ಸುದೀಪ್ ಅವರ ಕುಟುಂಬದಲ್ಲಿ ಶುಭ ಕಾರ್ಯ ನೆರವೇರುತ್ತಿದೆ. ಕಸಿನ್ ಮದುವೆ ಸಲುವಾಗಿ ಅವರ ಇಡೀ ಫ್ಯಾಮಿಲಿ ಜೊತೆಯಾಗಿದೆ. ಈ ವೇಳೆ ಕಿಚ್ಚನ ಕುಟುಂಬದ ಸದಸ್ಯರು ಜೊತೆಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ಕಿಚ್ಚ ಸುದೀಪ್ ಅವರ ಫ್ಯಾಷನ್ ಬಗ್ಗೆ ಅಭಿಮಾನಿಗಳು ಸದಾ ಆಸಕ್ತಿ ತೋರಿಸುತ್ತಾರೆ. ಮದುಮೆ ಸಮಾರಂಭದಲ್ಲಿ ಸುದೀಪ್ ಧರಿಸಿರುವ ಸಾಂಪ್ರದಾಯಿಕ ಉಡುಗೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸುದೀಪ್ ಜೊತೆ ಅವರ ಪತ್ನಿ ಪ್ರಿಯಾ, ಮಗಳ ಸಾನ್ವಿ ಹಾಗೂ ಸಹೋದರಿಯರು ಈ ಮದುವೆಗೆ ಹಾಜರಿ ಹಾಕಿದ್ದಾರೆ. ಸುದೀಪ್ ಅಕ್ಕನ ಮಗ ಸಂಜಿತ್ ಸಂಜೀವ್ ಕೂಡ ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ.
ಹಲವು ಪ್ರಾಜೆಕ್ಟ್ಗಳಲ್ಲಿ ಸುದೀಪ್ ಬ್ಯುಸಿ ಆಗಿದ್ದಾರೆ. ‘ಕೋಟಿಗೊಬ್ಬ 3’ ಬಿಡುಗಡೆಗೆ ಸಿದ್ಧವಿದೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಮದುವೆ ಸಮಾರಂಭಕ್ಕಾಗಿ ಬಿಡುವು ಮಾಡಿಕೊಂಡಿರುವ ಅವರು ಫ್ಯಾಮಿಲಿ ಜೊತೆ ಕಾಲ ಕಳೆದಿದ್ದಾರೆ.
ಸುದೀಪ್ ಪುತ್ರಿ ಸಾನ್ವಿ ಅವರು ಬಂಧು ಬಾಂಧವರ ಜೊತೆ ಸೇರಿ ಮದುವೆ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಹೈದರಾಬಾದ್ನಲ್ಲಿ ವಿದ್ಯಾಭಾಸ ಮಾಡುತ್ತಿರುವ ಅವರಿಗೆ ಸಂಗೀತದ ಮೇಲೆ ಅಪಾರ ಆಸಕ್ತಿ ಇದೆ.
ಸುದೀಪ್ ಸಹೋದರಿ ಸುಜಾತಾ ಸಂಜೀವ್ ಅವರು ಪುತ್ರ ಸಂಜಿತ್ ಸಂಜೀವ್ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ.
ಶೂಟಿಂಗ್ ಬಿಡುವಿನಲ್ಲಿ ಸುದೀಪ್ ಅವರು ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಕಿಚ್ಚನ ಸಹೋದರಿಯರು ಅವರ ಸಿನಿಪಯಣಕ್ಕೆ ಯಾವಾಗಲೂ ಬೆಂಬಲವಾಗಿ ನಿಂತಿದ್ದಾರೆ.