
ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಪುತ್ರಿ ವಮಿಕಾಗೆ ಇಂದು (ಜನವರಿ 11) ಹುಟ್ಟುಹಬ್ಬದ ದಿನ. ಈ ದಿನಕ್ಕೆ ನಟಿ ಅನುಷ್ಕಾ ಶರ್ಮಾ ಅವರು ವಮಿಕಾಳ ಫೋಟೋ ಹಂಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪ್ರೀತಿಸಿ ಮದುವೆ ಆದವರು. ವಮಿಕಾ ಜನಿಸಿದ ನಂತರದಲ್ಲಿ ಅನುಷ್ಕಾ ಹಾಗೂ ವಿರಾಟ್ ಕುಟುಂಬದ ಖುಷಿ ಹೆಚ್ಚಾಯಿತು.

ವಮಿಕಾ ಜನಿಸಿ ಎರಡು ವರ್ಷ ಕಳೆದರೂ ಮಗುವಿನ ಮುಖವನ್ನು ಈ ದಂಪತಿ ರಿವೀಲ್ ಮಾಡಿಲ್ಲ. ಮಗುವಿನ ಖಾಸಗಿತನಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅವರು ಈ ರೀತಿ ಮಾಡಿದ್ದಾರೆ.

ಜನವರಿ 10ರಂದು ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಬಾರಿಸಿದ್ದಾರೆ. ಈ ಶತಕ ಮಗಳಿಗೆ ನೀಡಿದ ಬರ್ತ್ಡೇ ಗಿಫ್ಟ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಅನುಷ್ಕಾ ಶರ್ಮಾ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.