- Kannada News Photo gallery Vijayanagar News in Kannada: Hampi Rathabidi salu mantapa fell into the ground
ನೆಲಕ್ಕುರುಳಿದ ಹಂಪಿ ರಥಬೀದಿಯಲ್ಲಿನ ಸಾಲು ಮಂಟಪಗಳು!
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ವಿಶ್ವವಿಖ್ಯಾತಿ ಗಳಿಸಿದೆ. ಹಂಪಿ ಯುನಸ್ಕೊ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಕಳೆದ 15 ದಿನಗಳಿಂದ ವಿಜಯನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಂಪಿಯ ರಥಬೀದಿಯಲ್ಲಿನ ಸಾಲು ಮಂಟಪಗಳು ನೆಲಕ್ಕುರುಳಿವೆ.
Updated on:May 22, 2024 | 9:55 AM

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ವಿಶ್ವವಿಖ್ಯಾತಿ ಗಳಿಸಿದೆ. ಹಂಪಿ ಯುನಸ್ಕೊ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇಲ್ಲಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇತ್ತೀಚಿಗೆ ಹಂಪಿಯಲ್ಲಿ ಜಿ20 ಶೃಂಗಸಭೆಯ ಕೆಲವು ಸಭೆಗಳು ನಡೆದಿದ್ದವು.

ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಹಂಪಿ ಸಾರಿ ಹೇಳುತ್ತದೆ. ಆದರೆ ಹಂಪಿಯಲ್ಲಿ ಸ್ಮಾರಕಗಳನ್ನು ಮಾತ್ರ ರಕ್ಷಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಹೌದು ಕಳೆದ 15 ದಿನಗಳಿಂದ ವಿಜಯನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಂಪಿಯ ರಥಬೀದಿಯಲ್ಲಿನ ಸಾಲು ಮಂಟಪಗಳು ಕುಸಿದಿವೆ.

ಮಳೆ ಅವಾಂತರಕ್ಕೆ ಸಾಲು ಮಂಟಪಗಳು ನೆಲಕ್ಕುರುಳಿವೆ. ವಿರೂಪಾಕ್ಷ ಬಜಾರ್ನಲ್ಲಿರುವ ಕಲ್ಲಿನ ಮಂಟಪ ಕುಸಿತವಾಗಿದೆ.

ಮಂಟಪದ ಸುತ್ತ ಮಳೆ ನೀರು ಸಂಗ್ರಹವಾಗುವ ಹಿನ್ನೆಲೆಯಲ್ಲಿ ಮಂಟಪಗಳ ಅಡಿಪಾಯ ಸಡಿಲವಾಗಿದ್ದು, 8 ಕಂಬಗಳ ಕಲ್ಲಿನ ಮಂಟಪ ಕುಸಿದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೀಘ್ರವೇ ಮಂಟಪ ಸರಿಪಡಿಸುವಂತೆ ಜನರು ಒತ್ತಾಯಿಸಿದ್ದಾರೆ.

ಹಂಪಿಯಲ್ಲಿ ಮಂಟಪಗಳ ಜೀರ್ಣೋದ್ಧಾರ ಮತ್ತು ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮಾತ್ರ ಈ ಹಣವನ್ನು ಸರಿಯಾಗಿ ಉಪಯೋಗ ಮಾಡುತ್ತಿಲ್ಲ ಅಂತ ಜನರು ಆರೋಪಿಸಿದ್ದಾರೆ.
Published On - 9:53 am, Wed, 22 May 24



