ಸಾಯುವುದಕ್ಕೂ ಮೊದಲು ಸರೋಜಾದೇವಿಗೆ ಏನಾಗಿತ್ತು? ಇಲ್ಲಿದೆ ಕೊನೆಯ ಕ್ಷಣಗಳ ವಿವರ

Updated on: Jul 14, 2025 | 12:18 PM

ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಸರೋಜಾ ದೇವಿ ಅವರ ಪತಿ ತುಂಬಾ ಮೊದಲೇ ನಿಧನ ಹೊಂದಿದ್ದರು. ಸರೋಜಾ ದೇವಿ ಸಾಯುವುದಕ್ಕೂ ಮೊದಲು ಏನಾಗಿತ್ತು ಎಂಬುದರ ವಿವರ ಇಲ್ಲಿದೆ.

1 / 5
ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಹೆಸರು ಮಾಡಿದ್ದ ನಟಿ ಬಿ. ಸರೋಜಾ ದೇವಿ ಅವರು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಸಾಯವುದಕ್ಕೂ ಮೊದಲು ಏನಾಗಿತ್ತು ಎಂಬುದರ ಮಾಹಿತಿ ಈಗ ರಿವೀಲ್ ಆಗಿದೆ.

2 / 5
ಸರೋಜಾ ದೇವಿ ಅವರು ಇಂದು ಎಂದಿನಂತೆ ಬೆಂಗಳೂರಿನ ಮನೆಯಲ್ಲೇ ಇದ್ದರು. ಆದರೆ, ಬೆಳಿಗ್ಗೆ ಅವರಿಗೆ ಏಕಾಏಕಿ ತಲೆಸುತ್ತು ಬಂದು ಬಿದ್ದುಹೋಗಿದ್ದಾರೆ. ಇದನ್ನು ನೋಡಿ ಮನೆಯವರಿಗೆ ಆತಂಕ ಆಯಿತು. ಅವರನ್ನು ಹತ್ತಿರದ ಮಣಿಪಾಲ ಹಾಸ್ಪಿಟಲ್​ಗೆ ಕರೆದುಕೊಂಡು ಹೋಗಲಾಯಿತು.

3 / 5
ಆದರೆ, ಸರೋಜಾ ದೇವಿ ಆಗಲೇ ನಿಧನ ಹೊಂದಿದ್ದರು. ಅವರು ಮೃತಪಡುವಾಗ ಸಮಯ ಬೆಳಿಗ್ಗೆ 8.30 ಆಗಿತ್ತು. 9.30ಕ್ಕೆ ಮನೆಗೆ ಪಾರ್ಥಿವ ಶರೀರ ರವಾನೆ ಮಾಡಲಾಯಿತು. ನಾಳೆ (ಜುಲೈ 15) ಅಂತ್ಯ ಸಂಸ್ಕಾರ ಎಲ್ಲಿ ಎಂಬುದನ್ನು ನಿರ್ಧರಿಸಲಾಗುತ್ತದೆ.

4 / 5
ಸದ್ಯ ಇಬ್ಬರು ಮಕ್ಕಳು ಹಾಗೂ ಅಕ್ಕನ ಮೊಮ್ಮಕ್ಕಳನ್ನು ಇವರು ಅಗಲಿದ್ದಾರೆ. ಸರೋಜಾ ದೇವಿ ಅವರು ಅಕ್ಕನ ಮೊಮ್ಮಕ್ಕಳನ್ನೇ ದತ್ತು ಪಡೆದುಕೊಂಡು ಸಾಕುತ್ತಿದ್ದರು. ಸರೋಜಾ ದೇವಿ ಅವರ ಪತಿ ಹರ್ಷ 1986ರಲ್ಲೇ ನಿಧನ ಹೊಂದಿದ್ದರು.

5 / 5
ಸರೋಜಾ ದೇವಿ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಸಾವಿಗೆ ಅನೇಕ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಸಂತಾಪ ಸೂಚಿಸುತ್ತಿದ್ದಾರೆ. ರಾಜಕೀಯ ರಂಗದವರು ಕೂಡ ನಟಿಯ ಮನೆಗೆ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.