Vicky Kaushal Birthday: ವಿಕ್ಕಿ ಕೌಶಲ್ ನಟನೆಯ ಈ ಐದು ಸಿನಿಮಾಗಳನ್ನು ನೀವು ಮಿಸ್ ಮಾಡಲೇಬಾರದು..

Updated on: May 16, 2023 | 8:19 AM

ವಿಕ್ಕಿ ಕೌಶಲ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ಹಲವು ಸೂಪರ್​ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ಅತ್ಯುತ್ತಮ ಸಿನಿಮಾಗಳಿವು.

1 / 7

ವಿಕ್ಕಿ ಕೌಶಲ್​ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಬರ್ತ್​ಡೇ ಶುಭಾಶಯ ಬರುತ್ತಿದೆ. ಎಲ್ಲರೂ ನಟನಿಗೆ ವಿಶ್ ಮಾಡುತ್ತಿದ್ದಾರೆ.

2 / 7

ವಿಕ್ಕಿ ಕೌಶಲ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ಹಲವು ಸೂಪರ್​ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ಅತ್ಯುತ್ತಮ ಸಿನಿಮಾಗಳಿವು.

3 / 7

ಮಸಾನ: 2015ರಲ್ಲಿ ತೆರೆಗೆ ಬಂದ ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆ ರಿಚಾ ಚಡ್ಡಾ, ಶ್ವೇತಾ ತ್ರಿಪಾಟಿ ಮೊದಲಾದವರು ನಟಿಸಿದ್ದರು. ವಿಕ್ಕಿ ನಟನೆಗೆ ಮೆಚ್ಚುಗೆ ಸಿಕ್ಕಿತ್ತು.

4 / 7

ರಾಜಿ: ಆಲಿಯಾ ಭಟ್ ನಟನೆಯ ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರ ಪಾತ್ರ ಗಮನ ಸೆಳೆದಿತ್ತು. ಅವರು ತಮ್ಮ ನಟನೆ ಮೂಲಕ ಎಲ್ಲರ ಗಮನ ಸೆಳೆದರು.

5 / 7

ಮನ್​ಮರ್ಜಿಯಾ: ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಪೋಲಿ ಯುವಕನಾಗಿ ಕಾಣಿಸಿಕೊಂಡಿದ್ದರು. ತಾಪ್ಸಿ ಪನ್ನು, ಅಭಿಷೇಕ್ ಬಚ್ಚನ್ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

6 / 7

ಉರಿ ದಿ ಸರ್ಜಿಕಲ್ ಸ್ಟ್ರೈಕ್: ಉರಿ ಸಿನಿಮಾ ವಿಕ್ಕಿ ಕೌಶಲ್ ವೃತ್ತಿಜೀವನಕ್ಕೆ ಮೈಲೇಜ್ ನೀಡಿತ್ತು. ಪಾಕ್ ವಿರುದ್ಧ ನಡೆದ ಸರ್ಜಿಕಲ್ ಸ್ಟ್ರೈಕ್ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ.

7 / 7

ಸರ್ದಾರ್ ಉದ್ಧಮ್: ವಿಕ್ಕಿ ಕೌಶಲ್ ಅವರು ಕ್ರಾಂತಿಕಾರಿ ಉದ್ಧಮ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಒಳ್ಳೆಯ ಗಳಿಕೆ ಮಾಡಿಲ್ಲ. ಆದರೆ, ವಿಕ್ಕಿ ಕೌಶಲ್ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು.  

Published On - 8:17 am, Tue, 16 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us