
ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್ಬಾಸ್ ಕನ್ನಡ ಸ್ಪರ್ಧಿಯೂ ಆಗಿರುವ ಉಗ್ರಂ ಮಂಜು ಅವರು ವಿವಾಹ ಆಗಲಿದ್ದು, ಇದೀಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ಸರಳವಾಗಿ ನಡೆದಿದೆ.

ಉಗ್ರಂ ಮಂಜು ಅವರ ಮನೆಯಲ್ಲಿಯೇ ಬಂಧುಗಳು, ಆಪ್ತರು ಮತ್ತು ಕೆಲ ಗೆಳೆಯರ ಸಮ್ಮುಖದಲ್ಲಿ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ನಡೆದಿದೆ. ಮಂಜು ಅವರು ಅರಿಶಿಣ ಹಚ್ಚಿಕೊಂಡು ಮಧುಮಗ ಆಗಲು ರೆಡಿಯಾಗಿದ್ದಾರೆ.

ಉಗ್ರಂ ಮಂಜು ಅವರು ಸಾಯಿ ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ಸಾಯಿ ಸಂಧ್ಯಾ ಅವರು ಟ್ರಾನ್ಸ್ಪ್ಲಾಂಟ್ ಕೋ ಆರ್ಡಿನೇಟ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಇಬ್ಬರ ನಿಶ್ಚಿತಾರ್ಥ ಕೆಲ ತಿಂಗಳ ಹಿಂದೆ ನಡೆದಿದೆ.

ಇತ್ತೀಚೆಗಷ್ಟೆ ಉಗ್ರಂ ಮಂಜು ಅವರು ಬಿಗ್ಬಾಸ್ ಮನೆಯಲ್ಲಿ ತಮ್ಮ ಬ್ಯಾಚುಲರ್ ಪಾರ್ಟಿ ಸಹ ಮಾಡಿಕೊಂಡಿದ್ದರು. ಉಗ್ರಂ ಮಂಜು ಜೊತೆಗೆ ಇನ್ನೂ ಕೆಲವು ಗೆಳೆಯರು ಸಹ ಬಿಗ್ಬಾಸ್ ಮನೆಗೆ ಬಂದಿದ್ದರು.

ಜನವರಿ 23ರಂದು ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರ ವಿವಾಹ ಧರ್ಮಸ್ಥಳದಲ್ಲಿ ಬಹಳ ಸರಳವಾಗಿ ನೆರವೇರಲಿದೆ. ಕೇವಲ ಕುಟುಂಬದವರು, ಅತ್ಯಂತ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿ ಆಗಲಿದ್ದಾರೆ.

ಮದುವೆಯ ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಉಗ್ರಂ ಮಂಜು ಆಯೋಜಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿತ್ರರಂಗದ ಗಣ್ಯರುಗಳು ರಿಸೆಪ್ಷನ್ನಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.