ್‌ಗಳಲ್ಲಿ ಇಲ್ಲಿನ ಕಡಲತೀರಗಳಿಗೆ ಭೇಟಿ ನೀಡುವ ಮೂಲಕ ರಜೆಯ ಮಜಾವನ್ನ ಕಳೆಯೋದಕ್ಕೆ ಇಷ್ಟಪಡುತ್ತಿದ್ದಾರೆ.

4 / 8
ಸದ್ಯ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ 26 ರಿಂದ 35 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನ ಇರುತ್ತಿದ್ದು, ತೇವಾಂಶದ ಪ್ರಮಾಣ ಜಾಸ್ತಿಯಿರುವ ಹಿನ್ನಲೆ 40 ಡಿಗ್ರಿಯಷ್ಟು ಸೆಕೆಯ ಅನುಭವವಾಗುತ್ತದೆ. ಆದರೆ ಕಡಲತೀರಗಳ ಬಳಿ ಜೋರಾಗಿ ಗಾಳಿ ಬೀಸುವುದರಿಂದ ಹೆಚ್ಚು ಬಿಸಿಲಿದ್ದರೂ ಅಷ್ಟೊಂದು ಸೆಕೆ ಎನಿಸುವುದಿಲ್ಲ. ಜೊತೆಗೆ ಸಮುದ್ರದ ನೀರಿನ ತಾಪಮಾನ ಹಗಲಿನಲ್ಲಿ ಕೊಂಚ ಕಡಿಮೆಯಿರುವುದರಿಂದ ಬಂದಂತಹ ಪ್ರವಾಸಿಗರಿಗೆ ಬೀಚ್‌ಗಳಲ್ಲಿ ಎಂಜಾಯ್ ಮಾಡೋದಕ್ಕೆ ಅನುಕೂಲಕರ ವಾತಾವರಣ ಇದ್ದಂತಾಗಿದೆ.

5 / 8
ಹೀಗಾಗಿ ಕುಟುಂಬ ಸಮೇತರಾಗಿ ರಜೆಯನ್ನ ಕಳೆಯೋದಕ್ಕೆ ಕಡಲತೀರಗಳಿಗೆ ಜನರು ಮುಗಿಬೀಳುತ್ತಿದ್ದು, ಜಿಲ್ಲೆಯ ಬೀಚ್‌ಗಳಲ್ಲಿ ಸದ್ಯ ಪ್ರವಾಸಿಗರ ಕಲರವ ಜೋರಾಗಿದೆ.

6 / 8
ಇನ್ನು ಕಾರವಾರ ಕಡಲತೀರ ನೆರೆಯ ಗೋವಾಕ್ಕೆ ಹೋಲಿಸಿದರೆ, ಹೆಚ್ಚು ಜನಸಂದಣಿ ಹೊಂದಿಲ್ಲವಾದ್ದರಿಂದ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಉತ್ತಮವಾಗಿದೆ ಅಂತಾರೇ ಪ್ರವಾಸಿಗರು.

7 / 8
ಒಟ್ಟಾರೆ ಬೇಸಿಗೆ ಬಿಸಿಯಿಂದ ಕಂಗೆಟ್ಟಿರುವ ಜನರು ಸಮುದ್ರದ ನೀರಿನಲ್ಲಿ ಈಜಾಡಿ ರಿಲ್ಯಾಕ್ಸ್ ಮಾಡುತ್ತಿದ್ದು, ಕಡಲತೀರಗಳು ಪ್ರವಾಸಿಗರ ಹಾಟ್‌ಸ್ಪಾಟ್‌ ಆಗಿದ್ದಂತೂ ಸತ್ಯ.

8 / 8
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​