ಮೊದಲ ಏಕದಿನದಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ವಿಫಲರಾಗಿದ್ದರು. ಹೀಗಾಗಿ ಐವರು ಬೌಲರ್ಗಳ ಬದಲಿಗೆ 2ನೇ ಏಕದಿನ ಪಂದ್ಯದಲ್ಲಿ 6 ಬೌಲರ್ಗಳನ್ನು ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ. ಹೀಗಾಗಿ ಓರ್ವ ಬ್ಯಾಟ್ಸ್ಮನ್ ಹೊರಗಿಟ್ಟು, ಬೌಲರ್ರೊಬ್ಬರಿಗೆ ಅವಕಾಶ ನೀಡಿದ್ದೇವೆ ಎಂದು ಶಿಖರ್ ಧವನ್ ತಿಳಿಸಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವ ಸಂಜು ಸ್ಯಾಮ್ಸನ್ಗೆ ಅವಕಾಶ ಕೈ ತಪ್ಪಿದೆ.