ಅಜಾತಶತ್ರು ಅಟಲ್ ಜೀ ಜನ್ಮದಿನ; ಅಗಲಿದ ನಾಯಕನಿಗೆ ಗೌರವ ಸಮರ್ಪಣೆಯ ಚಿತ್ರಗಳು
ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 96ನೇ ಜನ್ಮದಿನ. ತನ್ನಿಮಿತ್ತ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ ಸೇರಿ ಹಲವು ರಾಜಕೀಯ ಗಣ್ಯರು ಅಜಾತಶತ್ರುವಿಗೆ ನಮನ ಸಲ್ಲಿಸಿದ್ದಾರೆ. ಅಟಲ್ ಜೀ ಸ್ಮಾರಕ ಸದೈವ ಅಟಲ್ನಲ್ಲಿ ಮತ್ತು ಸಂಸತ್ತಿನ ಕೇಂದ್ರೀಯ ಸಭಾಂಗಣದಲ್ಲಿ ಗೌರವ ಸಮರ್ಪಿಸಲಾಯಿತು. ಅಗಲಿದ ನಾಯಕನ ಸ್ಮರಣೆಯ ಹೊತ್ತಿನ ಚಿತ್ರಣ ಇಲ್ಲಿದೆ..