ಖ್ಯಾತ ಧಾರಾವಾಹಿ ನಟನ ಸೀಕ್ರೆಟ್​ ವಿವಾಹ; ಒಂದು ದಿನದ ಬಳಿಕ ಫೋಟೋಗಳು ವೈರಲ್​​

| Updated By: ಮದನ್​ ಕುಮಾರ್​

Updated on: Jan 01, 2022 | 7:55 PM

ಮೋಹಿತ್ ರೈನಾ​-ಅದಿತಿಯ ಮದುವೆ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಮೆಂಟ್​ಗಳ ಮೂಲಕ ನವ ದಂಪತಿಗೆ ಎಲ್ಲರೂ ಶುಭ ಕೋರಿದ್ದಾರೆ.

1 / 5
ಕಿರುತೆರೆ ನಟ ಮೋಹಿತ್​ ರೈನಾ ಅವರು ತಮ್ಮ ಗೆಳತಿ ಅದಿತಿ ಜೊತೆ ಮದುವೆ ಆಗಿದ್ದಾರೆ. ಕಿಂಚಿತ್ತೂ ಸುಳಿವು ನೀಡದೇ ಅವರು ಹಸೆಮಣೆ ಏರಿದ್ದಾರೆ. ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ.

2 / 5
ಡಿ.31ರಂದು ಮೋಹಿತ್​ ರೈನಾ ಮತ್ತು ಅದಿತಿಯ ಮದುವೆ ನೆರವೇರಿದೆ. ಒಂದು ದಿನದ ಬಳಿಕ, ಅಂದರೆ ಜ.1ರಂದು ವಿವಾಹದ ಫೋಟೋಗಳು ವೈರಲ್​ ಆಗಿವೆ. ಅದನ್ನು ಕಂಡು ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

3 / 5
ಮೋಹಿತ್​ ರೈನಾ ಅವರು ತಮ್ಮ ಪ್ರೀತಿಯ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಅವರು ಮದುವೆ ಆಗುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಕೆಲವೇ ಕೆಲವು ಮಂದಿಯನ್ನು ಮಾತ್ರ ಈ ಮದುವೆಗೆ ಆಹ್ವಾನಿಸಲಾಗಿತ್ತು.

4 / 5
ಹಿಂದಿ ಕಿರುತೆರೆಯಲ್ಲಿ ಮೋಹಿತ್​ ರೈನಾ ಹೆಚ್ಚು ಫೇಮಸ್​. ‘ದೇವೋಂಕೆ ದೇವ್​ ಮಹಾದೇವ್​’ ಸೀರಿಯಲ್​ನಲ್ಲಿ ಅವರು ಶಿವನ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು.

5 / 5
ಕೆಲವು ವೆಬ್​ ಸೀರಿಸ್​ಗಳಲ್ಲಿ ಮೋಹಿತ್​ ರೈನಾ ಅವರು ನಟಿಸಿದ್ದಾರೆ. ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾದ ‘ಮುಂಬೈ ಡೈರೀಸ್​ 26/11’ ವೆಬ್​ ಸರಣಿಯಲ್ಲಿ ಡಾಕ್ಟರ್​ ಪಾತ್ರ ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ.