
ಬಿಗ್ ಬಾಸ್ ಸೀಸನ್ 1: ಬಿಗ್ ಬಾಸ್ ಕನ್ನಡ ಮೊದಲು ಕನ್ನಡಕ್ಕೆ ಬಂದಿದ್ದು 2013ರಲ್ಲಿ. ಈಟಿವಿಯಲ್ಲಿ ಈ ಶೋ ಪ್ರಸಾರ ಆಯಿತು. ಈ ಶೋನ ವಿಜಯ್ ರಾಘವೇಂದ್ರ ವಿನ್ ಆದರು. ಅರುಣ್ ಸಾಗರ್ ರನ್ನರ್ ಅಪ್ ಆದರು.

ಬಿಗ್ ಬಾಸ್ ಸೀಸನ್ 2: 2014ರ ಜೂನ್ 29ರಿಂದ ಅಕ್ಟೋಬರ್ 5ರವರೆಗೆ ‘ಬಿಗ್ ಬಾಸ್ ಸೀಸನ್ 2’ ನಡೆಯಿತು. ಅಕುಲ್ ಬಾಲಾಜಿ ವಿನ್ನರ್ ಹಾಗೂ ಸೃಜನ್ ಲೋಕೆಶ್ ರನ್ನರ್ ಅಪ್ ಆದರು. ಈ ಶೋನಲ್ಲಿ 15 ಸ್ಪರ್ಧಿಗಳು ಇದ್ದರು ಎಂಬುದು ವಿಶೇಷ.

ಬಿಗ್ ಬಾಸ್ ಸೀಸನ್ 3: ಮೂರನೇ ಸೀಸನ್ಗೆ ಸ್ಪರ್ಧಿಗಳ ಸಂಖ್ಯೆಯನ್ನು 18ಕ್ಕೆ ಏರಿಸಲಾಯಿತು. ಈ ಸೀಸನ್ ಅಲ್ಲಿ ಶ್ರುತಿ ವಿನ್ನರ್ ಆದರು. ಕನ್ನಡ ಬಿಗ್ ಬಾಸ್ ಇತಿಹಾಸದ ಮೊದಲ ಹಾಗೂ ಕೊನೆಯ ಮಹಿಳಾ ವಿನ್ನರ್ ಇವರು ಅನ್ನೋದು ವಿಶೇಷ.

ಬಿಗ್ ಬಾಸ್ ಸೀಸನ್ 4: ಪ್ರಥಮ್ ಅವರು ಈ ಸೀಸನ್ ವಿನ್ ಆದರು. ಕಿರಿಕ್ ಕೀರ್ತಿ ರನ್ನರ್ ಅಪ್ ಆದರು. ಕೀರ್ತಿ ಅವರು ವಿನ್ ಆಗಬೇಕಿದ್ದ ಶೋ ಇದು ಎಂದು ಅನೇಕರು ಹೇಳಿದ್ದು ಇದೆ. ಆದರೆ, ಹಾಗಾಗಿಲ್ಲ.

ಬಿಗ್ ಬಾಸ್ ಸೀಸನ್ 5: ಮ್ಯೂಸಿಕ್ ಮೂಲಕ ಗಮನ ಸೆಳೆದ ಚಂದನ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಸೀಸನ್ 5ರ ಅವಕಾಶ ಸಿಕ್ಕಿತು. ಅವರು ಈ ಸೀಸನ್ ವಿನ್ ಆದರು. ಈ ಸೀಸನ್ ಮೂಲಕ ಅವರಿಗೆ ನಿವೇದಿತಾ ಗೌಡ ಪರಿಚಯ ಆಯಿತು.

ಬಿಗ್ ಬಾಸ್ ಸೀಸನ್ 6: ಶಶಿಕುಮಾರ್ ಅವರು ಆರನೇ ಸೀಸನ್ ವಿನ್ ಆದರು. ಇವರು ಕಾಮನ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದರು. ಅವರು ರೈತ ಕೂಡ ಹೌದು. ನವೀನ್ ಸಜ್ಜು ರನ್ನರ್ ಅಪ್ ಆದರು.

ಬಿಗ್ ಬಾಸ್ ಸೀಸನ್ 7: ನಟ ಶೈನ್ ಶೆಟ್ಟಿ ಅವರು ಸೀಸನ್ 7ರ ವಿನ್ನರ್. ಈ ಸೀಸನ್ ಸಾಕಷ್ಟು ಮನರಂಜನೆ ನೀಡಿತ್ತು. ಎಲ್ಲರನ್ನೂ ನಗಿಸಿದ ಕುರಿ ಪ್ರತಾಪ್ ರನ್ನರ್ ಅಪ್ ಆದರು

ಬಿಗ್ ಬಾಸ್ ಸೀಸನ್ 8: ಮಂಜು ಪಾವಗಡ ಶೋನ ವಿನ್ನರ್ ಆದರೆ, ಅರವಿಂದ್ ಕೆಪಿ ರನ್ನರ್ ಅಪ್ ಆಗಿದ್ದರು. ಕೊವಿಡ್ ಕಾರಣದಿಂದ ಶೋ ಅರ್ಧಕ್ಕೆ ನಿಂತು ಮತ್ತೆ ಆರಂಭ ಆಯಿತು. ತಪ್ಪನ್ನು ತಿದ್ದುಕೊಂಡು, ಆಟ ಮುಂದುವರಿಸಲಾಯಿತು.

ಬಿಗ್ ಬಾಸ್ ಸೀಸನ್ 9ರಲ್ಲಿ ಹಳೆಯ ಸೀಸನ್ ಸ್ಪರ್ಧಿಗಳು ಬಂದಿದ್ದರು. ಒಟಿಟಿ ಶೋ ಕೂಡ ಇತ್ತು. ಇದರಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆದರು ಮತ್ತು ರಾಕೇಶ್ ಅಡಿಗ ರನ್ನರ್ ಅಪ್ ಆದರು. ಇಬ್ಬರೂ ಒಟಿಟಿ ಸೀಸನ್ ಅಲ್ಲಿ ಇದ್ದರು.

ಬಿಗ್ ಬಾಸ್ ಸೀಸನ್ 10: ಕಾರ್ತಿಕ್ ಮಹೇಶ್ ಅವರು ಈ ಸೀಸನ್ ವಿನ್ ಆದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು. ಕೊನೆಯವರೆಗೂ ಶೋ ಕುತೂಹಲ ಮೂಡಿಸಿತ್ತು.

ಬಿಗ್ ಬಾಸ್ ಸೀಸನ್ 11: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ವಿನ್ ಆಗಿದ್ದಾರೆ. ಅವರು ತಮ್ಮ ಸಿಂಪಲ್ ವ್ಯಕ್ತಿತ್ವದಿಂದ ಎಲ್ಲರಿಂದ ಮೆಚ್ಚುಗೆ ಪಡೆದು ಗೆದ್ದರು.

ಬಿಗ್ ಬಾಸ್ ಸೀಸನ್ 12: ಈ ಬಾರಿಯ ಸೀಸನ್ ಅಲ್ಲಿ ಗಿಲ್ಲಿ ನಟ ಗೆಲುವು ಕಂಡಿದ್ದಾರೆ. ಅವರಿಗೆ ದೊಡ್ಡ ಮಟ್ಟದಲ್ಲಿ ವೋಟ್ ಸಿಕ್ಕಿದೆ. ಅವರ ಸಾಧನೆಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಇನ್ಸ್ಟಾಗ್ರಾಮ್ನಲ್ಲಿ ಒಂದೂವರೆ ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಾರೆ.