ಪತಿಯ ಜೊತೆ ‘ಪುಷ್ಪ’ ಮನೆಗೆ ಹೋದ ‘ಶ್ರೀವಲ್ಲಿ’, ಸಿಎಂ ಮನೆಗೂ ಭೇಟಿ

Updated on: Mar 01, 2026 | 9:25 PM

Vijay Deverakonda and Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಶೀಘ್ರವೇ ಅವರ ಆರತಕ್ಷತೆ ಸಹ ನಡೆಯಲಿದೆ. ಆರತಕ್ಷತೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಮತ್ತು ರಾಜಕೀಯದ ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ. ಇಲ್ಲಿವೆ ನೋಡಿ ಚಿತ್ರಗಳು...

1 / 7
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಶೀಘ್ರವೇ ಅವರ ಆರತಕ್ಷತೆ ಸಹ ನಡೆಯಲಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಶೀಘ್ರವೇ ಅವರ ಆರತಕ್ಷತೆ ಸಹ ನಡೆಯಲಿದೆ.

2 / 7

ಮದುವೆಯ ಬಳಿಕ ಓಡಾಟದಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಂದು (ಮಾರ್ಚ್ 1) ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

3 / 7

‘ಪುಷ್ಪ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಪುಷ್ಪ ಮತ್ತು ಶ್ರೀವಲ್ಲಿಯಾಗಿ ನಟಿಸಿದ್ದರು. ಇದೀಗ ಮದುವೆಯ ಬಳಿಕ ಒಟ್ಟಿಗೆ ಅಲ್ಲು ಅರ್ಜುನ್ ಹೋಗಿದ್ದಲ್ಲದೆ, ಅಲ್ಲು ಅರ್ಜುನ್ ಸಹೋದರನ ಮದುವೆ ಶಾಸ್ತ್ರದಲ್ಲಿ ಭಾಗಿ ಆದರು.

4 / 7

ಆ ಬಳಿಕ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿವಾಸಕ್ಕೂ ಸಹ ರಶ್ಮಿಕಾ-ವಿಜಯ್ ಭೇಟಿ ನೀಡಿದ್ದು, ರೇವಂತ್ ರೆಡ್ಡಿಯವರ ಪತ್ನಿ ರಶ್ಮಿಕಾಗೆ ಅರಿಶಿಣ-ಕುಂಕುಮ ನೀಡಿದ್ದಾರೆ.

5 / 7

ಮಾತ್ರವಲ್ಲದೆ ಸಿಎಂ ರೇವಂತ್ ರೆಡ್ಡಿ ಅವರ ಪತ್ನಿ ರಶ್ಮಿಕಾಗೆ ಉಡುಗೊರೆಗಳನ್ನು ಸಹ ನೀಡಿದ್ದಾರೆ. ಆರತಕ್ಷತೆಗೆ ಆಹ್ವಾನಿಸಲೆಂದು ಜೋಡಿ ಅವರ ಮನೆಗೆ ಭೇಟಿ ನೀಡಿತ್ತು.

6 / 7

ರಶ್ಮಿಕಾ ಮಂದಣ್ಣ ಅವರಿಗೆ ಉಡುಗೊರೆಯನ್ನು ಸಹ ಸಿಎಂ ರೇವಂತ್ ರೆಡ್ಡಿ ಪತ್ನಿ ನೀಡಿದ್ದು, ನವ ಜೋಡಿಗಳಿಗೆ ಹರಸಿದ್ದಾರೆ.

7 / 7

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಆರತಕ್ಷತೆ ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ನಡೆಯಲಿದೆ. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

Published On - 9:25 pm, Sun, 1 March 26

Loading...
Unable to load recommendations.
Follow Us