World Snake Day 2024 : ಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳಿವು

| Updated By: ರಮೇಶ್ ಬಿ. ಜವಳಗೇರಾ

Updated on: Jul 15, 2024 | 7:27 PM

ಹಾವುಗಳೆಂದರೆ ಎಲ್ಲರಿಗೂ ಭಯನೇ, ಹೀಗಾಗಿ ಹಾವುಗಳು ಬಂತೆಂದರೆ ದೂರ ಓಡುವವರೇ ಹೆಚ್ಚು. ಈ ಹಾವುಗಳು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿಗಳಲ್ಲಿ ಒಂದು. ಪರಿಸರ ಸಮತೋಲನದಲ್ಲಿ ಈ ಹಾವುಗಳ ಪಾತ್ರವು ಬಹುದೊಡ್ಡದು. ಹೀಗಾಗಿ ಈ ಹಾವುಗಳ ರಕ್ಷಣೆಗಾಗಿ ಹಾಗೂ ಅವುಗಳ ಸಂತತಿಯನ್ನು ಉಳಿಸುವ ಸಲುವಾಗಿ ಪ್ರತಿ ವರ್ಷ ಜುಲೈ 16 ರಂದು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಹೆಚ್ಚಿನವರಿಗೆ ಈ ಹಾವುಗಳ ಬಗ್ಗೆ ತಪ್ಪು ಕಲ್ಪನೆಗಳಿವೆ. ಹಾಗಾದ್ರೆ ಅದೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

1 / 5
ಹಾವುಗಳು ಹಾಲು ಕುಡಿಯುತ್ತದೆ ಎನ್ನುವುದು ಕೆಲವರ ನಂಬಿಕೆ. ಆದರೆ ಈ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಅವುಗಳಿಗೆ ಈ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿಯಿಲ್ಲ. ಅವು ಹಾಲನ್ನು ಸೇವಿಸದ ಸರೀಸೃಪಗಳಾಗಿದ್ದು, ಒಂದು ವೇಳೆ ಬಾಯಾರಿಕೆಯಾದರೆ ಇನ್ನಿತ್ತರ ದ್ರವವನ್ನು ಕುಡಿಯಬಹುದೇ ಹೊರತು ಹಾಲನ್ನು ಕುಡಿಯುವುದಿಲ್ಲ.

2 / 5
ನಾಗರಹಾವುಗಳ ತಲೆಯ ಮೇಲೆ ನಾಗಮಣಿಯಿರುತ್ತದೆ ಎನ್ನುವುದು ಬಹುತೇಕರ ಕಲ್ಪನೆ. ಆದರೆ ಈ ಹಾವುಗಳು ಸಹ ಮನುಷ್ಯರಂತೆ ಸ್ನಾಯುಗಳು ಮತ್ತು ಜೀವಕೋಶಗಳನ್ನು ಹೊಂದಿದ್ದು, ಅವುಗಳ ದೇಹದಲ್ಲಿ ಯಾವುದೇ ರೀತಿಯ ಅಮೂಲ್ಯವಾದ ಕಲ್ಲಿರುವುದಿಲ್ಲ. ಹೀಗಾಗಿ ನಾಗಮಣಿ ಇರುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ.

3 / 5
ಹಾವುಗಳಿಗೆ ಕಿವಿಗಳಿಲ್ಲ, ಆದರೆ ಅವುಗಳಿಗೆ ಶಬ್ದವನ್ನು ಆಲಿಸುವ ಶಕ್ತಿಯನ್ನು ಹೊಂದಿದೆ. ಹಾವಿಗೆ ತಲೆಯ ಭಾಗದಲ್ಲಿ ಕಿವಿಯಂತಹ ಅಂಗವಿದೆ. ಇದರ ಮೂಲಕ  ಶಬ್ದವನ್ನು ಕೇಳಲು ಸಾಧ್ಯ. ಹಾವುಗಳು ತಲೆಯನ್ನು ನೆಲೆದ ಮೇಲೆ ಇರಿಸಿದಾಗ ಕಂಪನದ ಅನುಭವವಾಗುತ್ತದೆ.  ಗಾಳಿಯ ಮೂಲಕವು ಶಬ್ದವನ್ನು ಗ್ರಹಿಸುತ್ತದೆ.

4 / 5
ಹಾವುಗಳು ಪುಂಗಿಯ ಶಬ್ದಕ್ಕೆ ನೃತ್ಯ ಮಾಡುತ್ತದೆ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ಈ ಹಾವುಗಳು ಈ ರಾಗಕ್ಕೆ ನೃತ್ಯ ಮಾಡುವುದಿಲ್ಲ. ಪುಂಗಿಯು ಸ್ವರ ಕೇಳಿ ತಮ್ಮ ಬೇಟೆ ಅಥವಾ ಬೆದರಿಕೆ ಎಂದುಕೊಳ್ಳುತ್ತದೆ. ಅದಲ್ಲದೇ ಪುಂಗಿಯು ಚಲಿಸುತ್ತಿದ್ದಂತೆ ಹಾವುಗಳು ಅದೇ ರೀತಿಯಲ್ಲಿ ಚಲಿಸುತ್ತವೆ.

5 / 5
ಹಾವಿನ ದ್ವೇಷ ನೂರು ವರುಷ, ಹಾವಿಗೆ ಏನಾದರೂ ತೊಂದರೆ ಮಾಡಿದರೆ ಅವುಗಳು ಸೇಡು ತೀರಿಸಿಕೊಳ್ಳಲು ನಿಮ್ಮನ್ನು ಕಾಡುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಅವುಗಳಿಗೆ ಮನುಷ್ಯನ ಮುಖವನ್ನು ನೆನಪಿಸಿಕೊಳ್ಳುವಷ್ಟು ಜ್ಞಾಪಕಶಕ್ತಿಯಿಲ್ಲ, ಹೀಗಾಗಿ ಇದೊಂದು ಕಲ್ಪನೆಯಷ್ಟೇ ಎನ್ನಲಾಗಿದೆ.

Published On - 7:26 pm, Mon, 15 July 24