ಅಭಿಮಾನಿಗಳು ವಿನ್ಯಾಸಗೊಳಿಸಿದ ಪೋಸ್ಟರ್ಗಳನ್ನು ಪ್ರಮುಖ ಸ್ಥಳಗಳಲ್ಲಿ ಹಾಕಲಾಗುವುದು ಎಂದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತಂಡ ಈ ಮೊದಲೇ ಹೇಳಿತ್ತು. ಚಿತ್ರತಂಡದ ಕರೆಗೆ ಸ್ಪಂದಿಸಿ ಹಲವಾರು ಅಭಿಮಾನಿಗಳು ಪೋಸ್ಟರ್ ರಚಿಸಿದ್ದಾರೆ. ಅದರಲ್ಲಿ ಕೆಲವು ಪೋಸ್ಟರ್ಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ಅಭಿಮಾನಿ ಜಾನ್ ಪೌಲ್ ಗ್ಸಾವಿಯರ್ ರಚಿಸಿದ ಪೋಸ್ಟರ್ ಇದು.
‘ರಾಕಿಂಗ್ ಸ್ಟಾರ್’ ಯಶ್ ಅವರ ರಗಡ್ ಫೋಟೋಗಳನ್ನು ಬಳಸಿ ಅನೇಕರು ವಿಶೇಷವಾದ ಪೋಸ್ಟರ್ಗಳನ್ನು ವಿನ್ಯಾಸ ಮಾಡಿದ್ದಾರೆ. ಒಂದಕ್ಕಿಂತ ಒಂದು ಸೂಪರ್ ಆಗಿದೆ. ಚಿತ್ರದ ಪ್ರಚಾರಕ್ಕಾಗಿ ಈ ಪೋಸ್ಟರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದ ಅಭಿಮಾನಿ ಅಭಿಜಿತ್ ಶೆಟ್ಟಿ ರಚಿಸಿದ ಪೋಸ್ಟರ್ ಇಲ್ಲಿದೆ.
ಜನರು ಈ ಪರಿ ರೆಸ್ಪಾನ್ಸ್ ನೀಡಿರುವುದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಫ್ಯಾನ್ ಮೇಡ್ ಪೋಸ್ಟರ್ಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಯಾವ ಪೋಸ್ಟರ್ ಎಲ್ಲಿ ಬಿತ್ತರ ಆಗಲಿದೆ ಎಂಬ ಮಾಹಿತಿಯನ್ನೂ ತಿಳಿಸಲಾಗಿದೆ. ಕರ್ನಾಟಕದ ಅಭಿಮಾನಿ ಸಚಿನ್ ಕುಮಾರ್ ಈ ಪೋಸ್ಟರ್ ರಚಿಸಿದ್ದಾರೆ.
ಹೊರರಾಜ್ಯಗಳ ಅಭಿಮಾನಿಗಳು ಕೂಡ ತಮ್ಮ ವಿಶೇಷ ಕಲ್ಪನೆಯಲ್ಲಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಅವುಗಳಲ್ಲಿ ಕೆಲವನ್ನು ಚಿತ್ರತಂಡ ಆಯ್ಕೆ ಮಾಡಿದೆ. ಪೋಸ್ಟರ್ ರಚಿಸಿದ ಅಭಿಮಾನಿಗಳ ಹೆಸರನ್ನೂ ಕೂಡ ಉಲ್ಲೇಖಿಸಲಾಗಿದೆ. ತಮಿಳುನಾಡಿನ ಬಾಲಾಜಿ ಮೂರ್ತಿ ಅವರು ರಚಿಸಿದ ಪೋಸ್ಟರ್ ಇಲ್ಲಿದೆ.
ಎಲ್ಲ ರಾಜ್ಯಗಳಲ್ಲೂ ‘ಕೆಜಿಎಫ್: ಚಾಪ್ಟರ್ 2’ ಹವಾ ಜೋರಾಗಿದೆ. ಹಿಂದಿಯಲ್ಲಿ ಈ ಸಿನಿಮಾ ದೊಡ್ಡ ಹಿಟ್ ಆಗುವ ಸೂಚನೆ ಸಿಕ್ಕಿದೆ. ಮುಂಬೈನ ಪ್ರಮುಖ ಸ್ಥಳಗಳಲ್ಲಿ ಈ ಪೋಸ್ಟರ್ಗಳು ರಾರಾಜಿಸಲಿವೆ. ಮಹಾರಾಷ್ಟ್ರದ ಪರಿವರ್ತನ್ ಅವರು ಈ ಪೋಸ್ಟರ್ ರಚಿಸಿದ್ದಾರೆ.