
ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಮದುವೆ ಇಂದು (ನವೆಂಬರ್ 28) ಅದ್ದೂರಿಯಾಗಿ ನೆರವೇರುತ್ತಿದೆ. ಅದಕ್ಕೂ ಮೊದಲು ಈ ಜೋಡಿ ಪ್ಯಾಲೇಸ್ ಗ್ರೌಂಡ್ನಲ್ಲಿ ಆರತಕ್ಷತೆ ಮಾಡಿಕೊಂಡಿದೆ.

ಸೆಲೆಬ್ರಿಟಿಗಳು ಮದುವೆ ಆಗುತ್ತಿದ್ದಾರೆ ಎಂದರೆ ಅಲ್ಲಿ ಒಂದಷ್ಟು ಸೆಲೆಬ್ರಿಟಿಗಳು ಹಾಜರಿ ಇರಲೇಬೇಕು. ಅದೇ ರೀತಿ ನಟಿ ಅದಿತಿ ಮದುವೆಗೆ ಅನೇಕ ಗಣ್ಯರು ಹಾಜರಿ ಹಾಕಿದ್ದಾರೆ.

ನಟ ಯಶ್-ರಾಧಿಕಾ ದಂಪತಿ ಮದುವೆಗೆ ಹಾಜರಿ ಹಾಕಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ನಟಿ ರಂಜನಿ ರಾಘವನ್, ಮೇಘಾ ಶೆಟ್ಟಿ ಮೊದಲಾದವರು ಈ ಸಮಾರಂಭದಲ್ಲಿ ಭಾಗಿ ಆಗಿ ಶುಭ ಕೋರಿದ್ದಾರೆ.

ಅದಿತಿ ಹಾಗೂ ಯಶಸ್ವಿ ಅವರ ವಿವಾಹ ಕಾರ್ಯ ಇಂದು (ನವೆಂಬರ್ 28) ಬೆಳಿಗ್ಗೆ 9.30ರಿಂದ 10.32ರಲ್ಲಿ ಸಲ್ಲುವ ಮುಹೂರ್ತದಲ್ಲಿ ನೆರವೇರಲಿದೆ.
Published On - 6:55 am, Mon, 28 November 22