
ಯುಎಸ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಪಂದ್ಯಾವಳಿಯನ್ನು ಗೆಲ್ಲುವ ನೆಚ್ಚಿನ ಆಟಗಾರನೆನಿಸಿಕೊಂಡಿದ್ದ ಕಾರ್ಲೋಸ್ ಅಲ್ಕರಾಝ್, ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಶೆಲ್ಟನ್, ಅಲ್ಕರಾಝ್ ಅವರನ್ನು 6-7 (5), 6-1, 6-3, 1-6, 7-6 (10-7) ಅಂತರದಲ್ಲಿ ಸೋಲಿಸಿದರು(PC-PTI).
4 ಗಂಟೆ 28 ನಿಮಿಷಗಳ ಕಾಲ ನಡೆದ ಈ ಪಂದ್ಯ ಯುಎಸ್ ಓಪನ್ ಇತಿಹಾಸದಲ್ಲಿ ಅತಿ ದೀರ್ಘ ಸಮಯ ನಡೆದ ಪಂದ್ಯವೂ ಆಗಿತ್ತು. ಆದಾಗ್ಯೂ ಈ ಪಂದ್ಯದಲ್ಲಿ ಅಲ್ಕರಾಝ್ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ, ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಅಲ್ಕರಾಝ್ ಅವರ 18 ಪಂದ್ಯಗಳ ಗೆಲುವಿನ ಸರಣಿ ಕೊನೆಗೊಂಡಿದೆ(PC-PTI).
ಅಲ್ಕರಾಝ್ ಮೊದಲ ಸೆಟ್ ಅನ್ನು ಟೈಬ್ರೇಕ್‌ನಲ್ಲಿ ಗೆದ್ದರು. ಎರಡನೇ ಸೆಟ್‌ನಲ್ಲಿ ಬಲವಾದ ಪುನರಾಗಮನ ಮಾಡಿದ ಶೆಲ್ಟನ್ ಸೆಟ್ ಅನ್ನು 6-1 ರಿಂದ ಗೆದ್ದರು. ನಂತರ ಮೂರನೇ ಸೆಟ್ ಕೂಡ 6-3 ರಿಂದ ಶೆಲ್ಟನ್ ಪಾಲಾಯಿತು. ನಾಲ್ಕನೇ ಸೆಟ್‌ನಲ್ಲಿ ಲಯಕ್ಕೆ ಮರಳಿದ ಅಲ್ಕರಾಝ್ 6-1 ರಿಂದ ಗೆದ್ದರು. ಐದನೇ ಮತ್ತು ನಿರ್ಣಾಯಕ ಸೆಟ್ 6-6 ರ ಸಮಬಲದೊಂದಿಗೆ ಅಂತ್ಯಗೊಂಡಿತು. ಹೀಗಾಗಿ ಟೈಬ್ರೇಕ್‌ನಲ್ಲಿ ವಿಜೇತರನ್ನು ನಿರ್ಧರಿಸಬೇಕಾಯಿತು. ಈ ಟೈಬ್ರೇಕ್‌ನಲ್ಲಿ ಶೆಲ್ಟನ್ 10-7 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು(PC-PTI).
ಶೆಲ್ಟನ್ ಈಗ ಸೆಮಿಫೈನಲ್‌ನಲ್ಲಿ ಫ್ರಾನ್ಸಿಸ್ ಟಿಯಾಫೊ ಅವರನ್ನು ಎದುರಿಸಲಿದ್ದಾರೆ. ಟಿಯಾಫೊ ನಾಲ್ಕು ಗಂಟೆ 38 ನಿಮಿಷಗಳ ಕಾಲ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಕೆಲ್ಸನ್ ಅವರನ್ನು 5-7, 3-6, 7-5, 6-3, 7-6 (10-6) ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಸಾಧಿಸಿದ್ದಾರೆ(PC-PTI).
ಇನ್ನು ಈ ಪಂದ್ಯಾವಳಿಯಲ್ಲಿ ಅಲ್ಕರಾಝ್ ಅವರ ಪ್ರದರ್ಶನವನ್ನು ನೋಡುವುದಾದರೆ.. ಮೊದಲ ಸುತ್ತಿನಲ್ಲಿ ಸೈಫುಲ್ಲಾ ಅವರನ್ನು 6-4, 6-4, 6-4 ಅಂತರದಲ್ಲಿ ಸೋಲಿಸಿದ ಅಲ್ಕರಾಝ್, ಎರಡನೇ ಸುತ್ತನ್ನು 4-6, 6-0, 6-3, 6-2 ಅಂತರದಲ್ಲಿ ಗೆದ್ದರು. ಮೂರನೇ ಸುತ್ತಿನಲ್ಲಿ ವೈಬಿ ವು ಅವರನ್ನು 6-3, 6-4, 6-1 ಸೆಟ್‌ಗಳಿಂದ ಸೋಲಿಸಿದ ಅಲ್ಕರಾಝ್, 16 ರ ಸುತ್ತಿನಲ್ಲಿ ಟಾಮಿ ಪಾಲ್ ಅವರನ್ನು 6-4, 6-3, 6-4 ಸೆಟ್‌ಗಳಿಂದ ಮಣಿಸಿದ್ದರು(PC-PTI).
Published On - 6:48 pm, Wed, 9 September 26