- Kannada News Photo gallery Kannada News | When the delegates who came for the G20 research and exploration conference visited the Gir park, see Photos
Photos; ಜಿ20 ಸಂಶೋಧನೆ, ಅನ್ವೇಷಣಾ ಸಮಾವೇಶಕ್ಕೆ ಬಂದಿದ್ದ ಪ್ರತಿನಿಧಿಗಳು ಗಿರ್ ಉದ್ಯಾನವನಕ್ಕೆ ಭೇಟಿ ನೀಡಿದಾಗ
ನಿನ್ನೆ(ಮೇ.18) ನಡೆದಿದ್ದ G20 ರಿಸರ್ಚ್ ಮತ್ತು ಇನ್ನೋವೇಶನ್ ಇನಿಶಿಯೇಟಿವ್ ಗ್ಯಾದರಿಂಗ್ (RIIG) ಸಮ್ಮೇಳನದಲ್ಲಿ G20 ಸದಸ್ಯರು, ಆಹ್ವಾನಿತ ಅತಿಥಿ ದೇಶಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಮುದಾಯದ ಆಹ್ವಾನಿತ ಪರಿಣಿತರು ಭಾಗವಹಿಸಿದ್ದು, ಇಂದು(ಮೇ.19) ರ್ ಉದ್ಯಾನವನಕ್ಕೆ ಭೇಟಿ ನೀಡಿದರು.
Updated on: May 19, 2023 | 10:24 PM

ಡಿಯುನಲ್ಲಿ ನಡೆದ RIIG (Research and Innovation Initiative Gathering)ಸಭೆಯ ಎರಡನೇ ದಿನದಂದು, ಪ್ರತಿನಿಧಿಗಳು ಗುಜರಾತ್‌ನ ಗಿರ್ ಅರಣ್ಯದಲ್ಲಿರುವ ದೇವಲಿಯಾ ಲಯನ್ ಪಾರ್ಕ್‌ಗೆ ಭೇಟಿ ನೀಡಿದರು.

ಗಿರ್ ಉದ್ಯಾನವನ ಏಷ್ಯಾದ ಭವ್ಯವಾದ ಸಿಂಹಗಳ ಏಕೈಕ ನೈಸರ್ಗಿಕ ಆವಾಸಸ್ಥಾನವಾಗಿದ್ದು, ಇಂದು ಬೆಳಿಗ್ಗೆ ಇಲ್ಲಿಗೆ ಭೇಟಿ ನೀಡಿದರು.

ಹೌದು ಗಿರ್ ಉದ್ಯಾನವನಕ್ಕೆ ಭೇಟಿ ನೀಡಿದ್ದ 30 ಕ್ಕೂ ಹೆಚ್ಚು ಪ್ರತಿನಿಧಿಗಳು ಲಯನ್ ಸಫಾರಿ(lion safari) ಯನ್ನ ಮಾಡಿದರು.

ಈ ವೇಳೆ ವಿವಿಧ ಪಕ್ಷಿಗಳು, ಜಿಂಕೆಗಳು, ನರಿಗಳು ಮತ್ತು ಚಿರತೆಗಳನ್ನು ಸಹ ವೀಕ್ಷಿಸಿದರು.

ಬಳಿಕ ಪಾರ್ಕ್ನಿಂದ ನೆನಪಿಗಾಗಿ ಉಡುಗೂರೆಗಳನ್ನು ತೆಗೆದುಕೊಳ್ಳುವುದರೊಂದಿಗೆ ಮುಕ್ತಾಯವಾಯಿತು.

ಇದರ ನಂತರ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಗುಜರಾತ್‌ನಲ್ಲಿರುವ ಸೋಮನಾಥ ದೇವಾಲಯವು ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

ಸೋಮನಾಥನ ದರ್ಶನದ ನಂತರ, ಪ್ರತಿನಿಧಿಗಳು ವಿಶ್ವಶಾಂತಿಯ ಉದ್ದೇಶಕ್ಕಾಗಿ ‘ಲಘು ಯಜ್ಞ'ವನ್ನು ನಡೆಸಿದರು.

ಶಾಂತಿ ಮಂತ್ರದಿಂದ (ಶಾಂತಿಗಾಗಿ ಪಠಣ) ಪ್ರಾರಂಭಿಸಿ, ಯಜ್ಞದಲ್ಲಿ ಬಳಸಬೇಕಾದ 21 ಯಜ್ಞ ಆಹುತಿ (ಅರ್ಪಣೆ) ಅಂಶಗಳ ಮಹತ್ವವನ್ನು ಪ್ರತಿನಿಧಿಗಳಿಗೆ ವೀಡಿಯೊದ ಮೂಲಕ ವಿವರಿಸಲಾಯಿತು. ಜೊತೆಗೆ ಯಜ್ಞದಲ್ಲಿ ಒಮ್ಮೆ ಬಳಸಿದ ಆಹುತಿ ಅಂಶಗಳನ್ನು ಉದ್ಯಾನದಲ್ಲಿ ಗೊಬ್ಬರವಾಗಿಯೂ ಬಳಸಬಹುದು, ಯಾವುದೇ ಅಂಶವು ವ್ಯರ್ಥವಾಗುವುದಿಲ್ಲವೆಂಬುದನ್ನ ತಿಳಿಸಲಾಯಿತು.

ಯಜ್ಞದಲ್ಲಿ ಪ್ರತಿನಿಧಿಗಳ ಭಾಗವಹಿಸುವಿಕೆಯು ಭಾರತದ G20 ಪ್ರೆಸಿಡೆನ್ಸಿಯ ವಿಷಯವನ್ನು ಪ್ರತಿಧ್ವನಿಸುವ ಮೂಲಕ ವಸುಧೈವ ಕುಟುಂಬಕಮ್‌ನ ಪ್ರತಿಪಾಧಿಸಿದರು.




