Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2022: ಈ ವರ್ಷದ ಭಾರತೀಯ ಕ್ರೀಡಾಲೋಕದ ಸ್ಮರಣೀಯ ಕ್ಷಣಗಳ ಇಣುಕು ನೋಟ

Year Ender 2022: ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಥಾಮಸ್ ಕಪ್‌ವರೆಗೆ ಎಲ್ಲೆಡೆ ಭಾರತದ ತ್ರಿವರ್ಣ ಪತಾಕೆ ಮುಗಿಲೆತ್ತರಕ್ಕೇರಿತ್ತು. ಹಾಗಿದ್ರೆ 2022 ರ ಭಾರತೀಯ ಕ್ರೀಡಾಕ್ಷೇತ್ರದಲ್ಲಿನ ಅವಿಸ್ಮರಣೀಯ ಕ್ಷಣಗಳಾವುವು ಎಂದು ನೋಡೋಣ....

TV9 Web
| Updated By: ಝಾಹಿರ್ ಯೂಸುಫ್

Updated on:Dec 25, 2022 | 11:00 PM

2022ರ ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಎಲ್ಲಾ ಕ್ಷೇತ್ರಗಳಂತೆ ಈ ಬಾರಿ ಕ್ರೀಡಾ ಕ್ಷೇತ್ರದಲ್ಲೂ ಒಂದಷ್ಟು ಸಂಚಲನ ಸೃಷ್ಟಿಯಾಗಿದೆ. ವಿಶೇಷವಾಗಿ ಈ ಬಾರಿ ಕ್ರೀಡಾರಂಗದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತ್ತು ಎಂದರೆ ತಪ್ಪಾಗಲಾರದು. ಏಕೆಂದರೆ ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಥಾಮಸ್ ಕಪ್‌ವರೆಗೆ ಎಲ್ಲೆಡೆ ಭಾರತದ ತ್ರಿವರ್ಣ ಪತಾಕೆ ಮುಗಿಲೆತ್ತರಕ್ಕೇರಿತ್ತು. ಹಾಗಿದ್ರೆ 2022 ರ ಭಾರತೀಯ ಕ್ರೀಡಾಕ್ಷೇತ್ರದಲ್ಲಿನ ಅವಿಸ್ಮರಣೀಯ ಕ್ಷಣಗಳಾವುವು ಎಂದು ನೋಡೋಣ....

1 / 11
ವಿರಾಟ್ ಕೊಹ್ಲಿ ಪಾಲಿಗೆ ಸಿಹಿ-ಕಹಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪಾಲಿಗೆ ಈ ವರ್ಷ ಸಿಹಿ ಹಾಗೂ ಕಹಿ ಅನುಭವವನ್ನು ನೀಡಿತ್ತು. ವರ್ಷದ ಆರಂಭದಲ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಟೀಮ್ ಇಂಡಿಯಾ ಕ್ಯಾಪ್ಟನ್​ ಸ್ಥಾನವನ್ನು ತ್ಯಜಿಸಿದ್ದರು. ಇದರೊಂದಿಗೆ ಭಾರತೀಯ ಕ್ರಿಕೆಟ್​ನಲ್ಲಿ ನಾಯಕನಾಗಿ ಕೊಹ್ಲಿ ಯುಗಾಂತ್ಯವಾಗಿತ್ತು. ಇನ್ನು ಅಫ್ಘಾನಿಸ್ತಾನ್ ವಿರುದ್ಧ ಶತಕ ಬಾರಿಸುವ ಮೂಲಕ ಚೊಚ್ಚಲ ಟಿ20 ಶತಕ ಸಿಡಿಸಿದ್ದರು. ಅಲ್ಲದೆ ಬಾಂಗ್ಲಾದೇಶ್ ವಿರುದ್ಧ ಏಕದಿನ ಶತಕ ಬಾರಿಸಿದ್ದರು. ಈ ಮೂಲಕ 3 ವರ್ಷಗಳ ಶತಕದ ಬರವನ್ನು ಕೊಹ್ಲಿ 2022ರಲ್ಲಿ ನೀಗಿಸಿದ್ದು ವಿಶೇಷ.

2 / 11
ಟೀಮ್ ಇಂಡಿಯಾ ಚಾಂಪಿಯನ್: ಈ ವರ್ಷ ನಡೆದ ಅಂಡರ್-19 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಫೈನಲ್​ನಲ್ಲಿ 4 ವಿಕೆಟ್​ಗಳಿಂದ ಮಣಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ವಿಶೇಷ ಎಂದರೆ ಕಳೆದ 2 ವರ್ಷಗಳಲ್ಲಿ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಡೆದ ಏಕೈಕ ಪ್ರಶಸ್ತಿ ಇದಾಗಿದೆ.

3 / 11
ಬೆಳ್ಳಿ ಪದಕ: ಕಾಮನ್‌ವೆಲ್ತ್‌ ಗೇಮ್ಸ್​​ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಚಿನ್ನದ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾ ವನಿತೆಯರು ಫೈನಲ್​ನಲ್ಲಿ ಆಸ್ಟ್ರೇಲಿಯದ ಎದುರು ಸೋಲನುಭವಿಸಬೇಕಾಯಿತು. ಹೀಗಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

4 / 11
ಥಾಮಸ್ ಕಪ್: ಕ್ರಿಕೆಟ್ ಹೊರತಾಗಿ ಬ್ಯಾಡ್ಮಿಂಟನ್​ನಲ್ಲೂ ಭಾರತದ ಪ್ರದರ್ಶನ ಅತ್ಯುತ್ತಮವಾಗಿತ್ತು. 2022 ರಲ್ಲಿ ಪುರುಷರ ಬ್ಯಾಡ್ಮಿಂಟನ್ ತಂಡವು ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿತು.

5 / 11
ಮೊದಲ ಕಪ್: ಐಪಿಎಲ್​ನಲ್ಲಿ ಚೊಚ್ಚಲ ಬಾರಿ ಕಾಣಿಸಿಕೊಂಡ ಗುಜರಾತ್ ಟೈಟಾನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು. ಹಾರ್ದಿಕ್ ಪಾಂಡ್ಯ ಆವರ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಈ ಸಾಧನೆ ಮಾಡಿದ್ದು ವಿಶೇಷ.

6 / 11
ಪವರ್​ಫುಲ್ ಪಂಚ್: ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ನಿಖತ್ ಜರೀನ್ ಈ ವರ್ಷ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದರು.

7 / 11
ಚಿನ್ನದ ಹುಡುಗನಿಗೆ ಬೆಳ್ಳಿ: ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದರು.

8 / 11
ಚೆಸ್​ ಒಲಿಂಪಿಯಾಡ್: 98 ವರ್ಷಗಳ ಇತಿಹಾಸ ಹೊಂದಿರುವ ಚೆಸ್‌ ಒಲಿಂಪಿಯಾಡ್‌ನ 44ನೇ ಆವೃತ್ತಿಗೆ ಇದೇ ಮೊದಲ ಬಾರಿ ಭಾರತ ಆತಿಥ್ಯವಹಿಸಿತ್ತು. ಚೆನ್ನೈನಲ್ಲಿ ನಡೆದ ಈ ಚದುರಂಗ ಸ್ಪರ್ಧೆಯಲ್ಲಿ 346 ದೇಶಗಳ 350 ತಂಡಗಳು ಭಾಗವಹಿಸಿದ್ದವು.

9 / 11
ಸಮಾನ ವೇತನ ನೀತಿ: ಈ ವರ್ಷ ಭಾರತೀಯ ಕ್ರಿಕೆಟ್ ಮಂಡಳಿ ಮಹಿಳಾ ಕ್ರಿಕೆಟಿಗರಿಗೆ ವೇತನ ಸಮಾನತೆಯನ್ನು ಘೋಷಿಸಿ ಐತಿಹಾಸಿಕ ಹೆಜ್ಜೆಯನ್ನಿಟ್ಟಿತು. ಕಾರ್ಯದರ್ಶಿ ಜಯ್ ಶಾ ಅವರು ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ಮಹಿಳಾ ಕ್ರಿಕೆಟಿಗರಿಗೆ ಮೂರು ಸ್ವರೂಪಗಳಲ್ಲಿ ಅವರ ಪುರುಷರ ತಂಡಗಳ ಆಟಗಾರರಿಗೆ ನೀಡಲಾಗುವ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುವುದು ಎಂದು ಘೋಷಿಸಿದರು.

10 / 11
ಕಾಮನ್​ವೆಲ್ತ್​ನಲ್ಲಿ ಕಮಾಲ್: ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. ಈ ವರ್ಷ ಭಾರತದ ಕ್ರೀಡಾಪಟುಗಳು ಒಟ್ಟು 61 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಇದರಲ್ಲಿ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳು ಸೇರಿವೆ.

11 / 11

Published On - 10:59 pm, Sun, 25 December 22

Follow us
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ

ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ

ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್

ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ

ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ

ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ

ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ

ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ

ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು

ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್