Updated on: Nov 27, 2022 | 10:23 PM
ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರಿಗೆ ಇಂದು 36ನೇ ಹುಟ್ಟುಹಬ್ಬದ ಸಂಭ್ರಮ. ಭಾರತೀಯ ಕ್ರಿಕೆಟ್ ತಂಡದ ಪ್ರತಿಭಾವಂತ ಎಡಗೈ ಬ್ಯಾಟ್ಸ್ಮನ್- ಅದ್ಭುತ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದ ರೈನಾ ಸದ್ಯ ಐಪಿಎಲ್ಗೆ ನಿವೃತ್ತಿ ಹೇಳಿದ್ದಾರೆ. ಆದರೆ ಅವರು ಬರೆದಿಟ್ಟಿರುವ ಕೆಲ ದಾಖಲೆಗಳು ಇನ್ನೂ ಕೂಡ ಹಾಗೆಯೇ ಉಳಿದಿರುವುದು ವಿಶೇಷ.
ಹಾಗಿದ್ರೆ ಐಪಿಎಲ್ನಲ್ಲಿ ಸುರೇಶ್ ರೈನಾ ಹೆಸರಿನಲ್ಲಿರುವ ಮೂರು ವಿಶೇಷ ದಾಖಲೆಗಳು ಯಾವುವು ಎಂದು ನೋಡೋಣ...
ಅತೀ ಹೆಚ್ಚು ಕ್ಯಾಚ್: ಕ್ರಿಕೆಟ್ ಅಂಗಳದ ಅತ್ಯುತ್ತಮ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದ ಸುರೇಶ್ ರೈನಾ ಐಪಿಎಲ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಕ್ಷೇತ್ರರಕ್ಷಕ ಎನಿಸಿಕೊಂಡಿದ್ದಾರೆ. 205 ಪಂದ್ಯಗಳಿಂದ 109 ಕ್ಯಾಚ್ ಹಿಡಿಯುವ ಮೂಲಕ ರೈನಾ ಬೆಸ್ಟ್ ಫೀಲ್ಡರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಪವರ್ಪ್ಲೇನಲ್ಲಿ ಪವರ್: ಐಪಿಎಲ್ ಪವರ್ಪ್ಲೇ ಓವರ್ಗಳಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಕೂಡ ಸುರೇಶ್ ರೈನಾ ಹೆಸರಿನಲ್ಲಿದೆ. 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸುರೇಶ್ ರೈನಾ ಪವರ್ಪ್ಲೇ ಮುಕ್ತಾಯದೊಳಗೆ ಏಕಾಂಗಿಯಾಗಿ 87 ರನ್ ಚಚ್ಚಿದ್ದರು. ಇದು ಐಪಿಎಲ್ನ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಬ್ಯಾಟ್ಸ್ಮನ್ವೊಬ್ಬರು ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ.
ಸತತ ಕಣಕ್ಕಿಳಿದ ದಾಖಲೆ: ಒಂದೇ ತಂಡದ ಪರ ಸತತವಾಗಿ ಅತ್ಯಧಿಕ ಪಂದ್ಯವಾಡಿದ ದಾಖಲೆ ಕೂಡ ಸುರೇಶ್ ರೈನಾ ಹೆಸರಿನಲ್ಲಿದೆ. ರೈನಾ ಸಿಎಸ್ಕೆ ಪರ ಸತತವಾಗಿ 158 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಂದರೆ 158 ಪಂದ್ಯಗಳ ನಡುವೆ ಒಮ್ಮೆಯೂ ಒಂದೇ ಒಂದು ಪಂದ್ಯದಲ್ಲಿ ವಿಶ್ರಾಂತಿ ಅಥವಾ ಗಾಯಗೊಂಡು ಹೊರಗುಳಿದಿರಲಿಲ್ಲ. ಇದು ಕೂಡ ಐಪಿಎಲ್ನಲ್ಲಿ ಸುರೇಶ್ ರೈನಾ ಹೆಸರಿನಲ್ಲಿರುವ ವಿಶೇಷ ದಾಖಲೆಯಾಗಿದೆ.
ಸದ್ಯ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಸುರೇಶ್ ರೈನಾ, ಅಬುಧಾಬಿ ಟಿ10 ಲೀಗ್ ಹಾಗೂ ರೋಡ್ ಸೇಫ್ಟಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟೀಮ್ ಇಂಡಿಯಾ ಪರ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿರುವ ಸುರೇಶ್ ರೈನಾ, ಒಟ್ಟಾರೆ 7988 ರನ್ ಕಲೆಹಾಕಿದ್ದಾರೆ. ಇನ್ನು ಬೌಲಿಂಗ್ ಒಟ್ಟಾರೆ 62 ವಿಕೆಟ್ ಕಬಳಿಸಿ ಮಿಂಚಿದ್ದಾರೆ.