ಇಂದು (ಮೇ 9) ವಿಜಯ್ ದೇವರಕೊಂಡ ಅವರ ಬರ್ತ್ಡೇ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.
ವಿಜಯ್ ದೇವರಕೊಂಡ ಅವರು ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೊದಲ ಹಾಡು ಇಂದು ರಿಲೀಸ್ ಆಗಲಿದೆ. ವಿಜಯ್ ದೇವರಕೊಂಡ ಬರ್ತ್ಡೇ ಪ್ರಯುಕ್ತ ಈ ಹಾಡು ಅಭಿಮಾನಿಗಳಿಗೆ ಗಿಫ್ಟ್ ಆಗಿ ಸಿಗಲಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಈ ಜೋಡಿ ಒಪ್ಪಿಕೊಂಡಿಲ್ಲ. ವಿಜಯ್ ಬರ್ತ್್ಡೇಗೆ ರಶ್ಮಿಕಾ ಹೇಗೆ ವಿಶ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯ್ ದೇವರಕೊಂಡ ಇತ್ತೀಚೆಗೆ ದೊಡ್ಡ ಮಟ್ಟದ ಗೆಲುವು ಕಂಡಿಲ್ಲ. ‘ಲೈಗರ್’ ಸೋಲು ಅವರಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾದ ಮುಹೂರ್ತ ನಡೆದಿದೆ. ಕನ್ನಡದ ಶ್ರೀಲೀಲಾ ಈ ಚಿತ್ರಕ್ಕೆ ನಾಯಕಿ.
Published On - 8:51 am, Tue, 9 May 23