Updated on: Jan 31, 2023 | 7:11 PM
ನಟಿ ಉರ್ಫಿ ಜಾವೇದ್ ಅವರು ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಎಂಬುದನ್ನು ಕಲ್ಪನೆ ಮಾಡಲು ಕೂಡ ಸಾಧ್ಯವಿಲ್ಲ. ಪ್ರತಿ ದಿನವೂ ಅವರು ವಿಚಿತ್ರ ವಿನ್ಯಾಸದ ಬಟ್ಟೆ ಧರಿಸಿ ಪೋಸ್ ನೀಡುತ್ತಾರೆ.
ಕುತ್ತಿಗೆ ತನಕ ಜೀನ್ಸ್ ಪ್ಯಾಂಟ್ ಧರಿಸಿಕೊಂಡು ಉರ್ಫಿ ಜಾವೇದ್ ಅವರು ನೆಟ್ಟಿಗರ ಗಮನ ಸೆಳೆದಿದ್ದಾರೆ. ಅವರ ಈ ವೇಷ ಕಂಡು ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ನಟಿಯ ಅವತಾರಕ್ಕೆ ಮಿತಿಯೇ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ.
ಬಟ್ಟೆಯ ಕಾರಣದಿಂದಲೇ ಉರ್ಫಿ ಜಾವೇದ್ ಅವರು ಹಲವರು ಜೊತೆ ವಿವಾದ ಮಾಡಿಕೊಂಡಿದ್ದುಂಟು. ಈ ವಿಚಾರವಾಗಿ ಅವರಿಗೆ ಬಹಿರಂಗ ಬೆದರಿಕೆಗಳನ್ನೂ ಹಾಕಲಾಗಿದೆ. ಏನೇ ಆದರೂ ಉರ್ಫಿ ಜಾವೇದ್ ಬದಲಾಗಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಅವರ ಈ ಫೋಟೋಗಳು ವೈರಲ್ ಆಗಿವೆ. ಇದರಿಂದಲೇ ಅವರಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಕ್ಕಿದೆ. ಅವರನ್ನು ಹಿಂಬಾಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅರೆಬರೆ ಬಟ್ಟೆ ಧರಿಸುತ್ತಾರೆ ಎಂಬ ಕಾರಣಕ್ಕೆ ಮುಂಬೈನಲ್ಲಿ ಉರ್ಫಿ ಜಾವೇದ್ ಅವರಿಗೆ ಯಾರೂ ಕೂಡ ಬಾಡಿಗೆ ಮನೆ ನೀಡುತ್ತಿಲ್ಲ. ಈ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಎಷ್ಟೇ ತೊಂದರೆ ಆದರೂ ಕೂಡ ಅವರು ಬಟ್ಟೆ ವಿಚಾರದಲ್ಲಿ ರಾಜಿ ಆಗುತ್ತಿಲ್ಲ.