ಚಿಕ್ಕಮಗಳೂರು: ಹಿಂದೂಗಳ ಪವಿತ್ರ ಕಲ್ಹತ್ತಿಗಿರಿ ಕ್ಷೇತ್ರ ಅಪವಿತ್ರವಾಗುತ್ತಿದೆ, ಈ ಫೋಟೋಗಳನ್ನ ನೋಡಿ

TV9 Digital Desk

| Edited By: Kiran Hanumant Madar

Updated on:Jan 31, 2023 | 5:53 PM

ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರ ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಕಲ್ಹತ್ತಿಗಿರಿಗೆ ಬರುವ ಪ್ರವಾಸಿಗರು ತಮ್ಮ ಮನಸೋ ಇಚ್ಛೆ ಬಟ್ಟೆ ಬರೆ ಎಸೆದು ಪುಣ್ಯ ಕ್ಷೇತ್ರವನ್ನು ಅಪವಿತ್ರ ಸ್ಥಳವನ್ನಾಗಿ ಮಾಡುತ್ತಿದ್ದಾರೆ.

Jan 31, 2023 | 5:53 PM
ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ತಿಗಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕಲ್ಹತ್ತಿಗಿರಿ ಪುಣ್ಯಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವಿದ್ದು, ರಾಮಾಯಣ ಕಾಲದಿಂದಲೂ ಕೂಡಾ ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ.

1 / 7
ಇಂತಹ ಸುದೀರ್ಘ ಇತಿಹಾಸ ಹೊಂದಿರುವ ಕಲ್ಹತ್ತಿಗಿರಿ ಪುಣ್ಯ ಕ್ಷೇತ್ರ ಧಾರ್ಮಿಕ ನಂಬಿಕೆಗೂ ಕೂಡಾ ಅಷ್ಟೇ ಹೆಸರುವಾಸಿಯಾಗಿದ್ದು. ರಾಜ್ಯದ ನಾನಾ ಭಾಗಗಳಿಂದ ದೇವರ ಉತ್ಸವ ಮೂರ್ತಿಗಳನ್ನು ತಂದು ಇಲ್ಲಿನ ಪುಣ್ಯ ಜಲದಲ್ಲಿ ಸ್ವಚ್ಛ ಮಾಡಿ ಪುಣ್ಯ ಮಾಡಿಸುವುದರ ಜೊತೆಗೆ ಇಲ್ಲಿನ ಜಲಪಾತದ ನೀರಿನಲ್ಲಿ ಮಿಂದೆದ್ದು ಹೋದರೆ ತಮ್ಮ ಪಾಪ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಆಳವಾಗಿ ಬೇರೂರಿದೆ.

2 / 7
ಈ ನಡುವೆ ಇಲ್ಲಿಗೆ ಬರುವ ಕೆಲವರು ಮೂಡನಂಬಿಕೆಯ ಹೆಸರಲ್ಲಿ ತಮ್ಮ ಹಳೆಯ ಬಟ್ಟೆಗಳನ್ನು ಇಲ್ಲಿಯೇ ಬಿಟ್ಟು ಹೋಗುವುದರಿಂದ ಇಲ್ಲಿನ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುವುದರ ಜೊತೆಗೆ ಪುಣ್ಯ ಕ್ಷೇತ್ರ ಮಲಿನವಾಗುತ್ತಿದೆ ಎಂದು ಧಾರ್ಮಿಕವಾಗಿ ನಂಬಿಕೆ ಉಳ್ಳವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

3 / 7
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಎಂದರೆ ಎಂತವರಿಗಾದರೂ ಮೊದಲು ನೆನಪಾಗೋದು ಕಲ್ಹತ್ತಿಗಿರಿ, ಕೆಮ್ಮಣ್ಣುಗುಂಡಿ ಇಂತಹ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರು ಮೋಜು ಮಸ್ತಿಯ ನೆಪದಲ್ಲಿ ಮದ್ಯ, ಮಾದಕ ವಸ್ತುಗಳನ್ನು ತಂದು ಸೇವನೆ ಮಾಡಿ ಎಲ್ಲೆಂದರಲ್ಲಿ ಬಿಸಾಡುವ ಮೂಲಕ ಇಲ್ಲಿನ ಪರಿಸರದ ಸೂಕ್ಷ್ಮತೆಗೆ ಧಕ್ಕೆ ತರುವುದಲ್ಲದೆ ಜಲಮೂಲದ ಪವಿತ್ರತೆಯನ್ನು ಅಪವಿತ್ರ ಮಾಡಿ ಔಷಧೀಯ ಗುಣಗಳುಳ್ಳ ಸಸ್ಯಗಳ ವಿನಾಶಕ್ಕೆ ಕಾರಣವಾಗುತ್ತಿದ್ದಾರೆ ಎಂಬುದು ಪರಿಸರಾಸಕ್ತರ ಕೆಂಗಣ್ಣಿಗೆ  ಗುರಿಯಾಗಿದೆ.

4 / 7
ಇಂತಹ ಪರಿಸರ ಸೂಕ್ಷ್ಮ ಹಾಗೂ ಪವಿತ್ರ ಪುಣ್ಯಸ್ಥಳಗಳ ಸಂರಕ್ಷಣೆ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಆದ್ಯ ಕರ್ತವ್ಯವಾಗಿರುವುದರಿಂದ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಿ ಇದನ್ನು ಸಂರಕ್ಷಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಉದ್ದೇಶದಿಂದ ಹಾಗೂ ಧಾರ್ಮಿಕ ನಂಬಿಕೆಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ಔಷಧೀಯ ಸಸ್ಯ ಸಂಕುಲದ ಉಳಿವಿಗೆ ಶ್ರಮಿಸುವ ಕೆಲಸ ಮಾಡಲಿ ಎಂಬುದು ನಮ್ಮ ಆಶಯವಾಗಿದೆ.

5 / 7
ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಪ್ರವಾಸೋದ್ಯಮದಲ್ಲಿ ತನ್ನದೇ ಮಹತ್ವ ಹೊಂದಿರುವ ಐತಿಹಾಸಿಕ ಪುಣ್ಯಕ್ಷೇತ್ರ ಕಲ್ಹತ್ತಿಗಿರಿ ಪುಣ್ಯಕ್ಷೇತ್ರವನ್ನು ಹೆಸರಿಗಷ್ಟೇ ಪುಣ್ಯಕ್ಷೇತ್ರ, ಪ್ರವಾಸಿ ಸ್ಥಳವೆಂದು ಘೋಷಣೆ ಮಾಡಲಾಗಿದ್ದು, ಇದುವರೆಗೂ ಇಲ್ಲಿ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡುವಂತಹ ಕೆಲಸಗಳನ್ನು ಪ್ರವಾಸೋದ್ಯಮ ಇಲಾಖೆ, ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಮಾಡಲು ಕನಿಷ್ಠ ಆಸಕ್ತಿ ತೋರದೇ ಇರುವುದು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ನಿವಾಸಿಗಳನ್ನು ಕೆರಳಿಸಿದೆ.

6 / 7
ಕಲ್ಹತ್ತಿಗಿರಿ ಐತಿಹಾಸಿಕ ಪವಿತ್ರ ಪುಣ್ಯಕ್ಷೇತ್ರ ಹಾಗೂ ಪ್ರಮುಖ ಪ್ರವಾಸಿ ಸ್ಥಳವಾಗಿರುವುದರಿಂದ ಇಲ್ಲಿಗೆ ಪ್ರತಿನಿತ್ಯ ವೀರಭದ್ರೇಶ್ವರ ಸ್ವಾಮಿ, ಚೌಡೇಶ್ವರಿ ದೇವಿಯವರ ದೇವಾಲಯಕ್ಕೆ ಭಕ್ತರು ಮತ್ತು ಸಾವಿರಾರು ಜನ ಪ್ರವಾಸಿಗರು ಬಂದು ಹೋಗುವುದರಿಂದ ಇಲ್ಲಿ ಆಗಾಗ ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ಸೇರಿದಂತೆ ಅಕ್ರಮವಾಗಿ ಮದ್ಯ, ಮಾದಕ ವಸುಗಳನ್ನು ತಂದು ಇಲ್ಲಿನ ವಾತಾವರಣವನ್ನು ಕಲುಷಿತಗೊಳಿಸುತ್ತಾರೆ. ಆದ್ದರಿಂದ ಇಲ್ಲಿನ ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಖಾಯಂ ಆಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡುವುದರ ಜೊತೆಗೆ ರಾತ್ರಿ ಪಾಳೆಯ ಗಸ್ತನ್ನು ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

7 / 7

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada