- Kannada News Photo gallery Cricket photos This star poses a threat to KL Rahul, claims 674 runs in 14 matches
Team India: ಯುವ ಆರಂಭಿಕ ಆಟಗಾರನ ಅಬ್ಬರ: ಕೆಎಲ್ ರಾಹುಲ್ಗೆ ನಡುಕ ಶುರು..!
Team India: 2023ರ ಏಕದಿನ ವಿಶ್ವಕಪ್ಗೆ ಇನ್ನು ತಿಂಗಳುಗಳು ಮಾತ್ರ ಉಳಿದಿದ್ದು, ಅದಕ್ಕೂ ಮುನ್ನ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿ ವರ್ಲ್ಡ್ಕಪ್ಗಾಗಿ ಭರ್ಜರಿ ತಯಾರಿ ನಡೆಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
Updated on: Nov 27, 2022 | 7:30 PM

ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹೊರಬೀಳುತ್ತಿದ್ದಂತೆ ಆರಂಭಿಕರ ಬಗ್ಗೆ ಅಪವಾದಗಳು ಕೇಳಿ ಬಂದಿದ್ದವು. ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಳಪೆ ಆರಂಭ ನೀಡಿದ್ದೇ ತಂಡದ ಸೋಲಿಗೆ ಕಾರಣ ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಕೆಲ ಮಾಜಿ ಆಟಗಾರರು ಕೂಡ ಆರಂಭಿಕರ ಬದಲಾವಣೆ ಬಗ್ಗೆ ಸಲಹೆಗಳನ್ನು ನೀಡಿದ್ದರು. ಇದೀಗ ಟೀಮ್ ಇಂಡಿಯಾದ ಹೊಸ ಆಯ್ಕೆ ಸಮಿತಿ ಯುವ ಆಟಗಾರರಿಗೆ ಸ್ಥಾನ ನೀಡುವ ಸಾಧ್ಯತೆಯಿದೆ.

ಏಕೆಂದರೆ ತಂಡದಲ್ಲಿರುವ ಕೆಲ ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಹೀಗಾಗಿ ಮುಂಬರುವ ಏಕದಿನ ವಿಶ್ವಕಪ್ಗಾಗಿ ಹೊಸ ಆರಂಭಿಕರನ್ನು ರೂಪಿಸಲು ಆಸಕ್ತಿ ಹೊಂದಲಿದ್ದಾರೆ. ಹೀಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸಿದರೆ ಕೆಎಲ್ ರಾಹುಲ್ ಸ್ಥಾನಕ್ಕೆ ಕುತ್ತು ಬರುವುದು ಖಚಿತ.

ಏಕೆಂದರೆ ಟೀಮ್ ಇಂಡಿಯಾದ ಆರಂಭಿಕರ ರೇಸ್ನಲ್ಲಿ ಇತ್ತ ಯುವ ಓಪನರ್ ಶುಭ್ಮನ್ ಗಿಲ್ ಇದ್ದಾರೆ. ಕೆಎಲ್ ರಾಹುಲ್ ವಿಶ್ರಾಂತಿಯಲ್ಲಿದ್ದಾಗ ಅವಕಾಶ ಪಡೆಯುವ ಗಿಲ್ ಚಾನ್ಸ್ ಸಿಕ್ಕಾಗೆಲ್ಲಾ ತಮ್ಮ ಛಾಪು ಮೂಡಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಗಿಲ್ ಅವರ ಅಂಕಿ ಅಂಶಗಳು.

ಶುಭ್ಮನ್ ಗಿಲ್ ತಮ್ಮ ಏಕದಿನ ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 14 ಪಂದ್ಯಗಳನ್ನು ಆಡಿದ್ದಾರೆ. ಈ 14 ಪಂದ್ಯಗಳಲ್ಲಿ ಅವರ ಪ್ರದರ್ಶನವು ಶ್ಲಾಘನೀಯ. ಏಕೆಂದರೆ 14 ಇನಿಂಗ್ಸ್ಗಳಲ್ಲಿ ಗಿಲ್ 61.27ರ ಸರಾಸರಿಯಲ್ಲಿ 674 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳು ಸೇರಿವೆ.

ಮತ್ತೊಂದೆಡೆ ಕೆಎಲ್ ರಾಹುಲ್ ಅವರ ಏಕದಿನ ಅಂಕಿಅಂಶಗಳನ್ನು ಗಮನಿಸಿದರೆ, ಕಳೆದ 45 ಪಂದ್ಯಗಳಲ್ಲಿ 45 ರ ಸರಾಸರಿಯಲ್ಲಿ 1665 ರನ್ ಗಳಿಸಿದ್ದಾರೆ. ಈ ವೇಳೆ 5 ಶತಕ ಹಾಗೂ 10 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇಲ್ಲಿ ಸರಾಸರಿ ವಿಷಯದಲ್ಲಿ ಕೆಎಲ್ ರಾಹುಲ್ಗಿಂತ ಶುಭ್ಮನ್ ಗಿಲ್ ಮುಂದಿದ್ದಾರೆ. ಇನ್ನು ಗಿಲ್ 100.44 ಸ್ಟ್ರೈಕ್ ರೇಟ್ ಹೊಂದಿದ್ದರೆ, ಕೆಎಲ್ ರಾಹುಲ್ 87.86. ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ಗಿಂತ ಶುಭ್ಮನ್ ಗಿಲ್ಗೆ ಹೆಚ್ಚಿನ ಅವಕಾಶ ನೀಡುವುದು ಸೂಕ್ತ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಬದಲಿಗೆ ಶುಭ್ಮನ್ ಗಿಲ್ ಟೀಮ್ ಇಂಡಿಯಾ ಏಕದಿನ ತಂಡದ ಖಾಯಂ ಆರಂಭಿಕನಾಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ 2023ರ ಏಕದಿನ ವಿಶ್ವಕಪ್ಗೆ ಇನ್ನು ತಿಂಗಳುಗಳು ಮಾತ್ರ ಉಳಿದಿದ್ದು, ಅದಕ್ಕೂ ಮುನ್ನ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿ ವರ್ಲ್ಡ್ಕಪ್ಗಾಗಿ ಭರ್ಜರಿ ತಯಾರಿ ನಡೆಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
