Updated on: Apr 12, 2023 | 10:58 AM
ಖ್ಯಾತ ನಟಿ ಹನಿ ರೋಸ್ ಅವರು ಗ್ಲಾಮರಸ್ ಫೋಟೋಗಳ ಮೂಲಕ ಪಡ್ಡೆಗಳ ಕಣ್ಣು ಕುಕ್ಕುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಟಾಕ್ ಶುರುವಾಗಿದೆ.
ಈ ವರ್ಷ ತೆರೆಕಂಡ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ಹನಿ ರೋಸ್ ಅವರು ಬಾಲಯ್ಯಗೆ ಜೋಡಿಯಾಗಿ ನಟಿಸಿದರು. ಸಿನಿಮಾದ ಕಾರ್ಯಕ್ರಮಗಳಲ್ಲಿ ಅವರು ಹಾಟ್ ಆಗಿ ಕಾಣಿಸಿಕೊಂಡು ಗಮನ ಸೆಳೆದರು. ಆದರೆ ಹೊಸ ಅವಕಾಶಗಳು ಮಾತ್ರ ಅವರಿಗೆ ಸಿಗುತ್ತಿಲ್ಲ.
‘ವೀರ ಸಿಂಹ ರೆಡ್ಡಿ’ ಚಿತ್ರ ಸೂಪರ್ ಹಿಟ್ ಆದಾಗ ಹನಿ ರೋಸ್ ಜನಪ್ರಿಯತೆ ಹೆಚ್ಚಿತು. ಇನ್ಮುಂದೆ ಅವರು ಟಾಲಿವುಡ್ನಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಾರೆ ಎಂದುಕೊಳ್ಳಲಾಯಿತು. ಆದರೆ ನಿರೀಕ್ಷೆಯಂತೆ ಏನೂ ಆಗುತ್ತಿಲ್ಲ. ಹನಿ ರೋಸ್ ಹೊಸ ಸಿನಿಮಾ ಒಪ್ಪಿಕೊಂಡ ಬಗ್ಗೆ ವರದಿ ಆಗಿಲ್ಲ.
2005ರಲ್ಲೇ ಹನಿ ರೋಸ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರಿಗೆ ಕೇವಲ 14 ವರ್ಷ ವಯಸ್ಸು. ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಅವರು ತಮಿಳು, ಕನ್ನಡ, ತೆಲುಗಿನ ಕೆಲವು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಹನಿ ರೋಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಗೆಬಗೆಯ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಟ್ರೆಂಡ್ನಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 27 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.