- Kannada News Photo gallery Umesh Katti: Minister Umesh Katti's funeral: The way he grew up in politics, here are the photos
Umesh Katti: ಸಚಿವ ಉಮೇಶ್ ಕತ್ತಿ ವಿಧಿವಶ: ರಾಜಕೀಯದಲ್ಲಿ ಬೆಳೆದುಬಂದ ಹಾದಿ, ಇಲ್ಲಿವೆ ಫೋಟೋಸ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಉಮೇಶ್ ಕತ್ತಿ ಸ್ಪಷ್ಟ ನಿಲುವು ಹೊಂದಿದ್ದರು, ಪಕ್ಷದ ಆದೇಶ ಹಾಗೂ ನಿಲುವಿನ ವಿರುದ್ಧವಾಗಿ ಆಗಾಗ ಧ್ವನಿ ಎತ್ತುತ್ತಲೇ ಇದ್ದರು.
Updated on: Sep 07, 2022 | 10:52 AM

ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ(61) ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿನ್ನೆ(ಸೆಪ್ಟೆಂಬರ್ 07) ರಾತ್ರಿ 10ಗಂಟೆ ಕೊನೆಯುಸಿರೆಳೆದಿದ್ದಾರೆ.

ಉಮೇಶ ವಿಶ್ವನಾಥ ಕತ್ತಿ 14/03/1961 ರಂದಿ ಜನಿಸಿದರು. ತಂದೆಯ ಅಕಾಲಿಕ ಸಾವಿನಿಂದ ರಾಜಕೀಯ ಪ್ರವೇಶ ಮಾಡಬೇಕಾಯಿತು.

1985ರಲ್ಲಿ ಉಪ ಚುನಾವಣೆಯಲ್ಲಿ ಜೆ ಎನ್ ಪಿ ಪಕ್ಷದಿಂದ ಪ್ರಥಮ ಬಾರಿ ಗೆಲುವು ಸಾಧಿಸಿದರು.

1989, 1994ರಲ್ಲಿ ಜನತಾ ದಳ ಪಕ್ಷದಿಂದ ಗೆಲವು ಕಂಡರು.

1999ರಲ್ಲಿ ಜನಾತದಳ ಸಂಯುಕ್ತ ಪಕ್ಷದಿಂದ ಗೆಲವು ಸಾಧಿಸಿದರು.

2004ರಲ್ಲಿ ಕಾಂಗ್ರೆಸ್ ದಿಂದ ಸ್ಪರ್ಧಿಸಿದ ಕತ್ತಿಗೆ ಸೋಲು ಕಂಡಿದ್ದು, 2008 ರಲ್ಲಿ ಜೆಡಿಎಸ್ ಪಕ್ಷದಿಂದ ಗೆಲವು. ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ.

2008 ಉಪ ಚುನಾವಣೆ, 2013, 2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು. 8 ಭಾರೀ ಹುಕ್ಕೇರಿ ಕ್ಷೇತ್ರದಿಂದ ಉಮೇಶ ಕತ್ತಿ ಗೆಲುವು ಸಾಧಿಸಿದ್ದು, 3 ಭಾರೀ ಸಚಿವರಾಗಿ ಕೆಲಸ ಮಾಡಿರೋ ಅನುಭವ.

1994ರಲ್ಲಿ ದೇವೇಗೌಡ ಕ್ಯಾಬಿನೆಟ್ ಸಕ್ಕರೆ ಮಂತ್ರಿ, 1998ರಲ್ಲಿ ಜೆ ಎಚ್ ಪಟೇಲ್ ಕ್ಯಾಬಿನೆಟ್ ಲೋಕೋಪಯೋಗಿ, 2008ರಲ್ಲಿ ಯಡಿಯೂರಪ್ಪ ಕ್ಯಾಬಿನೆಟ್ ಬಂಧಿಖಾನೆ, ತೋಟಗಾರಿಕೆ ಹಾಗೂ ಕೃಷಿ ಸಚಿವರಾಗಿದ್ದರು. 2013-2018ರ ವಿಧಾನಸಭಾ ಚುನಾವಣೆಯಲ್ಲಿಯೂ ಉಮೇಶ್ ಕತ್ತಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ನಿರಾಯಾಸವಾಗಿ ಗೆದ್ದುಬಂದರು.




