ಭಾರತದಲ್ಲಿ ಪರ್ಯಾಯ ಇಂಧನ ಪ್ರೇರಿತ ಕಾರುಗಳ ಮಾರಾಟ ಹೆಚ್ಚುತ್ತಿದ್ದು, ಸಿಎನ್ ಜಿ ಕಾರುಗಳಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದೆ. ಹೀಗಾಗಿ ಟೊಯೊಟಾ ಕಂಪನಿ ಸಹ ತನ್ನ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಕಾರಿನಲ್ಲಿ ಹೊಸ ವರ್ಷನ್ ಬಿಡುಗಡೆ ಮಾಡಿದೆ. ಹೊಸ ಸಿಎನ್ ಜಿ ಕಾರು ಮಾದರಿಯು ಎಸ್ ಯುವಿ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡಲಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.