‘ಯುಐ’ ಸಿನಿಮಾ ಪ್ರಚಾರ: ಧಾರವಾಡದಲ್ಲಿ ಕಾಲೇಜು ದಿನಗಳ ನೆನಪು ಮಾಡಿಕೊಂಡ ಉಪ್ಪಿ

|

Updated on: Dec 04, 2024 | 4:08 PM

Upendra: ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಡಿಸೆಂಬರ್20 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರವನ್ನು ಉಪೇಂದ್ರ ಹುಬ್ಬಳ್ಳಿ-ಧಾರವಾಡದಲ್ಲಿ ಬಲು ಅದ್ಧೂರಿಯಾಗಿ ಮಾಡಿದ್ದಾರೆ.

1 / 5
ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಬಹಳ ವರ್ಷಗಳ ಬಳಿಕ ಉಪೇಂದ್ರ ಮತ್ತೆ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ.

2 / 5
‘ಯುಐ’ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರದಲ್ಲಿ ಉಪೇಂದ್ರ ತೊಡಗಿಕೊಂಡಿದ್ದಾರೆ. ಇಂದು ಧಾರವಾಡಕ್ಕೆ ಭೇಟಿ ನೀಡಿದ್ದ ಉಪೇಂದ್ರ ಬಲು ಜೋರಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಅಭಿಮಾನಿಗಳೊಟ್ಟಿಗೆ ಮಾತನಾಡಿದ್ದಾರೆ.

3 / 5
ಧಾರವಾಡದಲ್ಲಿ ನಡೆದ ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಮಾತನಾಡಿದ ಉಪೇಂದ್ರ, ತಮ್ಮ ಕಾಲೇಜು ದಿನಗಳ ಮೆಲುಕು ಹಾಕಿದ ಉಪೇಂದ್ರ, ನಮಗೆ ಏನು ಖುಷಿ ಕೊಡುತ್ತದೆಯೋ ಅದನ್ನು ಮಾಡಬೇಕು, ನಾನೂ ಸಹ ನನಗೆ ಏನು ಖುಷಿ‌ ಕೊಡುತ್ತೋ ಅದನ್ನೇ ಮಾಡಿದ್ದೇನೆ’ ಎಂದರು.

4 / 5
‘ನನಗೆ ಎಜ್ಯುಕೇಷನ್ ಖುಷಿ ಕೊಡಲಿಲ್ಲ, ಸಿನಿಮಾಗೆ ಸೇರುವ ಮುಂಚೆ ಬೇರೆ ಕೆಲಸವೂ ಖುಷಿ ಕೊಡಲಿಲ್ಲ, ಹಾಗಂತ ಶಿಕ್ಷಣ ಮುಖ್ಯವಲ್ಲ ಅಂತ ಹೇಳೋಲ್ಲ, ಶಿಕ್ಷಣವೂ ಬೇಕು, ನಾನು ಬಿಕಾಂ ಪದವೀಧರ ಎಂದು ಉಪೇಂದ್ರ ಹೇಳಿದರು.

5 / 5
ನಾನು ಕಾಲೇಜಿನಲ್ಲಿದ್ದಾಗ ಹುಡುಗಿಯರ ಬಗ್ಗೆ ಹಾಡು ಹೇಳುತ್ತಿದ್ದೆ, ಆಗ ಹುಡುಗಿಯರ ಬಯ್ಯುತ್ತಿದ್ದರು, ಈತ ಮಾನಸಿಕವಾಗಿ ವಿಚಲಿತ ಆಗಿದ್ದಾನೆ ಅನ್ನುತ್ತಿದ್ದರು, ತಮಾಷೆಗೆ ಆಗ ಹಾಡು ಹೇಳುತ್ತಿದ್ದೆ, ಆಗಲೇ ಲವ್ವು ಪುಸ್ತಕದ ಬದನೇಕಾಯಿ ಎಂದಿದ್ದೆ ಎಂದು ಹಳೆಯ ದಿನಗಳ ನೆನದರು ಉಪ್ಪಿ.