
ಖ್ಯಾತ ನಟ ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ಅಭಿಮಾನಿಗಳು ಭರ್ಜರಿಯಾಗಿ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ. ಅದಕ್ಕೆ ಸಾಕ್ಷಿಯೇ ಈ ಫೋಟೋಗಳು.

ಯಶ್ ಅವರ ಸ್ನೇಹಿತರು ರಾಜ್ಯದ ಹಲವು ಕಡೆಗಳಲ್ಲಿ ಬಿಲ್ಬೋರ್ಡ್ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಬೆಂಗಳೂರಿನಲ್ಲೇ ನೂರಾರು ದೊಡ್ಡ ದೊಡ್ಡ ಬಿಲ್ಬೋರ್ಡ್ ರಾರಾಜಿಸುತ್ತಿವೆ.

‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಯಶ್ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಮಾರ್ಚ್ 19ರಂದು ‘ಟಾಕ್ಸಿಕ್’ ಚಿತ್ರ ರಿಲೀಸ್ ಆಗಲಿದೆ.

ಈ ಬಾರಿಯೂ ಕೂಡ ಫ್ಯಾನ್ಸ್ ಜೊತೆ ಯಶ್ ಅವರು ಜನ್ಮದಿನ ಆಚರಣೆ ಮಾಡುವುದಿಲ್ಲ. ಮೂಲಗಳ ಪ್ರಕಾರ, ‘ಟಾಕ್ಸಿಕ್’ ಸಿನಿಮಾದ ಟೀಸರ್ ಮೂಲಕ ಅವರು ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.

ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಈ ಬಾರಿ ಯಶ್ ಅವರು 40ನೇ ವಸಂತಕ್ಕೆ ಕಾಲಿಡುತ್ತಿದ್ದು, ಕಾಮನ್ ಡಿಪಿ ಬಿಡುಗಡೆ ಆಗುತ್ತಿದೆ.