ಈ ಆಯುರ್ವೇದ ಟಿಪ್ಸ್ಗಳ ಮೂಲಕ ಶೀತ ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ
ಚಳಿಗಾಲದಲ್ಲಿ ಶೀತ, ಕೆಮ್ಮಿನಂತಹ ಅನಾರೊಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಅದರಲ್ಲೂ ಸಾಂಕ್ರಾಮಿಕ ರೋಗ ಹರಡುವ ದಿನಗಳಲ್ಲಿ ದೇಹವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್ಗಳು.
Updated on: Jan 27, 2022 | 12:05 PM

ಶೀತ, ನೆಗಡಿ ಚಳಿಗಾಲದ ಸಮಯದಲ್ಲಿ ಸಾಮಾನ್ಯವಾಗಿದೆ. ಅದಕ್ಕೆ ಈ ಆಯುರ್ವೇದ ಟಿಪ್ಸ್ಗಳನ್ನು ಬಳಸಿ ಆರೋಗ್ಯವಾಗಿರಿ. ಈ ಟಿಪ್ಸ್ಗಳನ್ನು ಹಿಂದೂಸ್ತಾನ್ ಟೈಮ್ಸ್ಗೆ ಆರೋಗ್ಯ ತಜ್ಞರು ನೀಡಿರುವ ಸಲಹೆಗಳಾಗಿದೆ.

ತಂಪಾದ ಪಾನೀಯಗಳಿಂದ ದೂರವಿರಿ. ಹಣ್ಣಿನ ಜ್ಯೂಸ್, ಮೊಸರು,ಐಸ್ ಸೇರಿಸಿದ ಪದಾರ್ಥಗಳನ್ನು ಸೇವಿಸಬೇಡಿ.

ಹಗಲಿನಲ್ಲಿ ಆದಷ್ಟು ನಿದ್ದೆಯನ್ನು ಮಾಡಬೇಡಿ. ಇದು ಆಯುರ್ವೇದದ ಪ್ರಕಾರ ಆರೋಗ್ಯಕ್ಕೆ ಒಳಿತಲ್ಲ.

ನಿದ್ದೆಗೆಡಬೇಡಿ. ಸಾಧ್ಯವಾದಷ್ಟು ಬೇಗ ಮಲಗಿ. ಇದು ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಶೀತದಂತಹ ಸಮಸ್ಯೆಗಳಿಗೆ ಆರಾಮದಾಯಕ ಅನುಭವ ನೀಡುತ್ತದೆ.

ತಣ್ಣನೆಯ ನೀರಿನ ಸ್ನಾನದಿಂದ ದೂರವಿರಿ. ನಿಮಗೆ ಶೀತದಂತಹ ಲಕ್ಷಣ ಕಂಡುಬಂದರೆ ಬಿಸಿ ನೀರಿನ ಸ್ನಾನವನ್ನೇ ಆಯ್ಕೆಮಾಡಿ

ಶೀತದಂತಹ ಅನಾರೋಗ್ಯಕರ ಲಕ್ಷಣ ಕಂಡುಬಂದರೆ ಪ್ರಾಣಯಾಮವನ್ನು ಅಭ್ಯಸಿಸಿಕೊಳ್ಳಿ. ದಿನಕ್ಕೆ ಎರಡು ಬಾರಿ ಅನುಲೋಮ, ವಿಲೋಮ ಪ್ರಾಣಾಯಾಮವನ್ನು ಮಾಡಿರಿ.

ಶೀತವಾದರೆ ಪ್ರತಿದಿನ ಬೆಳಗ್ಗೆ ತುಳಿಸಿ ಎಲೆ, ಶುಂಠಿ, ಬೆಳ್ಳುಳ್ಳಿ, ಅರಿಶಿನ,ಮೇಥಿ ಬೀಜಗಳೊಂದಿಗೆ ನೀರಿನಲ್ಲಿ ಕುದಿಸಿ ಸೇವಿಸಿ.

ಆದಷ್ಟು ಬಿಸಿ ನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಸೇವಿಸಿ.

ಲೆಮನ್ ಟೀ, ತುಳಸಿ, ಬೆಳ್ಳುಳ್ಳಿ ಮಿಶ್ರಿತ ಸ್ಟೀಮ್ ಅನ್ನು ತೆಗೆದುಕೊಳ್ಳಿ. ಇದು ನಿಮ್ಮ ಕಟ್ಟಿದ ಮೂಗಿನಿಂದ ಪರಿಹಾರ ನೀಡುತ್ತದೆ.

ಉಗುರು ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಸೇರಿಸಿ ಸೇವಿಸಿ.ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಜತೆಗೆ ಶೀತದಿಂದಲೂ ದೇಹವನ್ನು ಬೆಚ್ಚಗಿರಿಸುತ್ತದೆ.
