ಅನ್ನ, ಬಟ್ಟೆ ಮತ್ತು ಆಶ್ರಯ ನೀಡಿ ಮಕ್ಕಳ ಭವಿಷ್ಯ ಕಟ್ಟಿದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಟಿವಿ9 ನವನಕ್ಷತ್ರ ಸನ್ಮಾನ
Navanakshatra Sanman 2021: ತಮಕೂರಿನ ಸಿದ್ಧಗಂಗಾ ಮಠವನ್ನು ಶಿಕ್ಷಣ ಕಾಶಿಯನ್ನಾಗಿ ಬೆಳೆಸಿದವರು ತ್ರಿವಿಧ ದಾಸೋಹಿ ಅಂತಲೇ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳು. 1930 ರಲ್ಲಿ ಸಿದ್ಧಗಂಗಾ ಮಠಕ್ಕೆ ಕಾಲಿಟ್ಟ ಸ್ವಾಮೀಜಿ, 1941ರಲ್ಲಿ ಶ್ರೀಮಠದ ಮಠಾಧಿಪತಿಯಾದ್ರು. ಆಗ ಶ್ರೀಗಳ ಕೈಯಲ್ಲಿ ಇದ್ದಿದ್ದು ಕೇವಲ 300 ರೂಪಾಯಿ. ಸ್ವಾಮೀಜಿ, ಆರ್ಥಿಕ ಸಂಕಷ್ಟದಲ್ಲಿದ್ದ ಮಠವನ್ನು ಬೆಳೆಸುವ ಸಂಕಲ್ಪ ತೊಟ್ಟರು. ಹೆಗಲಿಗೆ ಜೋಳಿಗೆ ಹಾಕಿಕೊಂಡು ಹಳ್ಳಿ ಹಳ್ಳಿ ತಿರುಗಿ ಭಕ್ತರದಿಂದ ದೇಣಿಗೆ ಸಂಗ್ರಹಿಸಿದ್ರು. ಅನ್ನ, ಅಕ್ಷರ ದಾಸೋಹದ ಒಂದೊಂದೇ ಮೆಟ್ಟಿಲು ಏರುತ್ತಾ ಶ್ರೀ ಸಿದ್ಧಗಂಗಾ ಎಜುಕೇಷನ್ ಸೊಸೈಟಿ ಸ್ಥಾಪಿಸಿದ್ರು. ಇಂದು ಸಿದ್ಧಗಂಗಾ ಮಠ, 126ಕ್ಕೂ ಅಧಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. 10ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿದ್ಯೆ, ಅನ್ನ, ಬಟ್ಟೆ ಮತ್ತು ಆಶ್ರಯ ನೀಡುತ್ತಿದೆ. ಶ್ರೀ ಸಿದ್ಧಗಂಗಾ ಮಠದಲ್ಲಿ ಓದಿದ ಲಕ್ಷ ಲಕ್ಷ ಬಡ ಮಕ್ಕಳು ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ. ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ. ಸದ್ಯ ಅಕ್ಷರ, ಅನ್ನ ಮತ್ತು ಆಶ್ರಯ.. ಈ ತ್ರಿವಿಧ ದಾಸೋಹದ ಪುಣ್ಯಕಾರ್ಯ ನಡೆಸುತ್ತಿರುವ ಶ್ರೀ ಸಿದ್ಧಗಂಗಾ ಮಠಕ್ಕೆ ಟಿವಿ9, ನವನಕ್ಷತ್ರ ಗೌರವ ನೀಡಿ ವಂದಿಸುತ್ತಿದೆ.
Published On - 7:30 am, Wed, 5 January 22