Kannada News Photo gallery World Health Day 2023; Check out these interesting facts about World Health Day in Kannada Language
World Health Day 2023: ವಿಶ್ವ ಆರೋಗ್ಯ ದಿನ ನೀವು ತಿಳಿದುಕೊಳ್ಳ ಬೇಕಾದ ಕೆಲವು ಆಶ್ಚರ್ಯಕರ ಸಂಗತಿಗಳು ಇಲ್ಲಿವೆ
ವಿಶ್ವ ಆರೋಗ್ಯ ಸಂಸ್ಥೆ (WHO) 1948 ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನು ಜಾರಿಗೆ ತಂದಿತು. ಈ ವಿಶೇಷ ದಿನದಂದು ನೀವು ತಿಳಿದುಕೊಳ್ಳಲೇ ಬೇಕಾದ ಕೆಲವೊಂದು ಆರೋಗ್ಯದ ಬಗ್ಗೆ ಆಶ್ಚರ್ಯಕರ ಸಂಗತಿಗಳು ಇಲ್ಲಿವೆ.
1 / 6
ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಇದು ಜಾಗತಿಕವಾಗಿ ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) 1948 ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನು ಜಾರಿಗೆ ತಂದಿತು. ಈ ವಿಶೇಷ ದಿನದಂದು ನೀವು ತಿಳಿದುಕೊಳ್ಳಲೇ ಬೇಕಾದ ಕೆಲವೊಂದು ಆರೋಗ್ಯದ ಬಗ್ಗೆ ಆಶ್ಚರ್ಯಕರ ಸಂಗತಿಗಳು ಇಲ್ಲಿವೆ.
2 / 6
ವಿಶ್ವದ ಅರ್ಧದಷ್ಟು ಜನಸಂಖ್ಯೆಯು ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯುವುದಿಲ್ಲ ಎಂದು ತಿಳಿದುಬಂದಿದೆ. ಆರೋಗ್ಯ ತಪಾಸಣೆ ನಿರ್ಲಕ್ಷ್ಯ ತೋರುವುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ.
3 / 6
ಶೌಚಾಲಯಕ್ಕಿಂತ ಹೆಚ್ಚಿಗೆ ಜನರು ಮೊಬೈಲ್ ಫೋನ್ ಹೊಂದಿದ್ದಾರೆ. ಮನೆಯಲ್ಲಿ ಶೌಚಾಲಯ ಇರುವುದಕ್ಕಿಂತ ಹೆಚ್ಚು ಮೊಬೈಲ್ ಫೋನ್ ಇರುವುದು ತಿಳಿದುಬಂದಿದೆ. ಆರೋಗ್ಯವನ್ನು ಕಾಪಾಡುವಲ್ಲಿ ನೈರ್ಮಲ್ಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ತಿಳಿಯಬೇಕಿದೆ.
4 / 6
ಅಪೌಷ್ಟಿಕತೆಯಿಂದಾಗಿ ಪ್ರತಿ ವರ್ಷ ಪ್ರಪಂಚದಾದ್ಯಂತ 6.6 ಮಿಲಿಯನ್ ಮಕ್ಕಳ ಸಾವಿಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ. ಮಕ್ಕಳಲ್ಲಿ ಅಪೌಷ್ಟಿಕತೆಯು ಅವರ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
5 / 6
ಪ್ರತೀ ದಿನ 800ಕ್ಕೂ ಹೆಚ್ಚು ಮಹಿಳೆಯರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸಾವನ್ನಪ್ಪುತ್ತಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರಮುಖ ಕಾರಣ ಅಪೌಷ್ಟಿಕತೆ, ಕಳಪೆ ಆಹಾರ ಕ್ರಮ ಹಾಗೂ ಮಹಿಳೆಯ ಮೇಲಿನ ಅತಿಯಾದ ಒತ್ತಡವಾಗಿದೆ.
6 / 6
ಆರೋಗ್ಯ ರಕ್ಷಣೆಗಾಗಿ ಮಾಡಿದ ವೆಚ್ಚಗಳು 100 ಮಿಲಿಯನ್ ಜನರನ್ನು ಬಡತನಕ್ಕೆ ತಳ್ಳಿವೆ ಎಂದು ತಿಳಿದುಬಂದಿದೆ. 2017 ರಲ್ಲಿ 800 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಮನೆಯ ಖರ್ಚಿನಲ್ಲಿ ಕನಿಷ್ಠ 10 ಪ್ರತಿಶತವನ್ನು ಆರೋಗ್ಯ ರಕ್ಷಣೆಗಾಗಿ ಖರ್ಚು ಮಾಡಿದ್ದಾರೆ. ಇದು ಪ್ರಪಂಚದ ಒಟ್ಟು ಜನಸಂಖ್ಯೆಯ ಸುಮಾರು 12 ಪ್ರತಿಶತದಷ್ಟು ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ.