ಅಮೆರಿಕದ ಜನಪ್ರತಿನಿಧಿಗಳಿಗೆ ‘ದಿ ಬೆಂಗಾಲ್ ಫೈಲ್ಸ್’ ಬಗ್ಗೆ ತಿಳಿಸಿ ಹೇಳಿದ ವಿವೇಕ್ ಅಗ್ನಿಹೋತ್ರಿ

Updated on: Jul 24, 2025 | 9:22 PM

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ನೈಜ ಘಟನೆ ಆಧಾರಿತ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ರೀತಿಯೇ ಈಗ ಅವರು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಮಾಡಿದ್ದಾರೆ. ಆ ಬಗ್ಗೆ ಅವರು ಅಮೆರಿಕಕ್ಕೆ ತೆರಳಿ ಅಲ್ಲಿನ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದಾರೆ.

1 / 5
‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ಅವರ ಪತ್ನಿ ಪಲ್ಲವಿ ಜೋಶಿ ಅವರು ಅಮೆರಿಕದ ವಾಷಿಂಗ್​ಟನ್ ಡಿಸಿಯಲ್ಲಿ ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

2 / 5
‘ಅನೇಕ ಸುಳ್ಳು ನಿರೂಪಣೆಗಳನ್ನು ಪ್ರಶ್ನಿಸಲಾಯಿತು. ಆಳವಾಗಿ ಬೇರೂರಿದ್ದ ಅನೇಕ ಗ್ರಹಿಕೆಗಳನ್ನು ಛಿದ್ರಗೊಳಿಸಲಾಯಿತು’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ. ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

3 / 5
‘ಅಳಿಸಿಹಾಕಲಾದ, ಸಮಾಧಿ ಮಾಡಲಾದ ಹಾಗೂ ನಿರಾಕರಿಸಿದ ಕಥೆಗಳನ್ನು ಜಗತ್ತಿಗೆ ಹೇಳಲು ಸಿನಿಮಾವನ್ನು ಭಾರತದ ಶಕ್ತಿಯಾಗಿ ಬಳಸಲು ನಾವು ಬದ್ಧರಾಗಿದ್ದೇವೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ.

4 / 5
‘ಇದು ಕೇವಲ ಸಿನಿಮಾ ಅಲ್ಲ, ಇದು ಅಳಿಸಿ ಹಾಕಲ್ಪಟ್ಟ ಇತಿಹಾಸ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಆ ಮೂಲಕ ಅವರು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

5 / 5
‘ಬಂಗಾಳದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡದ ಸತ್ಯವನ್ನು ದಶಕಗಳ ಹಿಂದೆಯೇ ಸಮಾಧಿ ಮಾಡಲಾಗಿತ್ತು. ಈಗ ಜಗತ್ತಿನ ಮುಂದೆ ತೆರೆದಿಡಲಾಗಿದೆ’ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ.